Advertisement
ಬ್ರೆಡ್ ಸ್ನ್ಯಾಕ್ಬೇಕಾಗುವ ಸಾಮಗ್ರಿಗಳು
ಬ್ರೆಡ್: 5
ಬೇಯಿಸಿದ ಮೊಟ್ಟೆ: 3
ಎಣ್ಣೆ : 2ಚಮಚ
ಬೆಳ್ಳುಳ್ಳಿ, ಶುಂಠಿ ಪೇಸ್ಟ್ : ಅರ್ಧ ಚಮಚ
ಹಸಿಮೆಣಸು: 1ಚಮಚ
ಈರುಳ್ಳಿ: 2
ಉಪ್ಪು: ರುಚಿಗೆ ತಕ್ಕಷ್ಟು
ಅರಿಸಿ ನ: ಕಾಲು ಚಮಚ
ಮೆಣಸು: 2 ಚಮಚ
ಬೇಯಿಸಿದ ಮೊಟ್ಟೆಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಇಡಬೇಕು. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅನಂತರ ಈರುಳ್ಳಿಯನ್ನು ಹಾಕಿ ಕೆಂಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಅದಕ್ಕೆ ಮೆಣಸು, ಅರಿಸಿನ, ಮೆಣಸಿನ ಹುಡಿ ಹಾಕಿ ಸ್ವಲ್ಪ ನೀರು ಹಾಗೂ ಉಪ್ಪು ಸೇರಿಸಿ 5 ನಿಮಿಷ ಬಿಸಿ ಮಾಡಬೇಕು. ಮೊಟ್ಟೆ ತುಂಡುಗಳನ್ನು ಈ ಮಸಾಲೆಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ ನೀರಿನ ಪಸೆ ಆರುವವರೆಗೆ ಬಿಸಿ ಮಾಡಬೇಕು. ಅನಂತರ ಬ್ರೆಡ್‌ನ್ನು ತೆಗೆದು ಅದರ ಸುತ್ತ ಇರುವ ಕಂದು ಬಣ್ಣದ ಬ್ರೆಡ್‌ಗಳನ್ನು ಕತ್ತರಿಸಿ ನೀರಲ್ಲಿ ಮುಳುಗಿಸಿ ತೆಗೆದು ನೀರು ಹೋಗುವವರೆಗೆ ಹಿಂಡಿಕೊಳ್ಳಬೇಕು. ಈ ಬ್ರೆಡ್‌ನ ಮೇಲೆ ಮೊಟ್ಟೆಯ ಮಿಶ್ರಣವನ್ನು ಅದಕ್ಕೆ ಹಾಕಿ ಉಂಡೆ ಮಾಡಬೇಕು. ಸ್ವಲ್ಪ ಬ್ರೆಡ್ ನ್ನು ಮೊದಲೇ ಹುಡಿ ಮಾಡಿಟ್ಟುಕೊಂಡಿರಬೇಕು. ಈ ಉಂಡೆಗಳನ್ನು ಬ್ರೆಡ್ ಹುಡಿಯಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕೆಂಬಣ್ಣ ಬರುವವರೆಗೆ ಕರಿದರೆ ಬ್ರೆಡ್ ಸ್ನ್ಯಾಕ್ ಸವಿಯಲು ಸಿದ್ಧವಾಗುತ್ತದೆ. ಖರ್ಜೂರ ಹಲ್ವಾ
ಬೇಕಾಗುವ ಸಾಮಗ್ರಿಗಳು
ಬೀಜವಿಲ್ಲದ ಖರ್ಜೂರ: 1ಕಪ್
ಹಾಲು: ಅರ್ಧ ಕಪ್
ಸಕ್ಕರೆ: ಮುಕ್ಕಾ ಲ್ ಕಪ್
ತುಪ್ಪ: ಮು ಕ್ಕಾ ಲ್ ಕಪ್
ಗೋಡಂಬಿ ದ್ರಾಕ್ಷಿ: ಸ್ವಲ್ಪ
Related Articles
ಮೊದಲು ಖರ್ಜೂರವನ್ನು ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಬೇಕು. ಅನಂತರ ಒಂದು ಪಾತ್ರೆಗೆ ಹಾಲು ಹಾಕಿ ಕುದಿ ಬರುವಾಗ ಸಕ್ಕರೆ ಮತ್ತು ಖರ್ಜೂರವನ್ನು ಹಾಕಬೇಕು. ಅನಂತರ ಅದಕ್ಕೆ ತುಪ್ಪವನ್ನು ಸೇರಿಸಿ ತಳ ಹಿಡಿಯದಂತೆ ಕದಡುತ್ತಿರಬೇಕು. ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ಗೋಡಂಬಿ , ಒಣ ದ್ರಾಕ್ಷಿಯನ್ನು ಸೇರಿಸಿ ಉರಿ ಆರಿಸಬೇಕು. ಒಂದು ಬಟ್ಟಲಿಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಸ್ವಲ್ಪ ಹೊತ್ತು ಫ್ರಿಡ್ಜ್ನಲ್ಲಿಟ್ಟರೆ ಹಲ್ವಾ ಸವಿಯಲು ಸಿದ್ಧವಾಗುತ್ತದೆ.
Advertisement
ವೆಜ್ ರೋಲ್ಬೇಕಾಗುವ ಸಾಮಗ್ರಿಗಳು
ಮೈದಾ: 2ಕಪ್
ಉಪ್ಪು: ರುಚಿಗೆ ತಕ್ಕಷ್ಟು
ಬೇಯಿಸಿದ ತರಕಾರಿಗಳು: ಕ್ಯಾರೆಟ್, ಬಟಾಣಿ ಕಾಳು, ಕ್ಯಾಬೇಜ್
ಎಣ್ಣೆ: ಸ್ವಲ್ಪ
ಈರುಳ್ಳಿ: 1
ಶುಂಠಿ, ಬೆಳ್ಳುಳ್ಳಿ ಪೇಸ್ಟ್: 2 ಚಮಚ
ಮೆಣಸಿನ ಹುಡಿ: 2 ಚಮಚ
ಚಿಲ್ಲಿ ಸಾಸ್, ಸೋಯಾ ಸಾಸ್: ಸ್ವಲ್ಪ ಮಾಡುವ ವಿಧಾನ
ಮೊದಲು ಮೈದಾಗೆ ಸ್ವಲ್ಪ ನೀರು, ಉಪ್ಪು ಸೇರಿಸಿ ಹಿಟ್ಟು ತಯಾರಿಸಿಟ್ಟುಕೊಳ್ಳಬೇಕು. ಅನಂತರ ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಶುಂಠಿ ಬೆಳುಳ್ಳಿ ಪೇಸ್ಟ್ ಹಾಗೂ ಈರುಳ್ಳಿಯನ್ನು ಹಾಕಿ ಈರುಳ್ಳಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ಅದಕ್ಕೆ ಉಪ್ಪು ಮೆಣಸಿನ ಹುಡಿಯನ್ನು ಸೇರಿಸಿ ಕೊನೆಗೆ ಬೇಯಿಸಿದ ತರಕಾರಿಯನ್ನು ಬೆರೆಸಿ 5 ನಿಮಿಷ ಬೇಯಿಸಬೇಕು. ಮೈದಾ ಹಿಟ್ಟನ್ನು ಚಪಾತಿಯಂತೆ ಲಟ್ಟಿಸಿ ಒಂದರ ಮೇಲೊಂದರಂತೆ ಇಟ್ಟು ಅವುಗಳ ಮಧ್ಯಕ್ಕೆ ಎಣ್ಣೆ ಸವರಿ ಸಣ್ಣ ಉರಿಯಲ್ಲಿ ಸ್ವಲ್ಪ ಕಾಯಿಸಿಕೊಳ್ಳಬೇಕು. ಆಗ ತೆಳುವಾದ ಕವರ್‌ಗಳು ಲಭ್ಯವಾಗುತ್ತದೆ. ಇದರ ಮೇಲೆ ತರಕಾರಿ ಮಸಾಲೆಯನ್ನು ಹಾಕಿ ಚೆನ್ನಾಗಿ ಫೊಲ್ಡ್ ಮಾಡಿ ಎಣ್ಣೆಯಲ್ಲಿ ಕರಿದರೆ ವೆಜ್ ರೋಲ್ ಸಿದ್ಧವಾಗುತ್ತದೆ. ಬನಾನ ಸ್ವೀಟ್
ಬೇಕಾಗುವ ಸಾಮಗ್ರಿಗಳು
ನೇಂದ್ರ ಬಾಳೆಹಣ್ಣು: 2
ಗೋಡಂಬಿ: 10
ಎಣ್ಣೆ : 2ಚಮಚ
ಒಣದ್ರಾಕ್ಷಿ : 10
ತೆಂಗಿನತುರಿ: ಮುಕ್ಕಾಲು ಕಪ್
ಸಕ್ಕರೆ: 3 ಚಮಚ
ಉಪ್ಪು : ಸ್ವಲ್ಪ
ಏಲಕ್ಕಿ ಹುಡಿ: ಕಾಲು ಚಮಚ ಮಾಡುವ ವಿಧಾನ
ಬಾಳೆಹಣ್ಣನ್ನು ಚೆನ್ನಾಗಿ ಬೇಯಿಸಬೇಕು. ಅನಂತರ ಸಿಪ್ಪೆ ತೆಗೆದು ಮೃದುವಾಗಿ ಹಿಚುಕಿ 15 ನಿಮಿಷ ಫ್ರಿಡ್ಜ್ ನಲ್ಲಿಡಬೇಕು. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ ಅದಕ್ಕೆ ಗೋಡಂಬಿ ಹಾಗೂ ಒಣದ್ರಾಕ್ಷಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ತೆಂಗಿನತುರಿಯನ್ನು ಹಾಕಿ ಅದು ಸ್ವಲ್ಪ ಬಿಸಿಯಾಗುವಾಗ ಸಕ್ಕರೆ, ಏಲಕ್ಕಿ ಹುಡಿ, ಉಪ್ಪು ಸೇರಿ ಸಬೇಕು. ಫ್ರಿಡ್ಜ್ ನಲ್ಲಿರುವ ಬಾಳೆಹಣ್ಣನ್ನು ತೆಗೆದು ಅದನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಅದನ್ನು ಲಟ್ಟಿಸಿ ಅದರ ಒಳಗೆ ಹುರಿದ ತೆಂಗಿನ ತುರಿಯ ಮಿಕ್ಸ್‌ನ್ನು ಹಾಕಿ ಚೆನ್ನಾಗಿ ಕವರ್ ಮಾಡಿ ಎಣ್ಣೆಗೆ ಹಾಕಿ ಕೆಂಬಣ್ಣ ಬರುವವರೆಗೆ ಹುರಿದರೆ ಬಾಳೆಹಣ್ಣಿನ ಉಂಡೆ ಸವಿಯಲು ಸಿದ್ಧ. - ಸುಶ್ಮಿತಾ ಶೆಟ್ಟಿ