ಶ್ರೀನಿವಾಸಪುರ: ಭಾರತ ಸೇರಿ ಮುಂದುವರಿದ ದೇಶಗಳು ಕೊವಿಡ್-19ಗೆ ತತ್ತರಿಸಿವೆ. ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಧಾರಗಳಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್. ವೇಣುಗೋಪಾಲ್ ಅಭಿಪ್ರಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ 74 ಸಾವಿರ ಮಂದಿಗೆ ಸೋಂಕು ಹರಡಿದೆ. ಇದರಲ್ಲಿ 2500 ಮಂದಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಹರಡಿರುವ ಸೋಂಕಿನಲ್ಲಿ ಶೇ.50 ಮಂದಿ ಚೇತರಿಕೆ ಹೊಂದುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರಗಳಿಂದ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಸೋಂಕು ಪರೀಕ್ಷೆ ಮಾಡಲು ಇದ್ದ 3 ಲ್ಯಾಬ್ ಅನ್ನು 750ಕ್ಕೆ ಏರಿಸಲಾಯಿತು.
ಅದೇ ರೀತಿ ಪಡಿತರದಾರರಿಗೆ ತಲಾ 10 ಕೆ.ಜಿ. ಅಕ್ಕಿ, ಉಜ್ವಲ ಯೋಜನೆಯಲ್ಲಿ 3 ಸಿಲಿಂಡರ್ ಉಚಿತವಾಗಿ ನೀಡಿದ್ದು, ಜನಧನ್, ಕಿಸಾನ್, ಆಶಕ್ತರಿಗೆ ಮಾಶಾಸನ ಸೇರಿ ಅನೇಕ ಸಮುದಾಯಗಳಿಗೆ ಪ್ಯಾಕೇಜ್ ನೀಡಿದ ಪ್ರಧಾನಿಗಳ ಕ್ರಮವನ್ನು ಅಭಿನಂದಿಸುತ್ತೇನೆ ಎಂದರು. ಕೊವಿಡ್-19ನಿಂದ ಸಂಕಷ್ಟದಲ್ಲಿರುವ ಜನರನ್ನು ಉದ್ದೇಶಿಸಿ ಪ್ರಧಾನಿ ಈಗಾಗಲೇ 5 ಬಾರಿ ಭಾಷಣ ಮಾಡಿದ್ದಾರೆ.
ಅಲ್ಲದೇ, ದೇಶದ ಭವಿಷ್ಯ ದೃಷ್ಟಿ ಯಿಂದ ಜನರಿಗೆ ಸಮಸ್ಯೆಗಳಿರದಂತೆ ಸ್ವಾಲಂಬನೆ ಭಾರತಕ್ಕಾಗಿ 2020ನೇ ಸಾಲಿಗೆ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿದ್ದಾರೆಂದರು. ಗೋಷ್ಠಿ ಯಲ್ಲಿ ಎ.ಎನ್.ಜಯರಾಮರೆಡ್ಡಿ, ಬಿಜೆಪಿ ಶಿವಣ್ಣ, ಲಕ್ಷ್ಮಣಗೌಡ, ಶೋಕರೆಡ್ಡಿ, ವೆಂಕಟೇಗೌಡ, ಕೊಟ್ರಗೂಳಿ ನಾರಾಯಣಸ್ವಾಮಿ, ಕೆ.ನಾಗರಾಜಪ್ಪ, ಮುನಿವೆಂಕಟರೆಡ್ಡಿ, ರಾಮಾಂಜಿ ಇದ್ದರು.