Advertisement
ಇನ್ನೇನು ಹಬ್ಬಗಳ ಸೀಸನ್ ಆರಂಭವಾಗುತ್ತದೆ. ಕೆಲ ದಿನಗಳಲ್ಲಿಯೇ ಯುಗಾದಿ ಹಬ್ಬ ಬರಲಿದ್ದು, ಈ ಹಬ್ಬ ಸಂಭ್ರಮಕ್ಕೆ ಒಂದೆಡೆ ಕೊರೊನಾ ಕರಿನೆರಳು ಬೀರಿದೆ. ಆದರೂ, ಹಬ್ಬದ ಸವಿ ಸವಿಯುವ ಮಂದಿ ಶಾಪಿಂಗ್ ಮಾಡುವುದರಲ್ಲೂ ಬ್ಯುಸಿ ಇರುತ್ತಾರೆ. ಅದಕ್ಕೆಂದೇ ಎಲೆಕ್ಟ್ರಾನಿಕ್ ವಸ್ತುಗಳು, ಆಟೋಮೊಬೈಲ್ ವಸ್ತುಗಳಲ್ಲಿ ಹಲವಾರು ಆಫರ್‌ಗಳಿವೆ. ಇನ್ನು ಆನ್‌ಲೈನ್ ಶಾಪಿಂಗ್ ತಾಣಗಳಲ್ಲಂತೂ ಧಮಾಕಾ ಆಫರ್‌ಗಳು ಈಗಾಗಲೇ ಆರಂಭವಾಗಿದೆ.
ಯುಗಾದಿ ಹಬ್ಬದ ಪ್ರಯುಕ್ತ ಪ್ರಮುಖ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಅಮೇಜಾನ್ ಸೇರಿದಂತೆ ವಿವಿಧ ತಾಣಗಳಲ್ಲಿ ಆಫರ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮೂಲಬೆಲೆಗಿಂತ ಶೇ.30, 40 ರಷ್ಟು ಕಡಿಮೆ ಬೆಲೆ, ಉಚಿತ ಆನ್‌ಲೈನ್ ಡೆಲಿವೆರಿ, ಎಕ್ಸ್‌ಚೇಂಜ್ ಆಫರ್, ಶೇ.0 ಬಡ್ಡಿದರದಲ್ಲಿ ಇಎಂಐ, ಮತ್ತು ಡೀಲ್ ಆಫ್ ದಿ ಡೇ ಎಂದು ಕೊಂಡುಕೊಳ್ಳುವ ವಸ್ತುಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ.
Related Articles
Advertisement
ಸಾಂಪ್ರದಾಯಿಕ ದಿರಿಸುಹಬ್ಬದಂದು ಸಾಂಪ್ರದಾಯಿಕ ಬಟ್ಟೆ ದಿರಿಸು ಸಾಮಾನ್ಯ. ಇದೇ ಕಾರಣಕ್ಕೆ ಪಂಚೆಯಲ್ಲಿಯೂ ವಿವಿಧ ಮಾದರಿಗಳು ಮಾರುಕಟ್ಟೆಗೆ ಬಂದಿವೆ. ಸೊಂಟದ ಸುತ್ತ ವೆಲೊ ಅಳವಡಿಸಿದ ಪಂಚೆಗಳನ್ನು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ದೊಡ್ಡವರು ಮಾತ್ರವಲ್ಲದೆ, ಮಕ್ಕಳು ಕೂಡ ಯುಗಾದಿ ಹಬ್ಬದ ದಿನ ಪಂಚೆ ಧಿರಿಸಿ ಸಂಭ್ರಮಿಸುತ್ತಾರೆ. ಬಿಳಿ ಪಂಚೆಗೆ ಮ್ಯಾಚಿಂಗ್ ಅಂಗಿಯನ್ನು ಧರಿಸಬೇಕು. ಸಾಮಾನ್ಯವಾಗಿ ರೇಷ್ಮೆ ಅಂಗಿ, ಜುಬ್ಬ, ಕಾಟನ್ ಅಂಗಿಗಳು ಸರಿ ಹೊಂದುತ್ತವೆ. ಹಬ್ಬದ ಸಮಯದಲ್ಲಿ ನಾವು ಕೂಡ ಮಿರ ಮಿರ ಮಿಂಚಬೇಕು ಎಂಬ ಖುಷಿ ಮಕ್ಕಳಲ್ಲಿಯೂ ಇರುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮಕ್ಕಳ ಧೋತಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಮಕ್ಕಳಿಗೆ ಹಬ್ಬದ ಸಮಯದಲ್ಲಿ ರೇಷ್ಮೆ ಜರಿ ಅಥವಾ ಅಂಚುಳ್ಳ ಗಾಢ ಧೋತಿಗೆ ಎಂಬ್ರಾಯ್ಡ್ ರಿ, ಸ್ಟೋನ್ ವರ್ಕ್ ಇರುವಂತಹ ಟಾಪ್ ಮ್ಯಾಚ್ ಆಗುತ್ತದೆ. ಇದಲ್ಲದೆ ಪ್ರಿಂಟೆಡ್ ಧೋತಿ, ತಿಳಿ ಬಣ್ಣದ ಟಾಪ್, ಟೀಶರ್ಟ್‌ಗಳು ಮ್ಯಾಚಿಂಗ್ ಎನಿಸುತ್ತದೆ. – ನವೀನ್ ಭಟ್ ಇಳಂತಿಲ