Advertisement
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಸಜ್ಜಾಗಿರುವ ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ವಲಯ ಹಾಗೂ ತಾಲೂಕು ಮಟ್ಟದಲ್ಲಿ ರಸಪ್ರಸ್ನೆ ಕಾರ್ಯಕ್ರಮ, ಜೊತೆಗೆ ಕನ್ನಡ ಮಾಧ್ಯಮ ಮಕ್ಕಳಿಕೆ ಕೌನ್ ಬನೇಗಾ ವಿದ್ಯಾಪತಿ ಹಾಗೂ ಉರ್ದು ಮಾಧ್ಯಮ ಮಕ್ಕಳಿಕೆ ಕೌನ್ ಬನೇಗಾ ಅಲ್ಲಮ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿದ್ದು ಉತ್ತಮ ಫಲಿತಾಂಶದ ನಿರೀಕ್ಷೆ ಮೂಡಿಸಿದೆ.
Related Articles
Advertisement
ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ಪರೀಕ್ಷಾರ್ಥಿಗಳ ಮನೆ ಮನೆಗೆ ಶಿಕ್ಷಕರು ಭೇಟಿ. ಪಾಲಕರು ಹಾಗೂ ಪರೀಕ್ಷಾರ್ಥಿಗಳಿಗೆ ಓದಿನ ಕುರಿತು ಸೂಕ್ತ ಮಾಹಿತಿ ನೀಡುವ, ಪರೀಕ್ಷೆಯ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವೂ ಯಶಸ್ವಿಯಾಗಿದೆ. ಮತ್ತೂಂದೆಡೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪ್ರತಿ ಶಿಕ್ಷಕರು 10 ಮಕ್ಕಳನ್ನು ದತ್ತು ಪಡೆದು, ಮಕ್ಕಳಿಗೆ ಕಲಿಕೆಯಯಲ್ಲಿ ಆಸಕ್ತಿ ಮೂಡಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಕ್ಕಳಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರ ಜೊತೆಗೆ ಪರೀಕ್ಷಾರ್ಥಿಗಳಿಗೆ ಹೆಚ್ಚು ಅಂಕ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವ ಬರವಣಿಗೆ ಶುದ್ಧೀಕರಣಕ್ಕೂ ವಿಶೇಷ ಗಮನ ನೀಡಿ ತರಬೇತಿ ನೀಡಲಾಗಿದೆ.
ಹೀಗೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಹೊಂದಿರುವ ವಿಜಯಪುರ ಜಿಲ್ಲೆಯನ್ನು ಮುಂಚೂಣಿ ಪಟ್ಟಿಗೆ ತರಲು ನಡೆಸಿರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ರೂಪಿಸಿರುವ ಹತ್ತು ಹಲವು ವಿಶೇಷ ಕಾರ್ಯಕ್ರಮಗಳು ಮೆಚ್ಚುಗೆ ಪಡೆದಿವೆ. ಈ ವಿನೂತನ ಪ್ರಯೋಗಗಳು ಪ್ರಸಕ್ತ ವರ್ಷದ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸಹಕಾರಿ ಅಗಲಿದೆ ಎಂದು ಭಾರಿ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಪರೀಕ್ಷೆ ಮುಗಿದು, ಫಲಿತಾಂಶ ಬಂದ ನಂತರವೇ ಈ ವಿಶೇಷ ಕಾರ್ಯಕ್ರಮಗಳು ಹಾಗೂ ವಿನೂತನ ಪ್ರಯೋಗಗಳು ಹೇಗೆ ಪರಿಣಾಮ ಮಾಡಿದೆ ಎಂಬುದು ಸ್ಪಷ್ಟವಾಗಿದೆ.
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ಸದಾಶಯದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಪರಿಣಾಮ ಮಕ್ಕಳಲ್ಲಿ ಓದುವ ಹಾಗೂ ಕಲಿಕೆಯಲ್ಲಿ ವಿಶೇಷ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಉತ್ತಮ ಫಲಿತಾಂಶದ ಜೊತೆಗೆ ಜಿಲ್ಲೆ ರಾಜ್ಯಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಿರೀಕ್ಷೆ ಇದೆ. –ಪ್ರಸನ್ನಕುಮಾರ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ
-ಜಿ.ಎಸ್. ಕಮತರ