Advertisement

Sirsi: ಶಿಕ್ಷಕರು, ಉದ್ಯೋಗಿಗಳ ವಿಶೇಷ ಸೇವೆ; ಕಲೆಗಳ‌ ಮೂಲಕ ಸಮಾಜಮುಖಿ ಪ್ರೇರಣೆ

11:43 AM Dec 01, 2023 | Team Udayavani |

ಶಿರಸಿ: ಖಾಲಿ ಗೋಡೆಗಳ‌ ಮೇಲೆ ಚಿತ್ತಾರಗಳಿದ್ದರೆ ಎಷ್ಟೊಂದು ಸೊಗಸು. ಭಾರತೀಯ ನೆಲದ ಅನೇಕ ಕಲಾತ್ಮಕ ಸಂಗತಿಗಳನ್ನು ಉಳಿಸಿ ಬೆಳಸಲು ಈ ಕಲಾವಿದರ ತಂಡ ಕೆಲಸ ಮಾಡುತ್ತಿದೆ.

Advertisement

ವೃತ್ತಿಯಲ್ಲಿ ಶಿಕ್ಷಕರಾಗಿ, ಕಲಾವಿದರಾಗಿ, ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿರುವ  ಆರು ಕಲಾವಿದರ ತಂಡ ಶಿರಸಿ ಸೀಮೆಯ ಹಲವಡೆ ಇಂಥ ಕೆಲಸ ಮಾಡುತ್ತಿದ್ದಾರೆ.

ಮನೆಯ ಒಳಗಿನ ಹಾಗೂ ಹೊರಗಿನ ಗೋಡೆಗಳ, ಕಾಂಪೌಂಡ್ ಮೇಲೆ ಗ್ರಾಮೀಣ ಬದುಕು, ಕ್ರೀಡೆ, ಸಾಂಸ್ಕೃತಿಕ ಸಂಗತಿಗಳು ಅರಳುತ್ತಿವೆ. ವರ್ಲಿ, ಮಂಡಲ, ರೇಖಾ ಚಿತ್ರ, ಸ್ಮರಣ ಚಿತ್ರ, ಸರಳ ಗೈ ಚಿತ್ರಗಳು ಇಲ್ಲಿ ಬೆಳಗುತ್ತಲಿವೆ‌.

ಗೋಡೆ ಚಿತ್ತಾರದಲ್ಲಿ ಮೂಲ ಭಾರತದ ಜಾನಪದ ಕಲೆಗಳು, ಗ್ರಾಮೀಣ ಬುಡಕಟ್ಟು ಜೀವನ ದೃಶ್ಯ ಅನಾವರಣವನ್ನು ಕಲೆಯಲ್ಲಿ ಇಲ್ಲಿ ಎದ್ದು ಬರುವಂತೆ ಮಾಡುತ್ತಿದ್ದಾರೆ.

ಅಂಬಾರಿ, ಡೊಳ್ಳು ಕುಣಿತ, ಕಂಸಾಲೆ, ಮೆರವಣಿಗೆ, ಬೇಡರ ವೇಷ, ಪಲ್ಲಕ್ಕಿ, ವೀರಗಾಸೆ, ಗ್ರಾಮೀಣ ಕಸುಬುಗಳು, ಬೆತ್ತದ ಬುಟ್ಟಿ ಹಣಿಯುವದು, ಓಲಗ, ಅಡಿಕೆ ತೋಟ, ಭತ್ತದ ಗದ್ದೆ, ಪರಿಸರ, ವನ್ಯಜೀವಿ ಹೀಗೆ ಅನೇಕ ಸಂಗತಿಗಳು ರೇಖೆಗಳಲ್ಲಿ ಕಾಣುತ್ತಲಿವೆ.

Advertisement

ಶಿರಸಿ, ಸಿದ್ದಾಪುರ, ಕುಮಟಾ, ಹಾವೇರಿ ಜಿಲ್ಲೆಯ ಬೇರೆ ಬೇರೆ ಮನೆ, ರೆಸಾಲ್ಟಗಳಲ್ಲಿ, ಶಾಲೆ, ರಂಗ ಮಂದಿರದಲ್ಲಿ ನೂರಕ್ಕೂ ಅಧಿಕ ಕಡೆ ಕಲಾವರಣಗೊಳಿಸಿದ್ದಾರೆ.

ಈ ತಂಡದಲ್ಲಿ ಇರುವ ವೃತ್ತಿ ನಿರತರು ತಮ್ಮ ಬಿಡುವಿನ ವೇಳೆಯಲ್ಲಿ ಕಲಾ ಕೈಂಕರ್ಯ ನಡೆಸುತ್ತಿದ್ದಾರೆ. ಈ ಬಳಗದಲ್ಲಿ ವದ್ದಲ ಶಾಲಾ ಶಿಕ್ಷಕ, ಕಲಾವಿದ ಮನೋಜ ಪಾಲೇಕರ್, ನೀರ್ನಳ್ಳಿ ಹೈಸ್ಕೂಲ್ ಮುಖ್ಯಾಧ್ಯಾಪಕ, ಕಲಾವಿದ ಕಿಶೋರ ನೇತ್ರೇಕರ್, ಎಂಎಂಎಸ್ ಕಾಲೇಜಿನ ಅಡುಗೆ  ಸಿಬಂದಿ ಸುರೇಶ ಭಟ್ಟ, ಆರ್ ಎನ್ ಶೆಟ್ಟಿಯಲ್ಲಿ ಕೆಲಸ ಮಾಡುವ ಅರ್ಜುನ ಮುರುಡೇಶ್ವರ, ವಿದ್ಯಾರ್ಥಿ ರೇಷ್ಮಾ ಹುಳ್ಳಣ್ಣವರ್, ಕಲಾವಿದ ಗಣೇಶ ಪಾಲೇಕರ್ ಇತರರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next