Advertisement

ಕಾಸರಗೋಡು ಕನ್ನಡ ಹೋರಾಟ ಸಮಿತಿ ವಿಶೇಷ ಸಭೆ : “ನಿರಂತರ ಹೋರಾಟ ಅನಿವಾರ್ಯ

11:45 PM Jun 05, 2022 | Team Udayavani |

ಕಾಸರಗೋಡು: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾ ಕರಿಗೆಸಂವಿಧಾನಬದ್ಧವಾಗಿ ಲಭಿಸಬೇಕಾದ ಎಲ್ಲ ಸರಕಾರಿ ಹಕ್ಕು ಮತ್ತು ಸವಲತ್ತು ಪಡೆದುಕೊಳ್ಳಲು ನಿರಂತರ ಹೋರಾಟ ಅನಿವಾರ್ಯ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹೇಳಿದರು.

Advertisement

ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಆಶ್ರಯದಲ್ಲಿ ಎಡನೀರು ಮಠದ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

ನಿರಂತರವಾಗಿ ಭಾಷಾ ಅಲ್ಪ ಸಂಖ್ಯಾಕರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಹೋರಾಟದ ಸ್ವರೂಪ ಬದಲಾಗ ಬೇಕಾಗಿದೆ. ಕನ್ನಡಿಗರಿಗೆ ಇಲ್ಲಿ ಆಗುತ್ತಿರುವ ಅನ್ಯಾಯದ ಬಗೆಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸವಾಗಬೇಕು. ಸರಕಾರ ನೀಡಿರುವ ಸವಲತ್ತುಗಳನ್ನು ಕಸಿದು ಕೊಳ್ಳುತ್ತಿರುವುದರಿಂದ ಕನ್ನಡಿಗ ರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮನೆಮನೆಗಳಲ್ಲಿ ಜಾಗೃತಿ ಮೂಡ ಬೇಕೆಂದರು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್‌, ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ| ರಮಾನಂದ ಬನಾರಿ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್‌, ನ್ಯಾಯವಾದಿ ಸದಾನಂದ ರೈ, ಟಿ. ಶಂಕರನಾರಾಯಣ ಭಟ್‌, ಕಮಲಾಕ್ಷ ಕಲ್ಲುಗದ್ದೆ, ಡಾ| ವಾಣಿಶ್ರೀ, ಸೂರ್ಯ ಭಟ್‌ ಎಡನೀರು, ಜಯ ಕುಮಾರ್‌, ಡಾ| ರತ್ನಾಕರ ಮಲ್ಲಮೂಲೆ, ಎಂ.ಎಚ್‌. ಜನಾರ್ದನ, ಶ್ರೀಶ ಪಂಜಿತ್ತಡ್ಕ ಮಾತನಾಡಿದರು. ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲ್‌, ಜಯದೇವ ಖಂಡಿಗೆ ಮೊದಲಾದವರಿದ್ದರು.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್‌ ಪ್ರಸ್ತಾವಿಸಿದ ರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ, ನಿರೂಪಿಸಿದರು.

ಸಭೆಯ ನಿರ್ಣಯಗಳು
-ಕರ್ನಾಟಕದ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಸರಗೋಡಿನ ಭಾಷಾ ಅಲ್ಪ ಸಂಖ್ಯಾ ಕ ಕನ್ನಡಿಗರಿಗೆ ನೀಡಲಾದ ಮೀಸಲಾತಿ ಸೀಟುಗಳಿಗೆ ಕನ್ನಡ ತಿಳಿಯದ ಮಲೆಯಾಳಿ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿರುವುದನ್ನು ತಡೆಗಟ್ಟಲು ವೃತ್ತಿ ಶಿಕ್ಷಣ ನಿರ್ದೇಶಕರನ್ನು ಭೇಟಿಯಾಗಿ ಕನ್ನಡಿಗರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ ಗಮನ ಹರಿಸಲು ನಿಯೋಗ ತೆರಳಲು ತೀರ್ಮಾನಿಸಿತು.
-ಕನ್ನಡ ವಿದ್ಯಾರ್ಥಿಗಳಿಗೆ ಮಲೆಯಾಳ ಕಲಿಸಲು ಅಧ್ಯಾಪಕರನ್ನು ನೇಮಿಸುವ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next