Advertisement
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಎನ್.ಎಸ್.ಬೋಸರಾಜು ಪ್ರಶ್ನೆಗೆ ಉತ್ತರಿಸಿದ ಅವರು, “2015-16ನೇ ಸಾಲಿನಲ್ಲಿ ಕೆಪಿಎಸ್‌ಸಿಯಿಂದ ನಡೆದ ನೇಮಕಾತಿಯಲ್ಲಿ ಆಯ್ಕೆಯಾದ 713 ತಜ್ಞ ವೈದ್ಯರಲ್ಲಿ 252 ತಜ್ಞರು, 324 ವೈದ್ಯಾಧಿಕಾರಿಗಳಲ್ಲಿ 256 ಹಾಗೂ 85 ದಂತ ವೈದ್ಯರಲ್ಲಿ 83 ದಂತ ಆರೋಗ್ಯಾಧಿಕಾರಿಗಳು ಕರ್ತವ್ಯಕ್ಕೆಹಾಜರಾಗಿದ್ದಾರೆ. ತಮಗೆ ಅನುಕೂಲವಾದ ಸ್ಥಳಕ್ಕೆ ನಿಯೋಜಿಸಿದರಷ್ಟೇ ಸೇವೆಗೆ ಬರುತ್ತಿರುವುದರಿಂದ ಕೊರತೆ ತಲೆದೋರಿದೆ.
ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಶನಿವಾರದೊಳಗೆ ಭರ್ತಿ ಮಾಡಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ 22 ತಜ್ಞ ವೈದ್ಯರ ಕೊರತೆಯಿದ್ದು, ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಹೈದರಾಬಾದ್ ಕರ್ನಾಟಕ ಭಾಗದ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯರು, ತಜ್ಞರ ನಿಯೋಜನೆಗೆ ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.