Advertisement

ಕುಷ್ಟಗಿ: ವರ್ಷಾಂತ್ಯಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷ ಊಟ

09:27 PM Dec 31, 2021 | Team Udayavani |

ಕುಷ್ಟಗಿ: 2021ಕ್ಕೆ ವಿದಾಯ ಹೇಳಿ ಬರಲಿರುವ ಹೊಸ ವರ್ಷವು ಹರುಷದಿಂದ ಕೂಡಿರಲಿ, ಮಕ್ಕಳು ಬರುವ ವರ್ಷವನ್ನು ಸಿಹಿಯೊಂದಿಗೆ ಸ್ವಾಗತಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ತಾಲೂಕಿನ ನೀರಲೂಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟದ ವೇಳೆ ಕರಿಗಡಬು, ಹಪ್ಪಳ, ಸಂಡಿಗೆ ಸಹಿತ ವಿಶೇಷ ಹಬ್ಬದ ಊಟ ಬಡಿಸಲಾಗಿದೆ.

Advertisement

ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಖಾಜಾಸಾಬ್ ಪಿಂಜಾರ ಅವರು, ಶುಕ್ರವಾರ ಶಾಲಾ ಮಕ್ಕಳಿಗೆ ಸ್ವಂತ ಖರ್ಚಿನಿಂದ ಹಬ್ಬದ ಔತಣ ನೀಡಿ ಅರ್ಥಪೂರ್ಣ ಕಾರ್ಯ ಮಾಡಿದ್ದಾರೆ. 1ರಿಂದ 7ನೇ ತರಗತಿಯ 176 ಮಕ್ಕಳು ಮದ್ಯಾಹ್ನದ ಊಟವಾಗಿ ಬೆಲ್ಲ, ಕಡಲೆ ಬೇಳೆಯ ಹೂರಣದ ಕರಿಗಡಬು, ಹಪ್ಪಳ, ಸಂಡಿಗೆ , ಕಟ್ಟಿನ ಸಾರು ಉಂಡು ಬಾಯಿ ಚಪ್ಪರಿಸಿರುವುದು ವಿದಾಯದ ವರ್ಷ ಹಾಗೂ ಸ್ವಾಗತಿಸುವ ಹೊಸ ವರ್ಷವನ್ನು ಸ್ಮರಣೀವಾಗಿಸಿದರು.

ಕರಿಗಡುಬಿನ ಜೊತೆಗೆ ತುಪ್ಪವನ್ನು ಮಕ್ಕಳಿಗೆ ಊಣ ಬಡಿಸಲಾಯಿತು. ಈ ಕುರಿತು, ಮಕ್ಕಳಿಗೆ ಸಿಹಿ ಊಟ ನೀಡಿದರೆ ಮಕ್ಕಳು ಲವಲವಿಕೆಯಿಂದ ಶಾಲೆಗೆ ಬರುತ್ತಾರೆ. ಅಲ್ಲದೇ ಮಕ್ಕಳಿಗೆ ಬರಲಿರುವ ಹೊಸ ವರ್ಷ ಅವರ ಬಾಳಲ್ಲಿ ಸಿಹಿಯಾಗಿರಲಿ ಎನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಈ ವಿಶೇಷ ಹಬ್ಬದ ಅಡುಗೆ ತಯಾರಿದ್ದಾಗಿ ಖಾಜಾಸಾಬ್ ಪಿಂಜಾರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next