Advertisement

Invitation: ಉಡುಗೊರೆ ಬೇಡ ಮೋದಿಗೆ ಮತ ನೀಡಿ… ಮದುವೆ ಆಮಂತ್ರಣದಲ್ಲೊಂದು ಚುನಾವಣೆ ಪ್ರಚಾರ

12:19 PM Jan 30, 2024 | Team Udayavani |

ಚಿಕ್ಕಮಗಳೂರು: ಮದುವೆ ಆಮಂತ್ರಣ ಪತ್ರಿಕೆಯನ್ನು ಬಗೆ ಬಗೆಯ ವಿನ್ಯಾಸದಲ್ಲಿ ಮುದ್ರಿಸುವುದನ್ನು ನಾವು ಕಂಡಿದ್ದೇವೆ, ಕೆಲವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಬರಹಗಳನ್ನು ಬರೆಯುವ ಮೂಲಕ ಆಮಂತ್ರಣ ಪತ್ರಿಕೆಯನ್ನು ವಿಶೇಷವಾದ ರೀತಿಯಲ್ಲಿ ಮುದ್ರಿಸುತ್ತಾರೆ ಅದರಂತೆ ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಮತ ನೀಡುವಂತೆ ಕೇಳಿಕೊಂಡಿದ್ದಾರೆ.

Advertisement

ಶಶಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿರುವ ಶಶಿ ಅವರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು ವರರಿಗೆ ಉಡುಗೊರೆ ಬೇಡ ಬದಲಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಮತನೀಡಿ, ಮಕ್ಕಳ ಭವಿಷ್ಯ ಪ್ರಧಾನಿ ಮೋದಿಯಿಂದ ಮಾತ್ರ ಸುಭದ್ರ, ಅದುವೇ ವಧು ವರರಿಗೆ ನೀಡುವ ದೊಡ್ಡ ಉಡುಗೊರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Ayodhya: ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಹಾಜರಾದ ಇಮಾಮ್‌ ಗೆ ಜೀವ ಬೆದರಿಕೆ, ಫತ್ವಾ ಜಾರಿ

Advertisement

Udayavani is now on Telegram. Click here to join our channel and stay updated with the latest news.

Next