ತಾಯಿ ಭಾರತೀಯ ಕೀರಿಟ ಸ್ಥಳದಲ್ಲಿರುವ ಹಿಮಾಲಯದ ಒಡಲಲ್ಲಿ ಹುದುಗಿರುವ ಸುಂದರ ರಾಜ್ಯ ಜಮ್ಮು- ಕಾಶ್ಮೀರ, ಇದು ಅನೇಕ ನದಿಗಳ ಉಗಮ ಸ್ಥಾನ. ಸರೋವರಗಳು, ಪ್ರಸ್ಥಭೂಮಿಗಳು ಇಲ್ಲಿ ತುಂಬಿದೆ. ಲಕ್ಷಾಂತರ ವರ್ಷಗಳಷ್ಟು ಪ್ರಾಚೀನ ನೀರ್ಗಲ್ಲುಗಳನ್ನು ಕಾಣಲು, ಅಭ್ಯಸಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ವಿಜ್ಞಾನಿಗಳು ಇಲ್ಲಿಗೆ ಬರುತ್ತಾರೆ.
Advertisement
ಈ ರಾಜ್ಯದ ರಾಜಧಾನಿ ಶ್ರೀನಗರ, ಜಮ್ಮು- ಕಾಶ್ಮೀರದಲ್ಲಿ ಪ್ರೇಕ್ಷಣೀಯ ಸ್ಥಳಗಳು ಅನೇಕ ಶಾಲಿಮಾರಿನ ಮೊಗಲ್ ತೋಟ, ಕಾಶ್ಮೀರಿ ದೋಣಿ ಮನೆಗಳು ಪ್ರಸಿದ್ಧ ದಾಲ್ ಸರೋವರ ಮತ್ತು ನಾಗಿನ್ ಸರೋವರಗಳಲ್ಲಿ ದೋಣಿ ವಿಹಾರವನ್ನು ಆನಂದಿಸಿ ತೀರಬೇಕು. ಕಿಶ್‌ತೆವಾರ್ ನ್ಯಾಶನಲ್ ಪಾರ್ಕ್ ಅತೀ ಎತ್ತರದಲ್ಲಿ. ಹಿಮಾಲಯ ಮಡಿಲಲ್ಲಿ ಅನೇಕ ತೀರ್ಥಕ್ಷೇತ್ರಗಳು ಇವೆ. ಅಮರನಾಥ, ವೈಷ್ಟೋದೇವಿ ಮುಂತಾದವು.
Related Articles
Advertisement
ಪಾಲಕ್ಬೇಕಾಗುವ ಸಾಮಗ್ರಿ: ಪಾಲಿಗೆ 500 ಗ್ರಾಮ್ (ಎರಡು ಕಟ್ಟು), ಎಣ್ಣೆ ನಾಲ್ಕು ಟೀ ಚಮಚ, ಗರಂ ಮಸಾಲಾ ಪೌಡರ್ ಅರ್ಧ ಟೀ ಚಮಚ, ಸಾಸಿವೆ ಒಂದು ಪ್ರತಿ ಚಮಚ, ಎಳೆಯ ಈರುಳ್ಳಿ ನಾಲ್ಕು. ವಿಧಾನ: ಪಾಲಕ್ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ಮಣ್ಣನ್ನು ಕಸ ಇಲ್ಲದಂತೆ ತೊಳೆಯಿರಿ, ತೊಳೆದ ಪಾಲಕ್ ಅನ್ನು ದಪ್ಪಕ್ಕೆ ಹಚ್ಚಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಸಾಸಿವೆ, ಹೆಚ್ಚಿದ ಈರುಳ್ಳಿಯನ್ನು ಒಗ್ಗರಣೆ ಮಾಡಿ. ಹುರಿದ ಈರುಳ್ಳಿ ಗರಂಮಸಾಲೆಯನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಈಗ ಹೆಚ್ಚಿದ ಪಾಲಕನ್ನು ಸೇರಿಸಿ ಹುರಿಯಿರಿ. ಪಾಲಕ್ ನೀರಿನ ಪಸೆ ಒತ್ತಿ, ಒಳ್ಳೆಯ ಪರಿಮಳ ಸೂಸುವವರೆಗೆ ಹುರಿಯಿರಿ. (ಪಾತ್ರೆಯ ಬಾಯಿ ಮುಚ್ಚಬಾರದು) ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ ಫಿರ್ನಿ (ಸಿಹಿ)
ಬೇಕಾಗುವ ಸಾಮಗ್ರಿ: ಹಾಲು ಅರ್ಧ ಲೀಟರ್ ಪ್ಯಾಕೆಟ್ ಅಥವಾ ನಾಲ್ಕು ಕಪ್, ಗುಲಾಬಿ ನೀರು ಅಥವಾ ಗುಲಾಬಿ ಎಸೆನ್ಸ್ ಕಾಲು ಟೀ ಚಮಚ, ಅಕ್ಕಿ ಒಂದು 2. ಟೇಬಲ್ ಚಮಚ, ಸಕ್ಕರೆ ಮುಕ್ಕಾಲು ಕಪ್, ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿದ್ದು, ವಿಧಾನ: ಅಕ್ಕಿಯನ್ನು ತೊಳೆದು ಎರಡು ಗಂಟೆ ನೆನೆಸಿಡಿ. ನೆನೆದ ಅಕ್ಕಿಯನ್ನು. ನುಣ್ಣಗೆ ರುಬ್ಬಿಕೊಳ್ಳಿ, ಹಾಲನ್ನು ಬಿಸಿಮಾಡಿ, ರುಬ್ಬಿದ ಅಕ್ಕಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಕೈ ಬಿಡದೆ ಬೇಯಿಸಿ. ಹತ್ತು ನಿಮಿಷ ಹಿಡಿಯುತ್ತದೆ. ಈಗ ಸಕ್ಕರೆ ಬೆರೆಸಿ, ಸಕ್ಕರೆ ಕರಗಿ ಒಂದು ಕುದಿ ಒಂದ ಒಡನೆ ಗುಲಾಬಿ ನೀರನ್ನು ಬೆರೆಸಿ, ಗೋಡಂಬಿ, ಬದಾಮ್‌ನ್ನು ಸಿಂಪಡಿಸಿ. ಫ್ರಿಜ್ಜಿನಲ್ಲಿಟ್ಟು ತಣಿಸಿ ತಿನ್ನಲು ಕೊಡಿ. ಕಬರ್ಘ
ಬೇಕಾಗುವ ಸಾಮಗ್ರಿ: ಕುರಿ ಮಾಂಸ ಅರ್ಧ ಕೆ.ಜಿ., ಶುಂಠಿ (ಸಣ್ಣಗೆ ಹೆಚ್ಚಿದ ತುಂಡುಗಳು) ಒಂದು ಟೀ ಚಮಚ, ದಾಚ್ಚಿನ್ನಿ ಒಂದು ಇಂಚು ತುಂಡು, ಬಡೇಸೊಪ್ಪು ಒಂದು ಟೀ ಚಮಚ, ಹಾಲು ಎರಡು ಟೀ ಕಪ್, ಮೈದಾ ಹಿಟ್ಟು ಅರ್ಧ ಕಪ್, ಬೇಕಿಂಗ್ ಸೋಡಾ ಒಂದು ಚಿಟಿಕೆ, ಮೊಸರು ಒಂದು ಟೇಬಲ್ ಚಮಚ, ಕರೆಯಲಿಕ್ಕೆ ಬೇಕಾದಷ್ಟು ಎಣ್ಣೆ ಉಪ್ಪು ರುಚಿಗೆ ತಕ್ಕಂತೆ. ವಿಧಾನ: ಮಾಂಸದ ತುಂಡುಗಳನ್ನು ತೊಳೆದುಕೊಳ್ಳಬೇಕು. ಹೆಚ್ಚಿದ ಶುಂಠಿ, ದಾಲ್ಚಿನಿ, ಬಡೇಸೊಪ್ಪನ್ನು ಶುದ್ಧವಾದ ಬಟ್ಟೆಯ ತುಂಡಿನಲ್ಲಿ ಗಂಟಿನ ಕಟ್ಟಿಕೊಳ್ಳಬೇಕು. ಅರ್ಧ ಲೀಟರ್ ನೀರಿನಲ್ಲಿ ಮಾಂಸದ ತುಂಡುಗಳು, ಬಟ್ಟೆಯಲ್ಲಿ ಕಟ್ಟಿದ ಮಸಾಲೆ ಸಾಮಾನನ್ನು ಹಾಕಿ ಬೇಯಿಸಿಕೊಳ್ಳಿ. ಅರ್ಧ ಬಂದಾಗ ಹಾಲು ಸೇರಿಸಿ, ಮಾಂಸದ ತುಂಡುಗಳು ಮೃದುವಾಗುವವರೆಗೆ ಬೇಯಿಸಿ. ಈಗ ಹೆಚ್ಚಿನ ನೀರನ್ನು ಬಸಿಯಬೇಕು ಮತ್ತು ಬಟ್ಟೆಯನ್ನು ಹಿಂಡಿ ತೆಗೆಯಿರಿ. ಮೈದಾ ಹಿಟ್ಟನ್ನು ಬೇಕಿಂಗ್ ಸೋಡಾ ಜೊತೆ ಜರಡಿ ಮಾಡಿಕೊಳ್ಳಬೇಕು. ಮೈದಾ ಮತ್ತು ಮೊಸರು, ಉಪ್ಪು ಬೇಕಾದಲ್ಲಿ ಬಸಿದ ನೀರನ್ನು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಬೇಯಿಸಿದ ಮಾಂಸ ತುಂಡುಗಳನ್ನು ಮೈದಾ ಮಿಶ್ರಣದಲ್ಲಿ ಅದ್ದಿ, ಎಣ್ಣೆಯಲ್ಲಿ ಕರಿಯಿರಿ. ಕಬರ್ಗ ತಯಾರಾಯಿತು. ದಮ್ ಆಲೂ
ಬೇಕಾಗುವ ಸಾಮಗ್ರಿ: ಆಲೂಗಡ್ಡೆ ಚಿಕ್ಕದು ಹತ್ತು ಅಥವಾ ದೊಡ್ಡ ಆಲೂಗಡ್ಡೆ ಮೂರು, ಎಣ್ಣೆ ಮೂರು ಟೇಬಲ್ ಚಮಚ, ಏಲಕ್ಕಿ ಎರಡು, ಬಡೇ ಸೊಪ್ಪು ಪುಡಿ ಎರಡು ಟೇಬಲ್ ಚಮಚ, ಶುಂಠಿ ಪುಡಿ ಒಂದು ಟೀ ಚಮಚ, ಕಾಶ್ಮೀರಿ ಮೆಣಸಿನ ಪುಡಿ ಎರಡು ಟೀ ಚಮಚ (ಖಾರ ಇಲ್ಲದ ಮೆಣಸಿನಪುಡಿಯಾದರೂ ಸೈ, ಗರಂ ಮಸಾಲ ಪುಡಿ ಅರ್ಧ ಟೀ ಚಮಚ, ಮೊಸರು ಎರಡು ಟೇಬಲ್ ಚಮಚ, ನೀರು, ಮೃದುವಾಗುವವರೆಗೆ ಬೇಯಿಸಿ. ಈಗ ಹೆಚ್ಚಿನ – ನೀರನ್ನು ಬಸಿಯಬೇಕು ಮತ್ತು ಬಟ್ಟೆಯನ್ನು ಒಂದು ಕಪ್, ಎಣ್ಣೆ ಕರೆಯಲಿಕ್ಕೆ, ಲವಂಗ ಎರಡು, ಉಪ್ಪು ರುಚಿಗೆ ತಕ್ಕಂತೆ. ವಿಧಾನ: ಆಲೂಗೆಡ್ಡೆಯನ್ನು ತೊಳೆದು, ಸಿಪ್ಪೆ ತೆಗೆದು ದೊಡ್ಡ ಹೋಳುಗಳಾಗಿ ಹಚ್ಚಿಕೊಳ್ಳಿ. ಬಿಸಿ ಎಣ್ಣೆಯಲ್ಲಿ ಕರಿದುಕೊಳ್ಳಬೇಕು (ಹೊಂಬಣ್ಣಕ್ಕೆ), ಸ್ವಲ್ಪ ಎಣ್ಣೆಯನು ಬಿಸಿ ಮಾಡಿ, ಲವಂಗ, ಏಲಕ್ಕಿ ಹಾಕಿ ಕೈಯಾಡಿಸಿ. ಬಡೇಸೋಪು ಪುಡಿ, ಮೆಣಸಿನ ಪುಡಿ, ಶುಂಠಿ ಪುಡಿ ಮತ್ತು ಉಪ್ಪು ಹಾಕಿ ತಕ್ಷಣ ಮೊಸರನ್ನು ಹಾಕಿ ಕೈಯಾಡಿಸಿ. ನೀರು ಸುರಿದು, ಒಂದು ಕುದಿ ಬಂದ ಅನಂತರ ನೀರಿನ ಮತ್ತು ಮೊಸರಿನ ಮಿಶ್ರಣಕ್ಕೆ ಕರಿದ ಆಲೂಗಡ್ಡೆ ಹಾಕಿ, ಸಣ್ಣನೆ ಉರಿಯಲ್ಲಿ ಬೇಯಿಸಿ. ರಸ ಬೇಕಾದ ಅದಕ್ಕೆ ಬಂದ ಒಡನೆ, ಗಳಗಿಳಿಸಿ ಗರಂ ಮಸಾಲೆಯನ್ನು ಸಿಂಪಡಿಸಿ, ಕೊತ್ತಂಬರಿ ಸೊಪ್ಪನ್ನು ಹೆಚ್ಚಿ ಮೇಲಿನಿಂದ ಉದುರಿಸಿ, ಬಡಿಸಿ. ಅನ್ನ, ಚಪಾತಿ, ಬ್ರೆಡ್ ಯಾವುದಾದರೂ ಸರಿಯೇ ರುಚಿ ರುಚಿಯಾಗಿರುತ್ತದೆ. ರೋಗನ್ ಜೋಶ್
ಬೇಕಾಗುವ ಸಾಮಗ್ರಿ: ತುಪ್ಪ ಎರಡು ಟೀ ಚಮಚ, ಮಾಂಸ ಅರ್ಧ ಕೆ.ಜಿ., ಈರುಳ್ಳಿ ಒಂದು (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ), ಬೆಳ್ಳುಳ್ಳಿ ಎಸಳು ಮೂರು, ಶುಂಠಿ ಚಿಕ್ಕ ತುಂಡು, ಕೆಂಪು ಮೆಣಸಿನಕಾಯಿ ಎರಡು, ಏಲಕ್ಕಿ ಎರಡು, ಲವಂಗ ಎರಡು, ಕೊತ್ತಂಬರಿ ಬೀಜ ಒಂದು ಟೀ ಚಮಚ, ಜೀರಿಗೆ ಎರಡು ಟೀ ಚಮಚ, ಕಾಳುಮೆಣಸು ಒಂದು ಟೀ ಚಮಚ, ಬಿರಿಯಾನಿ ಎಲೆ ಒಂದು, ಮೊಸರು ಕಾಲು ಕಪ್, ಚಕ್ಕೆ (ದಾಲ್ಚಿನಿ) ಒಂದು ಇಂಚು ತುಂಡು, ಬಿಸಿನೀರು ಕಾಲು ಕಪ್, ಗರಂ ಮಸಾಲೆ ಪೌಡರ್ ಕಾಲು ಟೀ ಚಮಚ, ಕಾಳು ಮೆಣಸಿನ ಪುಡಿ ಒಂದು ವಿಧಾನ: ಮಾಂಸದ ತುಂಡುಗಳನ್ನು ಎರಡೆರಡು ಬಾರಿ ಶುಭ್ರವಾಗಿ ತೊಳೆದುಕೊಳ್ಳಿ. ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಏಲಕ್ಕಿ, ಲವಂಗ, ಕೊತ್ತಂಬರಿ ಬೀಜ, ಜೀರಿಗೆ, ಕಾಳು ಮೆಣಸು ಮತ್ತು ಉಪ್ಪನ್ನು ರುಬ್ಬಿಕೊಳ್ಳಬೇಕು. ಹೆಚ್ಚಿದ ಈರುಳ್ಳಿಯನ್ನು ಬಿಸಿ ಎಣ್ಣೆ ಸೇರಿಸಿ ನಸು ಕೆಂಪು ಬಣ್ಣ ಬರುವವರೆಗೆ ತುಂಡು, ಬಿಸಿ ನೀರು, ಕಾಳುಮೆಣಸಿನ ಪುಡಿ ತುಂಡುಗಳು ಬಂದ ಅನಂತರ ದಾನಿ ಹುರಿಯಿರಿ. ರುಬ್ಬಿದ ಮಸಾಲೆ ಮತ್ತು ಬಿರಿಯಾನಿ ಎಲೆಯನ್ನು ಈರುಳ್ಳಿಗೆ ಸೇರಿಸಿ. ಘಮಘಮ ಪರಿಮಳ ಬರುವವರೆಗೆ ಹುರಿಯಬೇಕು. ಈಗ ಮಾಂಸದ ತುಂಡನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿದ. ಅರ್ಧ ಬೆಂದ ನಂತರ ಮೊಸರನ್ನು ಬೆರೆಸಿ, ದಾನಿ ಬೆರೆಸಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಆಗಾಗ ಕೈಯಾಡಿಸಬೇಕು. ಮಾಂಸದ ತುಂಡನ್ನು ಪಾತ್ರೆಯಿಂದ ತೆಗೆದು ಗರಂ ಮಸಾಲ ಪುಡಿಯನ್ನು ಸಿಂಪಡಿಸಿ, ಪುನಃ ಎರಡು ನಿಮಿಷಗಳ ಕಾಲ ಕುದಿಸಿರಿ. ಡಿಂಗ್ರಿ
ಬೇಕಾಗುವ ಸಾಮಗ್ರಿ: ಒಣಗಿದ ಅಣಬೆ ಎರಡು ಕಪ್, ಬೆಳ್ಳುಳ್ಳಿ ಎಂಟು ಎಸಳು (ಸಣ್ಣಗೆ ಹೆಚ್ಚಿಕೊಳ್ಳಿ) ಬಡೇಸೊಪ್ಪು ಪುಡಿ ಅರ್ಧ ಟೀ ಚಮಚ, ಮೊಸರು ಒಂದು ಕಪ್, ಹಾಲಿನ ಕೆನೆ ಒಂದು ಟೇಬಲ್ ಚಮಚ ಉಪ್ಪು ಮತ್ತು ಕಾಳು ಮೆಣಸಿನಪುಡಿ ರುಚಿಗೆ ತಕ್ಕಂತೆ, ಬೆಣ್ಣೆ ಒಂದು ಟೀ ಚಮಚ, ಬಿಸಿನೀರು ಒಂದು ಕಪ್. ವಿಧಾನ: ಉಪ್ಪಿನ ನೀರಿನಲ್ಲಿ ಒಣಗಿದ ಅಣಬೆಯನ್ನು ಹತ್ತು ಗಂಟೆಗಳ ಕಾಲ ನೆನಸಿ. ಅನಂತರ ಅದನ್ನು ಹಿಂಡಿ ತೆಗೆಯಿರಿ. ಬಿಸಿ ನೀರಿಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಬಡೇಸೊಪ್ಪು ಪುಡಿ ಬೆರೆಸಿ, ಅಣಬೆಯನ್ನೂ ಸೇರಿಸಿ ಬೇಯಿಸಿಕೊಳ್ಳಿ, ಬೇಯಿಸಿದ ಅಣಬೆಯನ್ನು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ಬೆಣ್ಣೆಯನ್ನು ಬಿಸಿಮಾಡಿ ಅಣಬೆ ಚೂರುಗಳನ್ನು ಹುರಿದುಕೊಳ್ಳಿ. ಹುರಿದ ಅಣಬೆಗೆ ಮೊಸರು ಮತ್ತು ಹಾಲಿನ ಕೆನೆಯನ್ನು ಬೆರೆಸಿ ಸಣ್ಣನೆ ಬೆಂಕಿಯಲ್ಲಿ ಬೇಯಿಸಿ. ಬೆಂದ ಅಣಬೆಗೆ ಉಪ್ಪು ಮತ್ತು ಶಾಜೀರಿಗೆ ಮತ್ತು ಕಾಳು ಮೆಣಸಿನ ಹುಡಿಯನ್ನು ಬೆರೆಸಿ. ಕಾಶ್ಮೀರಿ ದಮ್ ಕಟಲ್
ಬೇಕಾಗುವ ಸಾಮಗ್ರಿ: ಹಲಸಿನಕಾಯಿ ಒಂದು ಕೆ.ಜಿ, ಈರುಳ್ಳಿ ಎರಡು, ಬೆಳ್ಳುಳ್ಳಿ ಎಸಳು ಆರು, ಶುಂಠಿ ಎರಡು ಇಂಚು ತುಂಡು, ಒಣಮೆಣಸಿನಕಾಯಿ ಐದು ಗರಂ ಮಸಾಲ ಪುಡಿ ಕಾಲು ಟೀ ಚಮಚ, ಮೆಣಸಿನ ಪುಡಿ (ಖಾರದ ಪುಡಿ) ಕಾಲು ಟೀ ಚಮಚ, ಅರಿಶಿನ ಪುಡಿ ಕಾಲು ಟೀ ಚಮಚ, ಕೊತ್ತಂಬರಿ ಸೊಪ್ಪು ಒಂದು ಕಪ್, ನಿಂಬೆರಸ ಎರಡು ಟೀ ಚಮಚ ಅಥವಾ ಅರ್ಧ ಹೋಳಿನ ರಸ, ಎಣ್ಣೆ ಅಥವಾ ತುಪ್ಪ ನೀರು ಒಂದು ಕಪ್, ಉಪ್ಪು ರುಚಿಗೆ ತಕ್ಕಂತೆ. ವಿಧಾನ: ಹಲಸಿನಕಾಯಿಯ ಹೊರ ಮೈಯನ್ನು ಸವರಿ ದೊಡ್ಡ ಹೋಳುಗಳಾಗಿ ಹೆಚ್ಚಿಕೊಳ್ಳಬೇಕು ಮತ್ತು ಶುದ್ಧವಾಗಿ ತೊಳೆದುಕೊಳ್ಳಿ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ, ಗರಂ ಮಸಾಲೆ, ಮೆಣಸಿನ ಪುಡಿ, ಅರಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಬೇಕು. ಹೆಚ್ಚಿದ ಹೋಳನ್ನು ಉಪ್ಪಿನ ನೀರಿನಲ್ಲಿ ಬೇಯಿಸಿ. ನೀರನ್ನು ಬಸಿದಿಡಿ. ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ, ಬೇಯಿಸಿದ ಹಲಸಿನ ಹೋಳುಗಳನ್ನು ಕೆಂಪನೆ ಬಣ್ಣ ಬರುವಂತೆ ಹುರಿದುಕೊಳ್ಳಿ, ಎಣ್ಣೆ ಬಸಿದು ತೆಗೆದಿಡಿ. ಅದೇ ಎಣ್ಣೆಯಲ್ಲಿ ಈರುಳ್ಳಿಯನ್ನು ಹುರಿದು, ರುಬ್ಬಿದ ಮಸಾಲೆಯನ್ನು ಹಾಕಿ ಪರಿಮಳ ಬರುವವರೆಗೆ ಹುರಿಯಬೇಕು. ಇದಕ್ಕೆ ಹುರಿದ ಹೋಳುಗಳನ್ನು ಸೇರಿಸಬೇಕು. ಉಪ್ಪು ಮತ್ತು ಒಂದು ಕಪ್ ನೀರನ್ನು ಬೇರೆಸಿ ಸಾರು ಸ್ವಲ್ಪ ಗಟ್ಟಿಯಾಗುವ ತನಕ ಕುದಿಸಿ ಕೆಳಗೆ ಇಳಿಸಿದ ಅನಂತರ ಲಿಂಬೆ ರಸವನ್ನು ಬೆರಸಬೇಕು.
ಮುಂದುವರಿಯುವುದು…
(ಮುಂದೆ: ಸೇಬು ನಾಡಿನ, ದೇವ ಭೂಮಿ ಹಿಮಾಚಲ ಪ್ರದೇಶದ ಸುಪ್ರಸಿದ್ಧ ಖಾದ್ಯ ವೈವಿಧ್ಯ)