Advertisement

ಸಂಪ್ರದಾಯದೊಂದಿಗೆ ಆರೋಗ್ಯಕ್ಕೆ ಉಪಕಾರಿ: ಆದಿತ್ಯ ಮುಕ್ಕಾಲ್ದಿ

07:55 AM May 15, 2018 | Karthik A |

ಪಾವಂಜೆ: ಚೇಳ್ಯಾರಿನ ಖಂಡಿಗೆ ಜಾತ್ರೆಯಲ್ಲಿ ಅಪ್ಪಟ ದೇಶೀಯ ಮೀನು ಸಿಗುವುದರಿಂದ ಇದಕ್ಕೆ ಹೊರಗೆ ಭಾರೀ ಬೇಡಿಕೆ ಇದೆ. ಜತೆಗೆ ಇದು ಆರೋಗ್ಯಕ್ಕೆ ಬಹಳಷ್ಟು ಉಪಕಾರಿಯಾಗಿದೆ. ತುಳುನಾಡಿನ ಸಂಪ್ರದಾಯದಲ್ಲಿ ಇಂತಹ ಆಚರಣೆಯಿಂದ ಭಕ್ತರು ಮುಕ್ತವಾಗಿ ಪಾಲ್ಗೊಳ್ಳುವುದರಿಂದ ಸಾಕಾರಗೊಂಡಿದೆ ಎಂದು ಚೇಳ್ಯಾರು ಗ್ರಾಮದ ಧರ್ಮರಸು ಕ್ಷೇತ್ರದ ಖಂಡಿಗೆಯ ಧರ್ಮದರ್ಶಿ ಆದಿತ್ಯ ಮುಕ್ಕಾಲ್ದಿ ಹೇಳಿದರು. ಹಳೆಯಂಗಡಿ ಬಳಿಯ ಪಾವಂಜೆಯ ಚೇಳ್ಯಾರಿನ ಖಂಡಿಗೆ ಜಾತ್ರೆಯ ಪ್ರಯುಕ್ತ ಮೀನು ಹಿಡಿಯುವ ಸಾಮೂಹಿಕ ಜಾತ್ರೆಗೆ ದೇಗುಲದ ಪ್ರಸಾದವನ್ನು ನಂದಿನಿ ನದಿಗೆ ಅರ್ಪಿಸಿ ಚಾಲನೆ ನೀಡಿ ಅವರು ಮಾತನಾಡಿದರು.

Advertisement

‘ಎರ್ಮಾಳ್‌ ಜಪ್ಪು- ಖಂಡೇವು ಅಡೆಪು’ ಎಂದೇ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಯಲ್ಲಿ ಜಾತಿ, ಮತ ಭೇದವಿಲ್ಲದೆ ಪಾಲ್ಗೊಳ್ಳುತ್ತಿರುವುದು ವಿಶೇಷ. ಈ ಹಿಂದೆ ಹಿಂದಿನ ರಾತ್ರಿಯೇ ದೂರ ದೂರದಿಂದ ಬಂದು ಸೇರಿರುವ ಜನರು ಮುಂಜಾನೆಯಿಂದಲೇ ಮೀನು ಹಿಡಿಯುತ್ತಿದ್ದರು. ಕಾಲ ಬದಲಾದಂತೆ ಈಗ ಪರಿವರ್ತನೆಯಾಗಿದೆ ಎಂದು ಅವರು ತಿಳಿಸಿದರು. ಮೀನು ಹಿಡಿಯುವ ಜನರು ತಮ್ಮ ಮಿತ್ರರೊಂದಿಗೆ, ಕುಟುಂಬದವರೊಂದಿಗೆ ಬಂದು ಮೀನುಗಳನ್ನು ಬಲೆಗೆ ಕೆಡವಿಕೊಂಡು ಸಿಕ್ಕ ಮೀನನ್ನು ಕೊಂಡೊಯ್ಯುತ್ತಾರೆ ಇನ್ನು ಕೆಲವರು ಸ್ಥಳೀಯವಾಗಿ ಮಾರಾಟಗಾರರಿಂದ ಖರೀದಿಸುತ್ತಾರೆ ಎಂದರು.

ಸ್ಥಳೀಯ ನಂದಿನಿ ಮಿತ್ರ ಮಂಡಳಿಯ ಸದಸ್ಯರು ಸುತ್ತಮುತ್ತ ಸಂಚಾರದ ವ್ಯವಸ್ಥೆಯನ್ನು ಹಾಗೂ ನದಿಯಲ್ಲಿ ಅಪಾಯದಲ್ಲಿ ಸಿಲುಕಿದಲ್ಲಿ ಅವರಿಗೆ ಸಹಾಯ ಮಾಡುವಲ್ಲಿ ತಮ್ಮ ಶ್ರಮ ವಹಿಸಿದ್ದರು. ಧ್ವನಿವರ್ಧಕದ ಮೂಲಕ ಆಗಾಗ ಎಚ್ಚರಿಕೆಯನ್ನು ನೀಡುತ್ತಿದ್ದರು.


ಮೀನಿನ ಮೆನು…

ಮೀನು ಹಿಡಿಯುವವರು ತಮ್ಮ ತಮ್ಮ ಕಂತ ಬಲೆಗಳಾದ ಗೋರ ಬಲೆ, ಬೀಸ ಬಲೆ, ಅಟ್ಟೆ ಬಲೆಯಲ್ಲಿ ಕೊಲೈತರು, ಇರ್ಪೆ, ಪಯ್ಯ, ಮಾಲ, ಕೇವಾಜೆ, ಮುಗುಡು, ಎಟ್ಟಿ, ಜೆಂಜಿ, ಕಾನೆ, ಸುದೇತ ನಂಗ್‌, ಮುಡೈ, ತೇಡೆ, ಮುಲಿತರು ಇನ್ನಿತರ ಅಪ್ಪಟ ಕರಾವಳಿ ನದಿಯ ಮೀನುಗಳು ಬಲೆಗೆ ಬೀಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next