Advertisement
ಹಳ್ಳಿಹೊಳೆ ಗ್ರಾ. ಪಂ. ಮಾಜಿ ಅಧ್ಯಕ್ಷ ರಾಮ ನಾಯ್ಕ, ನಾಗಪ್ಪ ಪೂಜಾರಿ, ರಾಜು ಪೂಜಾರಿ, ಶಂಕರನಾರಾಯಣ ಚಾತ್ರ, ಸ್ಥಳೀಯ ಮುಖಂಡರಾದ ಚಕ್ರೇಶ್ ಯಡಿಯಾಳ ಅವರು ಗ್ರಾಮ ಪಂಚಾಯತ್ ವಿಂಗಡನೆ ಮತ್ತು ಬೈಂದೂರು ತಾಲೂಕಿಗೆ ಸೇರ್ಪಡೆಯಿಂದಾಗುವ ತೊಂದರೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.
Related Articles
Advertisement
ಗ್ರಾಮಸ್ಥರ ಅಹವಾಲುಗಳಿಗೆ ಜಿ. ಪಂ. ಸದಸ್ಯ ರೊಹಿತ್ ಕುಮಾರ ಶೆಟ್ಟಿ ಉತ್ತರಿಸಿ, ಈ ಗೊಂದಲ ಪರಿಹಾರಕ್ಕಾಗಿ ಕ್ಷೇತ್ರ ಶಾಸಕರ ಹಾಗೂ ಸಚಿವರ ಗಮನಕ್ಕೆ ತರಲಾಗುವುದು. ಆ ಮೂಲಕ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವ ಬಗ್ಗೆ ತಿಳಿಸಿದರು.
ಗ್ರಾ. ಪಂ. ಅಧ್ಯಕ್ಷೆ ಭಾಗೀರಥಿ ಅಧ್ಯಕ್ಷತೆ ವಹಿಸಿದರು.ಉಪಾಧ್ಯಕ್ಷೆ ವಿದ್ಯಾಶ್ರೀ, ಸದಸ್ಯರಾದ ದಿನೇಶ್ ಯಡಿಯಾಳ, ಶಿವರಾಮ ಪೂಜಾರಿ, ರಾಘವೇಂದ್ರ ನಾಯ್ಕ, ಮಾಧವ ಶೆಣೈ, ಶ್ರೀಕರ್ ನಾಯ್ಕ, ಅಭಿವೃದ್ಧಿ ಅಧಿಕಾರಿ ಸುದರ್ಶನ್ ಮೊದಲಾದವರು ಉಪಸ್ಥಿತರಿದ್ದರು.ಗ್ರಾಮಸ್ಥರು ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.
ಹೋರಾಟದ ಎಚ್ಚರಿಕೆಹಳ್ಳಿಹೊಳೆ ಗ್ರಾಮ ಪಂಚಾಯತ್ ಕಮಲಶಿಲೆ ಹಾಗೂ ಹಳ್ಳಿಹೊಳೆ ಎರಡು ಗ್ರಾಮಗನ್ನೊಳಗೊಂಡಿದೆ. ಕುಂದಾಪುರ ತಾಲೂಕಿನಲ್ಲಿದ್ದ ಪಂಚಾಯತ್‌ನ್ನು ಬೈಂದೂರು ತಾಲೂಕಿಗೆ ಸೇರ್ಪಡೆಗೊಳ್ಳಿಸುವ ಮೂಲಕ ನಕ್ಸಲ್ ಪೀಡಿತ ಗ್ರಾಮಸ್ಥರ ಮೇಲೆ ಸರಕಾರ ಬರೆ ಎಳೆದಿದೆ. ಹಳ್ಳಿಹೊಳೆ ಗ್ರಾಮವನ್ನು ಬೈಂದೂರು ತಾಲೂಕಿಗೆ ಹಾಗೂ ಕಮಲಶಿಲೆ ಗ್ರಾಮವನ್ನು ಕುಂದಾಪುರ ತಾಲೂಕಿನಲ್ಲೆ ಉಳಿಸಿ, ಪಂಚಾಯತ್ ಇಬ್ಭಾಗವಾಗಿಸಿದೆ. ಇದರ ಜತೆಯಲ್ಲಿ ಈಗ ಕಮಲಶಿಲೆ ಗ್ರಾಮವನ್ನು ಹಳ್ಳಿಹೊಳೆ ಪಂಚಾಯತ್‌ನಿಂದ ಬೇರ್ಪಡಿಸಿ, ಆಜ್ರಿ ಗ್ರಾ. ಪಂ.ಗೆ ಸೇರ್ಪಡೆಗೊಳಿಸುವ ಹುನ್ನಾರ ನಡೆಯುತ್ತಿದೆ. ಬೈಂದೂರು ತಾಲೂಕಿಗೆ ಸೇರ್ಪಡೆಗೊಂಡ ಹಳ್ಳಿಹೊಳೆ ಗ್ರಾಮವನ್ನು ಕೈ ಬಿಡಬೇಕು. ಜತೆಯಲ್ಲಿ ಕಮಲಶಿಲೆ ಗ್ರಾಮವನ್ನು ಹಳ್ಳಿಹೊಳೆ ಪಂಚಾಯತ್‌ನಲ್ಲಿಯೇ ಉಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಆಗ್ರಹಿಸಿದ ಘಟನೆಯು ಹಳ್ಳಿಹೊಳೆ ಗ್ರಾ. ಪಂ.ನ ವಿಶೇಷ ಗ್ರಾಮಸಭೆಯಲ್ಲಿ ನಡೆಯಿತು.