Advertisement
ಅಂಥರ ಸಾಲಿನಲ್ಲಿ ನಿಲ್ಲುವ ಕಾರ್ಸನ್ ಪಿಕೆಟ್ ಮೂಲತಃ ಅಮೆರಿಕ ದೇಶದವರು. ಫುಟ್‌ಬಾಲ್ ಆಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.
Related Articles
ಹುಟ್ಟುತ್ತಲೇ ಎಡಗೈ ಇಲ್ಲದೇ ಜನಿಸಿದ ಕಾರ್ಸಲ್ ಫುಟ್‌ಬಾಲ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕ್ರೀಡಾ ಲೋಕದಲ್ಲಿ ಬೆಳೆಯುತ್ತಿರುವ ಅರಳು ಪ್ರತಿಭೆ. ಆಕೆ ತನ್ನಲ್ಲಿ ನ್ಯೂನತೆ ಇದೆ ತಾನು ಅಸಹಾಯಕಳು ಎಂದು ಕೈ ಕಟ್ಟಿ ಕುಳಿತವಳಲ್ಲ. ಅವಕಾಶವನ್ನು ಸೃಷ್ಟಿಸಿಕೊಂಡು ಉತ್ಸಾಹದ ಚಿಲುಮೆಯಾಗಿ ಇತರರಿಗೆ ಸ್ಪೂರ್ತಿಯ ದೀಪವಾಗಿ ತನ್ನ ಬದುಕನ್ನು ಬೆಳಗಿಸಿಕೊಂಡ ದಿಟ್ಟ ಆಟಗಾರ್ತಿ. ಕಾಲೇಜು ದಿನಗಳಲ್ಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
Advertisement
ಪ್ರೇರಣಾಶಕ್ತಿ ಈ ಕ್ರೀಡಾಪಟುಈ ಕಾರ್ಸಲ್ ಜೋಸೆಫ್ ಎಂಬ ಒಂದು ಪುಟ್ಟ ಮಗುವಿಗೆ ಆದರ್ಶ ವ್ಯಕ್ತಿಯಾಗಿದ್ದಾರೆ. ಜೋಸೆಫ್ ಕೂಡ ಹುಟ್ಟುವಾಗಲೇ ತನ್ನ ಎಡಗೈ ಕಳೆದುಕೊಂಡಿದ್ದ ಮಗು. ಆತನಿಗೆ ತನ್ನಂತೆ ಕಾಣುವ ಕ್ರೀಡಾ ತಾರೆ ಕಾರ್ಸಲ್ ಎಲ್ಲಿಲ್ಲದ ಅಚ್ಚು ಮೆಚ್ಚು. ಈ ಹಿನ್ನೆಲೆ ಕಳೆದ ತಿಂಗಳು ಪಂದ್ಯವೊಂದನ್ನು ನೋಡಲು ಜೋಸೆಫ್ ತನ್ನ ಇಷ್ಟ ದೇವತೆ ಕಾರ್ಸ್‌ಲ್‌ರನ್ನು ಭೇಟಿಯಾಗಿದ್ದರು. ಮಾತ್ರವಲ್ಲದೇ ಎಡಗೈ ಇಲ್ಲದ ಇಬ್ಬರೂ ಪರಸ್ಪರ ಕೈಕುಲುಕಿಕೊಂಡಿದ್ದಾರೆ. ಇನ್ನು ಆ ಎರಡು ವರ್ಷದ ಪೋರನ ಅಪ್ಪಟ ಪ್ರೀತಿಗೆ ಮಾರಿಹೋಗಿರುವ ಕಾರ್ಸಲ್ ಕ್ರೀಡಾಂಗಣದಲ್ಲಿ ಆ ಮಗುವನ್ನು ಮುದ್ದಾಡಿದ್ದಾರೆ. ಆ ಮಗುವಿನ ಪೋಷಕರು ಕಾರ್ಸಲ್ ಪಿಕೆಟ್‌ರೊಂದಿಗೆ ಮಗು ಕೈ ಕುಲುಕುವ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸಾವಿರಾರು ಕ್ರೀಡಾಭಿಮಾನಿಗಳಿದ್ದ ಕ್ರೀಡಾಂಗಣ ಇಂತಹ ಒಂದು ಹೃದಯ ಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಎಲ್ಲರ ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕುತ್ತಿತ್ತು. – ರಾಧಿಕಾ, ಕುಂದಾಪುರ