ಸುರಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆಗಳಿಗೆ ವಿಶೇಷವಾದ ಗೌರವವಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿವೆ. ಹೀಗಾಗಿ ಸಾಮಾಜಿಕ ಕಳಕಳಿಯನ್ನಿಟುಕೊಂಡು ಹೋರಾಟ ಮಾಡಿದಲ್ಲಿ ಸಂಘಟನೆಗಳ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತದೆ ಎಂದು ದೇವಾಪುರ ಜಡಿಶಾಂತ ಲಿಂಗೇಶ್ವರ ಮಠದ ಶಿವಮೂರ್ತಿ ಶಿವಾಚಾರ್ಯು ಸ್ವಾಮೀಜಿ ಹೇಳಿದರು.
ಪತ್ರಿಕಾ ಭವನದಲ್ಲಿ ಗುರುವಾರ ಕರ್ನಾಟಕ ದಲಿತ ಹಿಂದುಳಿದ, ಅಲ್ಪ ಸಂಖ್ಯಾತರ ಹೋರಾಟ ಸಮಿತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಿತಿ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಘಟಕದ ಗೌರವಾಧ್ಯಕ್ಷ ಮಲ್ಲಯ್ಯ ಕಮತಗಿ ಮಾತನಾಡಿದರು. ಪೇಠ ಅಮ್ಮಾಪುರ ರಾಮಲಿಂಗೇಶ್ವರ ಮಠದ ಶ್ರೀರಾಮ ಶರಣುರು ಸಾನ್ನಿಧ್ಯ ವಹಿಸಿದ್ದರು. ಇದೇ ವೇಳೆ ರಾಜ್ಯ ಸಮಿತಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಅವರನ್ನು ಸನ್ಮಾನಿಸಲಾಯಿತು.
ಮಲ್ಲಯ್ಯ ಕಮತಗಿ ಗೌರವಾಧ್ಯಕ್ಷ, ವೆಂಕೋಬ ದೊರೆ ರಾಜ್ಯಾಧ್ಯಕ್ಷ, ನಾಗಣ್ಣ ಕಲ್ಲದೇವನಹಳ್ಳಿ ಉಪಾಧ್ಯಕ್ಷ, ಭೀಮರಾಯ ಸಿಂದಗೇರಿ ಪ್ರಧಾನ ಕಾರ್ಯದರ್ಶಿ, ನಿಂಗಣ್ಣ ದೇವರಗೋನಾಲ ಸಂಘಟನಾ ಕಾರ್ಯದರ್ಶಿ, ಮಾಳಪ್ಪ ಕಿರದಳ್ಳಿ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು.