Advertisement
ನಾನು, “ಸರಿ’ ಅಂತೇಳಿ ಒಪ್ಪಿಕೊಂಡೆ. ಆದರೆ, ಪರ್ಸ್ ತೆಗೆದು ನೋಡ್ತೀನಿ, ಅದರಲ್ಲಿ ದುಡ್ಡೇ ಇರಲಿಲ್ಲ. ನಡೆದೇ ಹೋಗೋದಾದ್ರೆ, ಐದಾರು ಕಿ.ಮೀ. ಆಗುತ್ತೆ. ತೂಕದ ಲಗ್ಗೇಜ್ ಬೇರೆ ಇದೆ. ಏನು ಮಾಡೋದು ಅಂತಲೇ ತೋಚಲಿಲ್ಲ. ಪಕ್ಕದಲ್ಲಿ, ನನ್ನೊಂದಿಗೆ ಬಸ್ ಇಳಿದಿದ್ದ ವ್ಯಕ್ತಿ ಕಾಣಿಸಿದರು. “ಸರ್, ಬೇಜಾರು ಮಾಡ್ಕೋಬೇಡಿ. ಒಂದಿಪ್ಪತ್ತು ರೂಪಾಯಿ ಇದ್ದರೆ ಕೊಡ್ತೀರಾ? ಬಸ್‌ಸ್ಟಾಂಡ್‌ಗೆ ಹೋಗೋಕೆ ದುಡ್ಡಿಲ್ಲ’ ಎಂದು, ನನ್ನ ಸಂಕಷ್ಟ ಹೇಳಿಕೊಂಡೆ. ಆ ಪುಣ್ಯಾತ್ಮ ಮರುಮಾತಾಡದೇ, ಆಟೋಗೆ ದುಡ್ಡು ಕೊಟ್ಟು ನನ್ನನ್ನು ಕಳುಹಿಸಿದರು. ಅಲ್ಲಿಯೇ ಅವರಿಗೊಂದು ಥ್ಯಾಂಕ್ಸ್ ಹೇಳಿ ಬಂದೆ.— ಮೈಲಾರಿ ಸಿಂಧುವಾಳ, ತುಮಕೂರು