Advertisement

ಅರುಣಾಚಲ ಪ್ರದೇಶದಲ್ಲಿ ಮಕ್ಕಳ ವಿಶೇಷ ಗ್ರಂಥಾಲಯ!

02:54 PM May 14, 2022 | Team Udayavani |

ಗುವಾಹಾಟಿ: ಅರುಣಾಚಲ ಪ್ರದೇಶದ ಚಾಂಗ್ಲಾಂಗ್‌ ಜಿಲ್ಲೆಯಲ್ಲಿನ ಮಿಯಾವೊದಲ್ಲಿ ಮಕ್ಕಳಿಗಾಗಿ ವಿಶೇಷ ಗ್ರಂಥಾಲಯ ವೊಂದನ್ನು ನಿರ್ಮಿಸಲಾಗಿದೆ. ಅದಕ್ಕೆ ಐಎಎಸ್‌ ಅಧಿಕಾರಿ ಸನ್ನಿ ಕೆ.ಸಿಂಗ್‌ರನ್ನು ಸಹಾಯಕ ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದಕ್ಕೆ ನ್ಯೂ ಏಜ್‌ ಲರ್ನಿಂಗ್‌ ಸೆಂಟರ್‌ (ನಾಲ್ಕ್) ಎಂದೇ ಹೆಸರಿಡಲಾಗಿದೆ.

Advertisement

ಈಗಿನ ಯುವಕರಲ್ಲಿ ಓದುವ ಅಭಿರುಚಿಯೇ ಕುಗ್ಗುತ್ತಿದೆ. ಗ್ರಂಥಾಲಯಗಳು ಅನಗತ್ಯವೆನಿಸುತ್ತಿವೆ. ಎಲ್ಲರೂ ಇ-ಬುಕ್‌ಗಳಿಗೆ ಅಂಟಿಕೊಂಡಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಸುಂದರ ಗ್ರಂಥಾಲಯವನ್ನು ನಿರ್ಮಿಸಬೇಕೆನ್ನುವ ಉದ್ದೇಶ ಇಲ್ಲಿದೆ ಎಂದು ಸನ್ನಿ ಸಿಂಗ್‌ ಹೇಳಿದ್ದಾರೆ.

ವಿಶೇಷವೇನು ಗೊತ್ತಾ?: ಇದು ಮಾಮೂಲಿ ಸರಕಾರಿ ಗ್ರಂಥಾಲಯ ಅಥವಾ ಕಟ್ಟಡಗಳಂತೆ ಇಲ್ಲವೇ ಇಲ್ಲ. ಸುಂದರವಾದ ಬುಕ್‌ಶೆಲ್ಫ್ಗಳಿವೆ. ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಹಿಡಿದು ಎಲ್ಲ ತರಹದ ಪುಸ್ತಕಗಳೂ ಇವೆ. ಜೋಕಾಲಿಯಲ್ಲಿ ಕೂತೂ ಓದಬಹುದು, ಮೆತ್ತನೆಯ ಸೋಫಾ, ಕುಶನ್‌ಗಳನ್ನೂ ಬಳಸಬಹುದು.

ಹವಾನಿಯಂತ್ರಕ ವ್ಯವಸ್ಥೆಯಿದೆ. ಬಿಸಿಲಿನ ಝಳ, ಚಳಿಯರಗಳೆಯಿಲ್ಲದೇ ಕುಳಿತುಕೊಳ್ಳಬಹುದು. ಅಷ್ಟು ಮಾತ್ರವಲ್ಲ ವೈಫೈ ಕೂಡ ಇದೆ. ಯಾರಿಗಾದರೂ ಇ-ಬುಕ್‌ ಬೇಕೆಂದರೆ ಅದನ್ನೂ ಓದಿಕೊಳ್ಳಲಿ ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next