ಹುಮನಾಬಾದ: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ ಹಾಗೂ ಮಹಾರಾಷ್ಟ್ರ ಸರ್ಕಾರದ ಮಹಿಳಾ ಸನ್ಮಾನ ಯೋಜನೆಗಳು ಇದೀಗ ಎರಡು ರಾಜ್ಯಗಳ ಮಧ್ಯೆ ಮೈಮನಸು ಉಂಟು ಮಾಡುತ್ತಿವೆ.
ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪೂರಕ್ಕೆ ತೆರಳುವ ಭಕ್ತರಿಗಾಗಿ ಎರಡು ರಾಜ್ಯದ ಬಸ್ ಘಟಕಗಳು ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಟಿಕೆಟ್ ದರದ ವಿಷಯಕ್ಕೆ ಕಚ್ಚಾಡುತ್ತಿದ್ದಾರೆ.
ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭಿಸಿದ್ದು, ಮಹಿಳೆಯರು ಸೂಕ್ತ ದಾಖಲೆಗಳು ನೀಡಿ ಪ್ರಯಾಣ ಮಾಡುತ್ತಿದ್ದಾರೆ. ಅದು ಕರ್ನಾಟಕ ರಾಜ್ಯದಲ್ಲಿ ಮತ್ತು ರಾಜ್ಯದ ಮಹಿಳೆಯರಿಗೆ ಮಾತ್ರ ಪ್ರವಾಸಕ್ಕೆ ಅವಕಾಶವಿದ್ದು, ನೆರೆ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳಿಗೆ ಅನ್ವಯವಾಗುವುದಿಲ್ಲ.
ನೆರೆ ರಾಜ್ಯದ ಬಸ್‌ಗಳಲ್ಲಿ ಸಂಚಾರ ಮಾಡಬೇಕಾದರೆ ಪ್ರಯಾಣದ ಪೂರ್ತಿ ಟಿಕೆಟ್ ದರ ನೀಡಬೇಕು. ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪೂರದ ಅಂಬಾ ಭವಾನಿ ದರ್ಶನಕ್ಕೆ ಈ ಭಾಗದ ಲಕ್ಷಾಂತರದ ಜನರು ಪ್ರಯಾಣ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ವಿಶೇಷ ಕೌಂಟರ್ ತೆರೆದು ಪ್ರಯಾಣಿಕರಿಗೆ ಪ್ರಯಾಣದ ಮಾಹಿತಿ ನೀಡುತ್ತಿದ್ದಾರೆ.
ಆದರೆ, ಇಲ್ಲಿನ ಬಸ್ ನಿಲ್ದಾಣದಲ್ಲಿ ಮಾತ್ರ ಮಹಾರಾಷ್ಟ್ರದ ಬಸ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ಕಾರಣ ಹುಮನಾಬಾದನಿಂದ ತುಳಜಾಪುರಕ್ಕೆ ಪ್ರಯಾಣಿಸುವ ಮಹಿಳೆಯರಿಗೆ ರೂ.130, ಪುರುಷರಿಗೆ ರೂ.200 ಟಿಕೆಟ್ ದರ ಇದೆ. ಎರೆಡು ರಾಜ್ಯದ ಪುರುಷರಿಗೆ ರೂ.200 ಇದೆ. ಆದರೆ, ಮಹಿಳೆಯರ ಟಿಕೆಟ್‌ದರಲ್ಲಿ ರೂ.70ರ ವ್ಯತ್ಯಾಸ ಇದೆ.
ಕಾರಣ ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದಲ್ಲಿ ಸಂಚರಿಸುವ ದೇಶದ ಎಲ್ಲಾ ಮಹಿಳೆಯರಿಗೆ ಅರ್ಧ ಟಿಕೆಟ್ ಪಡೆಯುವ ಯೋಜನೆ ಜಾರಿಯಲ್ಲಿ ಇರುವ ಕಾರಣಕ್ಕೆ ಕರ್ನಾಟಕದಿಂದ ಪ್ರಯಾಣ ಮಾಡುವ ಮಹಿಳೆಯರಿಗೆ ರಾಜ್ಯದ ಗಡಿವರೆಗೆ ಪೂರ್ಣ ಟಿಕೆಟ್ ಪಡೆದು ಮಹಾರಾಷ್ಟ್ರ ಪ್ರವೇಶವಾದ ನಂತರ ಅರ್ಧ ಟಿಕೆಟ್ ಪಡೆಯುತ್ತಿರುವ ಕಾರಣಕ್ಕೆ ಕಡಿಮೆ ವೆಚ್ಚದಲ್ಲಿ ಪ್ರಯಾಣ ನೀಡುತ್ತಿರುವುದು ಈಶಾನ್ಯ ಸಾರಿಗೆ ಇಲಾಖೆಗೆ ಕಂಟಕವಾಗಿ ಕಾಡುತ್ತಿದೆ. ಅಲ್ಲದೆ, 75 ವರ್ಷದ ಹಿರಿಯ ನಾಗರಿಕರಿಗೆ ಸೂಕ್ತ ದಾಖಲೆ ನೀಡಿದರೆ ಉಚಿತ ಪ್ರಯಾಣದ ಯೋಜನೆ ಕೂಡ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಧ್ಯ ರಾಜ್ಯದ ಬಸ್‌ಗಳು ಸುಗಮವಾಗಿ ಮಹಾರಾಷ್ಟ್ರಕ್ಕೆ ಸಂಚರಿಸುತ್ತಿದ್ದು, ಇದೇ ಗೊಂದಲ ಮುಂದು ವರೆದರೆ ಮುಂದಿನ ದಿನಗಳಲ್ಲಿ ಎರೆಡು ರಾಜ್ಯಗಳ ಮಧ್ಯೆ ಗೊಂದಲ ಸೃಷ್ಟಿಯಾಗುವ ಸಾಧ್ಯತೆಗಳು ಕೂಡ ಕಂಡುಬರುತ್ತಿದ್ದು, ಎರೆಡು ರಾಜ್ಯಗಳ ಸಾರಿಗೆ ಮುಖ್ಯಸ್ಥರು ಈ ಕಡಗೆ ಗಮನ ಹರಸಿಬೇಕಾಗಿದೆ.
ಬೀದರ್ ಜಿಲ್ಲೆಯಿಂದ ತುಳಜಾಪೂರಕ್ಕೆ ಹೋಗುವ ಬಸ್‌ಗಳಿಗೆ ಮಹರಾಷ್ಟರದ ಬಸ್ ಘಟಕದವರು ಅವರ ನಿಲ್ದಾಣದಲ್ಲಿ ಸ್ಥಳ ನೀಡುತ್ತಿಲ್ಲ. ನಮ್ಮ ಬಸ್‌ಗಳಿಗೆ ನಿಲ್ಲಿಸಲು ಪ್ರಯಾಣಿಕರನ್ನು ಹತ್ತಿಸಲು ಸ್ಥಳ ನೀಡದ ಕಾಣರ ಕಳೆದ ಅನೇಕ ವರ್ಷಗಳಿಂದ ಖಾಸಗಿ ಭೂಮಿ ಬಾಡಿಗೆ ಪಡೆದುಕೊಂಡು ಬಸ್ ನಿಲ್ಲಿಸುತ್ತಿದ್ದೇವೆ. ಸರತಿ ಸಾಲಿನಲ್ಲಿ ಕೂಡ ನಮ್ಮ ಬಸ್‌ಗಳಿಗೆ ವಕಾಶ ಕಲ್ಪಿಸುತ್ತಿಲ್ಲ.
ಈ ಹಿಂದೆ ನಡೆದ ಮೇಲಾಧಿಕಾರಿಗಳ ಸಭೆಯಲ್ಲಿ ಎರೆಡು ರಾಜ್ಯದ ಬಸ್‌ಗಳ ಟಿಕೆಟ್ ದರ ಒಂದೇ ಇಡುವಂತೆ ಮನವರಿಕೆ ಮಾಡಲಾಗಿತ್ತು. ಆದರೆ, ಮಹಾರಾಷ್ಟ್ರದ ಬಸ್‌ಗಳ ಮೇಲೆ ಮಹಿಳೆಯರಿಗೆ 130 ಎಂದು ಬರೆದುಕೊಂಡು ಬರುತ್ತಿದ್ದು, ರಾಜ್ಯದ ಬಸ್ ಘಟಕಕ್ಕೆ ಹಾನಿ ಸಂಭವಿಸಬಹುದಾಗಿದೆ. ಕಾರಣ ನಮ್ಮ ಬಸ್ ನಿಲ್ದಾಣದಲ್ಲಿ ಮಹರಾಷ್ಟçದ ಬಸ್‌ಗಳಿಗೆ ಅವಕಾಶ ನೀಡುತ್ತಿಲ್ಲ. –
ವಿಠಲರಾವ ಕದಂ ಬಸ್ ನಿಲ್ದಾಣದ ವ್ಯವಸ್ಥಾಪಕ ಹುಮನಾಬಾದ
ಕಳೆದ ಮೂರುದಿನಗಳಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ತುಳಜಾಪೂರಕ್ಕೆ ತೆರಳುವ ವಿಶೇಷ ಬಸ್‌ಗಳಿಗೆ ಪ್ರವೇಶ ನೀಡುತ್ತಿಲ್ಲ. ಬಸ್ ನಿಲ್ದಾಣದ ಎದುರಿನ ಮುಖ್ಯರಸ್ತೆಯಲ್ಲಿ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿನ ಅನುಸಾರ ಮಹಿಳೆಯರಿಗೆ ಕಡಿಮೆ ಟಿಕೆಟ್ ಇದೆ. ಎರೆಡು ರಾಜ್ಯಗಳ ಮೇಲಾಧಿಕಾರಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಿಬ್ಬಂದಿಗಳು ಕಚ್ಚಾಟದಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಕರ್ತವ್ಯದ ಒತ್ತಡ, ಹೆಚ್ಚಿನ ಆದಾಯದ ಕುರಿತು ಎರೆಡು ರಾಜ್ಯದ ಸಿಬ್ಬಂದಿಗಳಿಗೆ ಇದೆ. ಇಲ್ಲಿ ಸಮಸ್ಯೆ ಆದರೆ, ಅಲ್ಲಿಯೂ ಸಮಸ್ಯೆ ಉಂಟಾಗುತ್ತದೆ ಎಂಬುವುದು ತಿಳಿದುಕೊಳ್ಳಬೇಕಾಗಿದೆ. –
ಶಿವರಾಜ ಎಲ್‌ಪಿ ಉಮರ್ಗಾ ಬಸ್ ಘಟಕದ ಸಂಚಾರ ನಿಯಂತ್ರಣ ಅಧಿಕಾರಿ