Advertisement

ಗಜ ಬಜೆ

03:42 PM Jul 18, 2019 | mahesh |

ಬೇಕಾಗುವ ಸಾಮಗ್ರಿಗಳು
ಸುವರ್ಣ ಗೆಡ್ಡೆ: ಕಾಲು ಕೆ.ಜಿ
ಬಿಳಿ ಕಡಲೆ 100 ಗ್ರಾಂ
ಅಂಬಟೆ ಕಾಯಿ 2
ಹಲಸಿನ ಬೀಜ 10
ಬಾಳೆಕಾಯಿ 1
ಕಳಲೆತುಂಡುಗಳು 10
ಒಂದು ದೊಡ್ಡ ದಂಟಿನ ಸೊಪ್ಪು
ಚಿಕ್ಕ ಚಿಕ್ಕ ಊರ ಕೆಸುವಿನ ಎಲೆ: 15
ತೆಂಗಿನ ಕಾಯಿ ತುರಿ ಅರ್ಧ ಕಪ್‌
ಹುರಿದ ಏಳೆಂಟು ಕೆಂಪು ಮೆಣಸು.
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ ಎಣ್ಣೆ, ಸಾಸಿವೆ, ಕರಿಬೇವು, ಇಂಗು.

Advertisement

ಮಾಡುವ ವಿಧಾನ
ಚಿಕ್ಕ ಚಿಕ್ಕ ಊರ ಕೆಸುವಿನ ಎಲೆಯನ್ನು ಒಂದೊಂದಾಗಿ ಸುರುಳಿ ಮಾಡಿ ಗಂಟು ಮಾಡಿ ಕೊಳ್ಳಿ. ಮೇಲೆ ಹೇಳಿದ ಎಲ್ಲ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ ಚೆನ್ನಾಗಿ ಬೇಯಿಸಿರಿ.(ನಮಗೆ ಬೇಕಾದರೆ ಆಲೂ ಗಡ್ಡೆಇತ್ಯಾದಿ ಗಳನ್ನೂ ಸೇರಿಸಬಹುದು) ಇದಕ್ಕೆ ಉಪ್ಪು ಹಾಕಿ ಇಡಿ. ಮಿಕ್ಸಿ ಜಾರಿಗೆ ತೆಂಗಿನ ತುರಿ, ಹುರಿದು ಏಳೆಂಟು ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.ಬೇಯಿಸಿದ ತರಕಾರಿಗಳಿಗೆ ಇದನ್ನು ಸೇರಿಸಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಗಂಟು ಹಾಕಿದ ಊರ ಕೆಸುವಿನ ಎಲೆಯನ್ನು ಮಸಾಲೆಗೆ ಹಾಕಿ.ಎಣ್ಣೆ, ಸಾಸಿವೆ, ಕರಿಬೇವು ಇಂಗು ಸೇರಿಸಿ ಒಗ್ಗರಣೆ ಕೊಡಿ. ಊಟಕ್ಕೆ, ಇಡ್ಲಿ, ಕೊಟ್ಟೆ,ಮೂಡೆ ಜತೆ ತಿನ್ನಲು ಗಜ ಬಜೆ ರೆಡಿ.

ಕಳಲೆ ತುದಿಯ ಚೂರಿನ ಪೋಡಿ
ಮಾಡುವ ವಿಧಾನ

ಕಳಲೆ ತುದಿಯ ಚೂರನ್ನು ಹಿಂದಿನ ರಾತ್ರಿ ನೀರಿನಲ್ಲಿ ನೆನೆ ಹಾಕಿ.ಇವತ್ತು ಬೆಳಿಗ್ಗೆ ಚೆನ್ನಾಗಿ ನೀರು ಹಿಂಡಿ, ಸ್ವಲ್ಪ ಉಪ್ಪು ಸೇರಿಸಿ ಇಡಿ. ಮಿಕ್ಸಿ ಜಾರಿಗೆ ಕೆಂಪು ಮೆಣಸು, ಅಕ್ಕಿಹುಡಿ, ಇಂಗು, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ರುಬ್ಬಿದ ಮಸಾಲೆಗೆ ಹಿಂಡಿದ ಕಳಲೆ ಹಾಕಿ ಚೆನ್ನಾಗಿ ಕಲಸಿ. ಈಗ ಮಸಾಲೆಯಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಹಾಕಿ , ಒಳ್ಳೆಯ ಹೊಂಬಣ್ಣ ಬರುವವರೆಗೆ ಕರಿಯಿರಿ.ಈಗ ಕಣಿಲೆ ನೀಳಿಯ ಪೋಡಿ, ತಿನ್ನಲು ರೆಡಿ.

ಕಳಲೆ ತುದಿಯ ಚೂರು 200ಗ್ರಾಂ
ಕೆಂಪು ಮೆಣಸು 10
ಕರಿಯಲು ಎಣ್ಣೆ
ಒಂದು ಲೋಟ
ಅಕ್ಕಿ ಹುಡಿ
ಸ್ವಲ್ಪ ಇಂಗು
ರುಚಿಗೆ ತಕ್ಕಷ್ಟು ಉಪ್ಪು

  ಕೆ.ಗಾಯತ್ರಿ ಕಾಮತ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next