ನಿಂತ್ರೆ ಬಸವ ಟಿಫನ್ ಸೆಂಟರ್ ಕಾಣುತ್ತೆ. ಗೊತ್ತಾಗ್ಲಿಲ್ಲ ಅಂದ್ರೆ ಮಿರ್ಚಿ ಬಸವರಾಜು ಹೋಟೆಲ್ ಯಾವುದು ಅಂದ್ರೆ ಜನ ತೋರಿಸುತ್ತಾರೆ. ನೋಡಲಿಕ್ಕೆ ಪುಟ್ಟದಾಗಿ ಕಾಣುವ ಈ ಹೋಟೆಲ್‌ನಲ್ಲಿ ಶುಚಿ, ರುಚಿಗೆ ಆದ್ಯತೆ ನೀಡಲಾಗಿದೆ.
Advertisement
ಬೆಳಗ್ಗೆ ಮತ್ತು ಸಂಜೆ ಗ್ರಾಹಕರು ಹೆಚ್ಚಿರುತ್ತಾರೆ. ಇಲ್ಲಿ ತಿಂಡಿಯನ್ನು ಮೊದಲೇ ಸಿದಟಛಿಪಡಿಸಿಟ್ಟಿರುವುದಿಲ್ಲ. ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ತಕ್ಷಣ ತಯಾರಿಸಿ ಕೊಡ್ತಾರೆ. ರಾಯಚೂರಿನ ಹಲವು ಕಡೆ ಇಡ್ಲಿ, ಇತರೆ ತಿಂಡಿ ಸಿಗುತ್ತದೆಯಾದ್ರೂ, ತುಪ್ಪದ ಇಡ್ಲಿಯನ್ನು ಯಾರೂ ಮಾಡಲ್ಲ. ಹೀಗಾಗಿ, ಗ್ರಾಹಕರು ಮಿರ್ಚಿ ಬಸಣ್ಣನ ಹೋಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರ್ತಾರೆ.
ಬಸವ ಟಿಫನ್ ಸೆಂಟರ್ ಹೆಸರಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಮೊದಲಿಂದಲೂ ಮಿರ್ಚಿ ಮಾಡುತ್ತಿದ್ದ ಮಾಡುತ್ತಿದ್ದ ಕಾರಣ, ಜನ ಇವರನ್ನು ಮಿರ್ಚಿ ಬಸವರಾಜು ಎಂದೇ ಕರೆಯುತ್ತಾರೆ. ಮೂವರು ಮಕ್ಕಳಿಗೂ ಆಧಾರ ಪಿಯುಸಿ, ಡಿಗ್ರಿ ಮಾಡಿರುವ ಮಲ್ಲಿಕಾರ್ಜುನ್, ಬನಶಂಕರ್ ಹಾಗೂ ಸುರೇಶ್ ಸದ್ಯ, ಬೇರೆ ಉದ್ಯೋಗ ಬಿಟ್ಟು ತಮ್ಮ ತಂದೆ ಜೊತೆ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಿಗುವ ಇತರೆ ತಿಂಡಿ: ಬೆಳಗ್ಗೆ ಇಡ್ಲಿ, ಮಸಾಲೆ ವಡೆ, ಪೂರಿ, ಒಗ್ಗರಣೆ ಮಂಡಕ್ಕಿ ಮಾಡಲಾಗುತ್ತದೆ. ಸಂಜೆ ಹೆಚ್ಚುವರಿಯಾಗಿ ಮಿರ್ಚಿ, ಮದ್ದೂರು ವಡೆ ಮಾಡಲಾಗುತ್ತದೆ. ದರ ಕೇವಲ 24 ರೂ.
Related Articles
ಹೋಟೆಲ್ ಸಮಯ: ಬೆಳಗ್ಗೆ 7 ರಿಂದ ಮಧ್ಯಾಹ್ನ 1, ಸಂಜೆ 4ರಿಂದ ರಾತ್ರಿ 10 ರವರೆಗೆ.
ಪ್ರತಿ ಭಾನುವಾರ, ಅಮಾವಾಸ್ಯೆ ದಿನ ರಜೆ.
ಹೋಟೆಲ್‌ನ ವಿಶೇಷ ತಿಂಡಿ: ತುಪ್ಪದ ಇಡ್ಲಿ ಈ ಹೋಟೆಲ್ ವಿಶೇಷ, ಇಡ್ಲಿಗೆ ತುಪ್ಪ ಹಾಕಿ, ಜೊತೆಗೆ ಚಟ್ನಿ ಪುಡಿ, ಶೇಂಗಾ ಪುಡಿ ಕೊಡ್ತಾರೆ. ದರ 40 ರೂ.(ಇಡ್ಲಿ ನಾಲ್ಕು)
Advertisement
ಭೋಗೇಶ ಆರ್. ಮೇಲುಕುಂಟೆಫೋಟೋ ಕೃಪೆ: ಖಾದರ್