ಮಸ್ಕಿ: ಸುಕೋ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ತನ್ನದೆ ಆದ ಒಂದು ವಿಶೇಷ ಸ್ಥಾನ ಸಂಪಾದಿಸಿದೆ. ಹೊಸ ಹೊಸ ಯೋಜನೆ ಹಾಗೂ ಯೋಚನೆ ಮಾಡಿ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಹಳೆ ಕೋಟೆ ವೀರಭದ್ರೇಶ್ವರ ಕಾಂಪ್ಲೆಕ್ಸ್‌ನಲ್ಲಿ ಸುಕೋ ಬ್ಯಾಂಕ್‌ನ 19ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. ಸುಕೋ ಬ್ಯಾಂಕ್ ಏಳಿಗೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಅವರ
ಕೊಡುಗೆ ಅಪಾರ ಎಂದು ಹೇಳಿದರು.
ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಮಾತನಾಡಿ, ಇದುವರೆಗೂ ಸುಕೋ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತ ಸಾಗುತ್ತಿದೆ. ಇಲ್ಲಿಯವರೆಗೆ 18 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ಹೊಸದಾಗಿ ಇನ್ನೂ 10 ಶಾಖೆ ತೆರೆಯಲು ಭಾರತೀಯ ರಿಸರ್ವ ಬ್ಯಾಂಕ್ ಅನುಮತಿ ನೀಡಿದೆ. ಕಳೆದ 24 ವರ್ಷಗಳ ಹಿಂದೆ ಸಿಂಧನೂರಿನಲ್ಲಿ ಪ್ರಾರಂಭವಾದ ಸುಕೋ ಬ್ಯಾಂಕ್ ಗಣನೀಯ ಸಾಧನೆ ಮಾಡಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಪ್ರಧಾನಿ ಆವಾಸ್ ಯೋಜನೆಯಲ್ಲಿ ಗೃಹ ನಿರ್ಮಾಣ ಹಾಗೂ ಮನೆಗಳ ದುರಸ್ತಿಗೆ ಸುಕೋ ಬ್ಯಾಂಕ್ ಸಾಲ ನೀಡುತ್ತಿದೆ. ಈ ಯೋಜನೆ ಅಳವಡಿಸಿಕೊಂಡ ರಾಜ್ಯದ ಮೊದಲ ಸಹಕಾರಿಯಾಗಿದೆ ಎಂದು ಹೇಳಿದರು. ಬ್ಯಾಂಕ್ ಉಪಾಧ್ಯಕ್ಷ ಮುರುಳಿಧರ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಗ್ನಿಹೋತ್ರಿ, ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು, ಸಂಸ್ಥೆ ಪದಾಧಿ ಕಾರಿಗಳು, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.