ಕಾಪು: ಸರಕಾರಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಂದ ಜನತೆ ಯಾವ ರೀತಿಯ ಸೇವೆಯನ್ನು ಬಯಸುತ್ತಾರೋ ಅದೇ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸಿದಲ್ಲಿ ಜನ ನಮ್ಮನ್ನು ಗುರುತಿಸಿ, ಗೌರವಿಸುತ್ತಾರೆ. ಅದೇ ತತ್ವವನ್ನು ಇರಿಸಿಕೊಂಡು ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅದರಿಂದಾಗಿ ಕಾಪು ಪೊಲೀಸ್ ಠಾಣೆಯು ಉಡುಪಿ ಜಿಲ್ಲೆಯಲ್ಲೇ ಅತ್ಯುತ್ತಮ ಠಾಣೆ ಎಂಬ ಹೆಗ್ಗಳಿಕೆ ಪಡೆಯುವಂತಾಗಿದೆ ಎಂದು ಕಾಪು ಪೊಲೀಸ್ ಠಾಣಾಧಿಕಾರಿ ಜಗದೀಶ್ ರೆಡ್ಡಿ ಹೇಳಿದರು.
ಕಾಪು ಮಯೂರಾ ಹೊಟೇಲ್‌ನಲ್ಲಿ ಜು. 21ರಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಮ್ಮಾನ ಸೀÌಕರಿಸಿ, ಅವರು ಮಾತನಾಡಿದರು.
ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಉದ್ಯಮಿ ಮನೋಹರ್ ಶೆಟ್ಟಿ, ಲೀಲಾಧರ ಶೆಟ್ಟಿ ಮೊದಲಾದವರು ಶುಭಾಶಂಸನೆಗೈದರು.
ಶಿರ್ವ ಎಸ್ಸೆ$ç ನರಸಿಂಹ ಶೆಟ್ಟಿ, ಪಡುಬಿದ್ರಿ ಎಸ್ಸೆ$ç ಸತೀಶ್ ಕುಮಾರ್, ನಿವೃತ್ತ ಎಎಸ್‌ಐ ಜಯಶೀಲ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾಪು ಪೊಲೀಸ್ ಠಾಣೆಯಿಂದ ಪುತ್ತೂರು ಸಂಚಾರಿ ಠಾಣೆಗೆ ವರ್ಗಾವಣೆಗೊಂಡ ಎಸ್ಸೆ$ç ಜಗದೀಶ್ ರೆಡ್ಡಿ, ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡ ಶೀನ ಸಾಲ್ಯಾನ್, ಬಸಪ್ಪ, ಕೈಷ್ಣ ಪೂಜಾರಿ, ಸಂದೀಪ್ ಕುಮಾರ್, ರಾಜ್‌ಶೇಖರ್, ವೀರೇಶ್, ಮಂಗಳಾ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಕಾಪು ಪೊಲೀಸ್ ಠಾಣಾ ಎಎಸ್ಸೆ$ç ಶ್ರೀಧರ್ ನಂಬಿಯಾರ್ ಅಭಿನಂದನಾ ಭಾಷಣ ಮಾಡಿದರು. ಗಣೇಶ್ ಕುಮಾರ್ ಸ್ವಾಗತಿಸಿದರು. ಎಎಸ್ಸೆ$ç ಶಿವ ಕುಮಾರ್ ವಂದಿಸಿದರು. ದಂಡತೀರ್ಥ ಕಾಲೇಜಿನ ಉಪನ್ಯಾಸಕ ಶಿವಣ್ಣ ಬಾಯಾರ್ ಕಾರ್ಯಕ್ರಮ ನಿರೂಪಿಸಿದರು.