Advertisement
ಗಾಲಿಕುರ್ಚಿ ವ್ಯವಸ್ಥೆಸಾಮಾನ್ಯವಾಗಿ ಒಂದು ಕಟ್ಟಡದಲ್ಲಿ (ಮತದಾನ ಕೇಂದ್ರ) 2-3 ಮತಗಟ್ಟೆಗಳಿರುತ್ತವೆ. ಅಂತಹ ಮೂರು ಮತಗಟ್ಟೆಗಳಿಗೆ ಕನಿಷ್ಠ ಒಂದರಂತೆ 551ರಷ್ಟು ಗಾಲಿಕುರ್ಚಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆರೋಗ್ಯ ಇಲಾಖೆ 376, ಗ್ರಾ.ಪಂ.ಗಳು 175 ಗಾಲಿಕುರ್ಚಿಗಳನ್ನು ಹೊಂದಿಸಿಕೊಂಡಿವೆ. ಉಳಿದಂತೆ ಸುಮಾರು 175 ಗಾಲಿಕುರ್ಚಿ ಅವಶ್ಯವಿದೆ. ಅದನ್ನು ಮತದಾನದಿನ ಹೊಂದಿಸಿಕೊಳ್ಳಲಾಗುತ್ತದೆ.
ಮಂದ ದೃಷ್ಟಿಯುಳ್ಳವರು ಮತದಾನ ಮಾಡಲು ನೆರವಾಗುವಂತೆ ಜಿಲ್ಲೆಯ 328 ಬೂತ್‌ಗಳಲ್ಲಿ ಭೂತಗನ್ನಡಿ ಸಿದ್ಧಪಡಿಸಿ ಇಡಲಾಗುತ್ತದೆ. ಬ್ರೈಲ್ ಲಿಪಿಯಲ್ಲಿ ಕ್ರಮಸಂಖ್ಯೆ
ಜಿಲ್ಲೆಯಲ್ಲಿ ಸುಮಾರು 580 ಮಂದಿ ಮಂದ ದೃಷ್ಟಿಯ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. ಒಂದು ಬೂತ್‌ನಲ್ಲಿ ಒಂದು ಭೂತಗನ್ನಡಿ ಇರುತ್ತದೆ. ಶೇ.100ರಷ್ಟು ಅಂಧತ್ವ ಹೊಂದಿರುವವರು ಸಹಾಯಕರ ನೆರವಿನಿಂದ ಮತದಾನ ಮಾಡಬಹುದು. ಬ್ರೈಲ್ ಲಿಪಿ ತಿಳಿದಿದ್ದರೆ ಅವರಾಗಿಯೇ ಸ್ವತಃ ಮತ ಹಾಕಬಹುದು. ಮತಯಂತ್ರದ ಕ್ರಮಸಂಖ್ಯೆ ಬ್ರೈಲ್ ಲಿಪಿಯಲ್ಲಿಯೂ ಇರಲಿದೆ.
Related Articles
ದೈಹಿಕ ಊನತೆ ಹೊಂದಿರುವವರು, ದೃಷ್ಟಿ, ಶ್ರವಣದೋಷ ಇತ್ಯಾದಿ ಹೊಂದಿದವರನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಒಂದು ಮತಗಟ್ಟೆ ಸಿದ್ಧಪಡಿಸಲಾಗುತ್ತದೆ.
Advertisement
ಇದಕ್ಕಾಗಿ ಕುಂದಾಪುರ ತೆಕ್ಕಟ್ಟೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಸಾಮಾನ್ಯರು ಕೂಡ ಮತದಾನ ಮಾಡಬಹುದು.
ಮತಗಟ್ಟೆಗೂ ಅಂಗವಿಕಲ ಅಧಿಕಾರಿಗಳುಸದ್ಯ ಗುರುತಿಸಲಾದ ವಿಶೇಷ ಮತಗಟ್ಟೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 22 ಮಂದಿ ಅಂಗವಿಕಲ ಮತದಾರರಿದ್ದಾರೆ ಎಂದು ಗುರುತಿಸಲಾಗಿದೆ. ಇಲ್ಲಿ 4 ಮಂದಿ ಅಂಗವಿಕಲರೇ ಮತಗಟ್ಟೆ ಅಧಿಕಾರಿ, ಓರ್ವ ಸಿಬಂದಿ ಇರಲಿದ್ದಾರೆ. ಏನೇನು ವ್ಯವಸ್ಥೆ?
ಅಶಕ್ತರಿಗಾಗಿ ಇರುವ ಮತಗಟ್ಟೆಯಲ್ಲಿ ಶೌಚಾಲಯ, ರ್‍ಯಾಂಪ್, ಗಾಲಿಕುರ್ಚಿ, ವಾಕರ್, ಸ್ಟಿಕ್ ಇತ್ಯಾದಿ ಸಿದ್ಧವಿರು ತ್ತವೆ. ವಿಕಲಚೇತನ ಅಧಿಕಾರಿ ಮತ್ತು ಸಿಬಂದಿ ಅದೇ ಮತಗಟ್ಟೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂದರೆ ಅದಕ್ಕೆ ಪೂರಕವಾಗಿ ಬೆಡ್ ವ್ಯವಸ್ಥೆ ಕೂಡ ಮಾಡಿಕೊಡಲಾಗುತ್ತದೆ. ಜಿಲ್ಲೆಯಲ್ಲಿರುವ ಅಶಕ್ತ ಮತದಾರರು
ಬೈಂದೂರು :1786
ಕುಂದಾಪುರ: 2143
ಕಾಪು: 1316
ಉಡುಪಿ: 1390
ಕಾರ್ಕಳ: 1419 – ವಿಶೇಷ ವರದಿ