ಚಾಮರಾಜನಗರ: ಮಹಾ ಶಿವರಾತ್ರಿಯಂದು ಪರಶಿವನ ಮೇಲೆ ಭಕ್ತರು ತೋರುವ ಭಕ್ತಿ ಅಪಾರವಾದುದು. ಒಂದೊಂದೆಡೆ ಒಂದೊಂದು ಆಚರಣೆ ನಡೆಯುತ್ತದೆ. ತಾಲೂಕಿನ ಹೆಗ್ಗೊಠಾರ ಗ್ರಾಮದ 6 ಕುಟುಂಬಗಳ ಜನರು ಶಿವರಾತ್ರಿಯಂದು ನಡೆಸುವ ಸೇವೆ ವಿಶಿಷ್ಟವಾದುದು.
ತಮ್ಮೂರಿನ ಶಿವಲಿಂಗದ ಅಭಿಷೇಕಕ್ಕೆ 40 ಕಿ.ಮೀ.ದೂರದ ಕಪಿಲಾ ನದಿಯ ನೀರನ್ನು ತಲೆ ಮೇಲೆ ಹೊತ್ತು ಬರಿಗಾಲಲ್ಲಿ ನಡೆದು ಬರುವ ಈ ಆಚರಣೆ ಕಠಿಣವಾದುದು. ಹೆಗ್ಗೊಠಾರ ಗ್ರಾಮದ ಆರು ಮನೆತನದ ತಲಾ ಒಬ್ಬೊಬ್ಬರು ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾನದಿಯಿಂದ ಬರಿಗಾಲಲ್ಲಿ ನಡೆದು ತಾಮ್ರದ ಬಿಂದಿಗೆಯಲ್ಲಿ ನೀರುಹೊತ್ತು ತಂದು ಗ್ರಾಮದ ಸಿದ್ದರಾಮೇಶ್ವರನ ಅಭಿಷೇಕಕ್ಕೆ ನೀಡುತ್ತಾರೆ.
ಗ್ರಾಮದ ಆರು ಮನೆಗಳ ಒಬ್ಬೊಬ್ಬ ಪುರುಷರು ಈ ರೀತಿ ಕಪಿಲಾನದಿ ಯಿಂದ ನೀರು ಹೊತ್ತು ತಂದುಅಭಿಷೇಕದ ಕೈಂಕರ್ಯ ಸಲ್ಲಿಸು ತ್ತಾರೆ.ಈ ಬಾರಿ ಐದು ಕುಟುಂಬದ ಮುಖ್ಯಸ್ಥರು ತಲೆಯ ಮೇಲೆ ಕಪಿಲಾ ನದಿಯನೀರನ್ನು ಹೊತ್ತು ಬೇಸಿಗೆಯ ಬಿಸಿಲಿ ನಲ್ಲಿ 40 ಕಿ.ಮೀ. ದೂರ ಬರಿಗಾಲಲ್ಲಿ ನಡೆದು ತಮ್ಮೂರಿಗೆ ಬಂದು ಶಿವನ ಅಭಿಷೇಕಕ್ಕೆ ಕಪಿಲೆಯನ್ನು ತಂದರು.
ಗ್ರಾಮದ ಶಿವಮಲ್ಲಪ್ಪ, ಕುಮಾರ, ರಾಜು, ಶಾಂತಪ್ಪ, ಕುಮಾರಅವರು ಬೆಳಗ್ಗೆ ಆರು ಗಂಟೆಗೆ ನಂಜನಗೂಡು ಮೂಲಕ ನಗರ್ಲೆಗ್ರಾಮಕ್ಕೆ ತೆರಳಿದರು. ಅಲ್ಲಿರುವ ಕಪಿಲಾ ನದಿ ತಟಕ್ಕೆ ಹೋಗಿ ಸ್ನಾನ ಮಾಡಿ, ತಾಮ್ರದ ಕೊಡಗಳನ್ನು ಬೆಳಗಿ, ಅದಕ್ಕೆ ವಿಭೂತಿ, ಅರಿಶಿನ ಕುಂಕುಮ ಹಚ್ಚಿ, ಕಾಯಿ ಒಡೆದು ಪೂಜೆ ಮಾಡಿದರು. ಬಳಿಕ ಕಪಿಲೆ ಯನ್ನು ಬಿಂದಿಗೆಗೆ ತುಂಬಿಕೊಂಡು ತಲೆಮೇಲೆ ಹೊತ್ತು 10 ಕಿ.ಮೀ. ದೂರ ನಡೆದು ಆನಂಬಳ್ಳಿ ತಲುಪಿ, ಅಲ್ಲಿ ಪದ್ಧತಿಯಂತೆ ಮನೆಯೊಂದ ರಲ್ಲಿ ಕೊಡಗಳನ್ನು ಇಳಿಸಿ, ಉಪಾಹಾರ ಸೇವಿಸಿ ಬಳಿಕ ತಲೆ ಮೇಲೆ ಕೊಡ ಹೊತ್ತು ಹೊರಟರು.
ಅಲ್ಲಿಂದ ದೇವನೂರಿಗೆ ಬಂದು ಅಲ್ಲಿನ ಗುರುಮಲ್ಲೇಶ್ವರ ಮಠದಲ್ಲಿಕೊಡವನ್ನು ಇಳಿಸಿ, ಪ್ರಸಾದ ಸೇವಿಸಿ ಮತ್ತೆ ಕೊಡ ಹೊತ್ತು, ಕೌಲಂದೆ,ಹೆಗ್ಗವಾಡಿ, ಬೆಂಡರವಾಡಿಗೆ ಬಂದರು. ಬೆಂಡರವಾಡಿ ಕೆರೆಯ ಬಳಿಸ್ವಲ್ಪ ವಿಶ್ರಾಂತಿ ಪಡೆದು ತಮ್ಮೂರಿಗೆ ಸಂಜೆಯ ಇಳಿಹೊತ್ತಿನಲ್ಲಿ ತಲುಪಿದರು. ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಕೊಡ ಇಳಿಸಿದರು. ಇವರಜೊತೆಗೆ ಗ್ರಾಮದ ಬಾವಿಯಿಂದ 101 ಬಿಂದಿಗೆ ನೀರುಹೊತ್ತುಕೊಂಡು ಜನರು ಮೆರ ವಣಿಗೆ ಮೂಲಕದೇವಸ್ಥಾನಕ್ಕೆ ತೆರಳಿ, ಸಿದ್ದ ರಾಮೇಶ್ವರನ ಸನ್ನಿಧಿಯಲ್ಲಿ ಕಪಿಲಾ ಜಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಪಿಲಾ ಜಲದೊಂ ದಿಗೆಬಿಲ್ವಪತ್ರೆಯನ್ನು ಹಾಕಿ ಸಿದ್ದರಾಮೇಶ್ವರನಿಗೆ ರಾತ್ರಿಯಿಡೀ 5 ಬಾರಿಅಭಿಷೇಕ ನಡೆಸಿ ಪೂಜೆ ಸಲ್ಲಿಸಿದರು.ಇಡೀ ರಾತ್ರಿ ಗ್ರಾಮಸ್ಥರೆಲ್ಲ ಒಟ್ಟಾಗಿದೇವಸ್ಥಾನದಲ್ಲಿ ಜಾಗರಣೆ ನಡೆಸಿದರು.