Advertisement

ಸುಳ್ಯ: ದಕ್ಷಿಣ ಭಾರತದ ಅಪರೂಪದ ಹಾರುವ ಅಳಿಲು ಪತ್ತೆ

03:55 PM Oct 10, 2022 | Team Udayavani |

ಸುಳ್ಯ : ದಕ್ಷಿಣ ಭಾರತದ ಅಪರೂಪದ ಅಳಿಲು ಪ್ರಭೇದಗಳಲ್ಲಿ ಒಂದಾದ ಟ್ರಾವಂಕೂರು ಹಾರುವ ಅಳಿಲು (Travancore flying squirrel) ಸುಳ್ಯ ತಾಲೂಕಿನಲ್ಲಿ ಪತ್ತೆಯಾಗಿದೆ. ಇದು ನಿಶಾಚರಿ ಆಗಿದ್ದು ಅಪರೂಪಕ್ಕೆ ಕಾಣಸಿಗುತ್ತದೆ. ಪರಿಸರ ಸಂರಕ್ಷಕ ದೀಪಕ್‌ ಸುಳ್ಯ ಅವರ ತೋಟದಲ್ಲಿ ಇದು ಪತ್ತೆಯಾಗಿದೆ.

Advertisement

ಸ್ಥಳೀಯವಾಗಿ ಇದನ್ನು ದರಗು ಪಾಂಜ, ಚಿಕ್ಕ ಪಾಂಜ ಎಂದು ಕರೆಯುತ್ತಾರೆ. ಪಶ್ಚಿಮಘಟ್ಟದಲ್ಲಿ ಕಂಡುಬರುವ ಅಳಿವಿನಂಚಿನ ಪ್ರಾಣಿ ಪ್ರಭೇದಗಳಲ್ಲಿ ಇದೂ ಒಂದು. ಇದು ಸಾಮಾನ್ಯವಾಗಿ 32 ಸೆಂ.ಮೀ. ಉದ್ದ ಇರುತ್ತದೆ. ಮೃದುವಾದ, ಕೆಂಪು-ಕಂದು ಬಣ್ಣದ ಬೆನ್ನಿನ ತುಪ್ಪಳವನ್ನು ಹೊಂದಿರುತ್ತದೆ ಮತ್ತು ನಯ ಗೊಳಿಸಿದ ತಾಮ್ರದ ಬಣ್ಣವನ್ನು ಹೋಲುತ್ತದೆ. ಮುಂಗಾಲುಗಳು ರೆಕ್ಕೆಯ ಆಕಾರವನ್ನು ಹೊಂದಿರು ತ್ತವೆ ಎಂದು ಜೀವವೈವಿಧ್ಯ ಸಂಶೋಧಕರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬ್ರಹ್ಮಗಿರಿ ಅಭಯಾರಣ್ಯ ಮತ್ತು ಕೊಡಗಿನ ಮಾಕುಟ್ಟ ಅರಣ್ಯ ಹಾಗೂ ತ.ನಾಡು, ಕೇರಳಗಳಲ್ಲಿ ಇದನ್ನು ಈ ಹಿಂದೆ ಪತ್ತೆಹಚ್ಚಲಾಗಿತ್ತು.

ಇದನ್ನೂ ಓದಿ : ಮಂಗಳೂರು : ಪಾಠದ ಜತೆಗೇ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ!

Advertisement

Udayavani is now on Telegram. Click here to join our channel and stay updated with the latest news.

Next