Advertisement

ವಿಶೇಷ ಸಾನ್ನಿಧ್ಯ ಶಕ್ತಿಯ ಕ್ಷೇತ್ರ ಹಿರಿಯಡಕ: ಡಾ|ಹೆಗ್ಗಡೆ

02:18 PM Feb 22, 2018 | Team Udayavani |

ಹೆಬ್ರಿ : ಪುರಾತನ ಇತಿಹಾಸ ಹೊಂದಿರುವ ಸಂಪ್ರದಾಯ, ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸು ವುದರೊಂದಿಗೆ ವಿಶೇಷ ಸಾನ್ನಿಧ್ಯ ಶಕ್ತಿಯನ್ನು ಶ್ರೀ ಕ್ಷೇತ್ರ ಹಿರಿಯಡಕ ಮಹತೋಭಾರ ವೀರಭದ್ರ ಸ್ವಾಮಿ ದೇವಸ್ಥಾನ ಹೊಂದಿದೆ. ಅತ್ಯದ್ಭುತ ಕೆತ್ತನೆಗಳ ಮೂಲಕ ಶಿಲಾಮಯವಾಗಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಆಡಳಿತ ಸಮಿತಿಯವರು ಊರವರ ಸಹಾಯದೊಂದಿಗೆ ಮುಕ್ತ ಮನಸ್ಸಿ ನಿಂದ ಪಾಲ್ಗೊಂಡಿದ್ದು ಅತ್ಯಂತ ಸೌಂದರ್ಯಯುತವಾಗಿ ದೇವಸ್ಥಾನ  ರಚನೆಯಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ವೀರಭದ್ರ ಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

Advertisement

ನಾವು ಭಗವಂತನಿಗೆ ಅರ್ಪಿಸಿದ್ದರ ದುಪ್ಪಟ್ಟನ್ನು ನಮಗೆ ಹಿಂದಿರುಗಿಸಿ ಹರಸುತ್ತಾನೆ. ಶ್ರೀ ಕ್ಷೇತ್ರ ಹಿರಿಯಡಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ವಿಶೇಷ ಸಂಬಂಧವನ್ನು ಹೊಂದಿದ್ದು ಸಿರಿಜಾತ್ರೆ ಸಂದರ್ಭದಲ್ಲಿ ಅಸಂಖ್ಯ ಭಕ್ತರು ತೀರ್ಥ ಸ್ಥಾನಕ್ಕೆ ಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದರು.

ಹೆಗ್ಗಡೆ ಭೇಟಿಯಿಂದ ಪರಿಪೂರ್ಣತೆ ದ.ಕ. ಹಾಗೂ ಉಡುಪಿ ಜಿಲ್ಲೆ ಮಾತ್ರ ವಲ್ಲದೆ ಹೆಚ್ಚಿನ ದೇವಸ್ಥಾನಗಳ  ಅಭಿ ವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆ ಯವರ ಮಾರ್ಗದರ್ಶನವಿದ್ದು ಅವರ ಭೇಟಿಯಿಂದ ಮಾತ್ರ ದೇವಸ್ಥಾನ ಪರಿಪೂರ್ಣತೆ ಕಾಣುತ್ತದೆ. ಅಂತಹ ಪರಿಪೂರ್ಣತೆ ಹಾಗೂ ಧನ್ಯತೆ ಇಂದು ನಮಗೆ ಆಗಿದೆ ಎಂದು ಜೀರ್ಣೋ ದ್ಧಾರ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ್‌ ಸೊರಕೆ ಹೇಳಿದರು.

ಸಮಾರಂಭದಲ್ಲಿ ಕಾರ್ಯಾಧ್ಯಕ್ಷ ಮಾಂಬೆಟ್ಟು ಗೋವರ್ಧನ ಹೆಗ್ಡೆ, ಅಧ್ಯಕ್ಷರಾದ ಅಂಜಾರು ಬೀಡು ಸುಭಾಶ್ಚಂದ್ರ ಹೆಗ್ಡೆ, ಪಡ್ಡಾಂ ಬೀಡು ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಅಂಜಾರು ಬೀಡು ಅಮರನಾಥ ಶೆಟ್ಟಿ, ಷಡಂಗ ಲಕ್ಷ್ಮೀ ನಾರಾಯಣ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next