Advertisement
ಆಯುರ್ವೇದೀಯ ಮೂಲಿಕೆಗಳ ಅವಾಗಾಹಸ್ನಾನ (ಟಬ್‌ಬಾತ್)ಟಬ್‌ಬಾತ್ ಎಂದರೆ ಶೋಷಶಿಯರಿಗೆ ಮಾತ್ರವಲ್ಲ ಎಲ್ಲ ಮಹಿಳೆಯರಿಗೂ ಇಷ್ಟ. ಯಾಕೆಂದರೆ, ಇಡೀ ದಿನ ಕೆಲಸದ ಧಾವಂತದಲ್ಲಿ ಮೈಮನ ಮುದುಡಿದಾಗ, ವಿಶೇಷ ಸ್ನಾನ ಮಾಡಿದರೆ ದೇಹ ಮತ್ತು ಮನಸ್ಸು ಚೈತನ್ಯಪೂರ್ಣ ಹಾಗೂ ಪ್ರಫುಲ್ಲಿತವಾಗುತ್ತದೆ. ಬಾತ್‌ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಶ್ರೀಗಂಧದ ಪುಡಿ (4 ಭಾಗ), ಅರಸಿನ ಪುಡಿ (1 ಭಾಗ), ಗುಲಾಬಿ ಪಕಳೆಗಳು 5 ಕಪ್, ಗುಲಾಬಿ ಜಲ (1 ಕಪ್), 2 ಬಿಳಿ ಹಾಳೆ ದಾಸವಾಳದ ಹೂವು; ಲಾವಂಚದ ಹುಡಿ (3 ಚಮಚ) ಇವೆಲ್ಲವುಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ತದನಂತರ ಬಾತ್‌ಟಬ್‌ನಲ್ಲಿ ಹಾಕಿ, ಈ ಸುಗಂಧಮಿಶ್ರಿತ ಮೂಲಿಕೆಗಳ ಸುಖೋಷ್ಣ ಜಲದಲ್ಲಿ ಟಬ್‌ಬಾತ್ ಪಡೆದರೆ ಉತ್ತಮ ರಿಲ್ಯಾಕ್ಸಿಂಗ್ ಟಬ್‌ಬಾತ್ ಆಗಿದೆ.
ಹೈಥ್ರೊ ಥೆರಪಿ ಸ್ನಾನದ ಟಬ್‌ನಲ್ಲಿ 15 ನೀಲಗಿರಿ ತೈಲದ ಹನಿಗಳು, 2 ತುಳಸೀ ಎಲೆ, ದಾಸವಾಳದ ಹೂವು 15- ಇವೆಲ್ಲವನ್ನೂ ಬೆರೆಸಿ ಸೋಸಿದ ನೀರನ್ನು ಬೆಚ್ಚಗಿರುವಾಗ ಹಾಕಿಡಬೇಕು. ಈ ಟಬ್‌ನಲ್ಲಿ ಸ್ನಾನ ಮಾಡುವುದರಿಂದ ಮೈಕೈ ನೋವು, ಮಾನಸಿಕ ಒತ್ತಡ ನಿವಾರಣೆಯಾಗಿ ಮನಸ್ಸಿಗೆ ಮುದ ನೀಡುತ್ತದೆ. ಟರ್ಕಿಶ್ ಬಾತ್
ಹಮ್ಮಮ್ ಎಂದು ಕರೆಯುವ ಟರ್ಕಿ ದೇಶದ ಪಾರಂಪರಿಕ ಸ್ನಾನವನ್ನೇ ಆಧುನಿಕ ರೂಪದಲ್ಲಿ ಮನೆಯಲ್ಲೇ ಪಡೆಯಬಹುದು. ದೇಹಕ್ಕೆ ತೈಲದ ಮಾಲೀಶು ಮಾಡಿದ ಬಳಿಕ ಮೊಗ ಹಾಗೂ ದೇಹವನ್ನು ಕ್ಲೆನ್ಸ್ ಮಾಡಿ, ಬಳಿಕ ಎಕ್ಸ್‌ಫೋಲಿಯೇಶನ್ ವಿಧಾನದಲ್ಲಿ ಚರ್ಮಕ್ಕೆ ಗೃಹೋಪಚಾರ ನೀಡಬೇಕು. ತದನಂತರ ಪುದೀನಾ ಕಷಾಯದಿಂದ ಶುದ್ಧೀಕರಿಸಲಾಗುತ್ತದೆ. ಮೊಡವೆಯ ವಿಧಕ್ಕೆ ತಕ್ಕಂತೆ, ಚರ್ಮದ ಪ್ರಕಾರಕ್ಕೆ ತಕ್ಕಂತೆ (ಸಾಧಾರಣ, ತೈಲಯುಕ್ತ, ಒಣಚರ್ಮ) ಹಾಲು, ಯಾಲಕ್ಕಿ, ಅಂಜೂರ, ಜೇನು ಮೊದಲಾದವುಗಳ ಮಿಶ್ರಣದ ಮುಖಲೇಪ ಅಥವಾ ಫೇಸ್‌ಪ್ಯಾಕ್ ಹಚ್ಚಬೇಕು. ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಮುಖ ಕಾಂತಿಯುತವಾಗಿ ಕಂಗೊಳಿಸುತ್ತದೆ.
Related Articles
ಹಾಲು ಹಾಗೂ ಚಾಕೊಲೇಟ್ ಮಾಸ್ಕ್
ಅಧಿಕ ಚಾಕೊಲೇಟ್ ಸೇವನೆ ಮೊಡವೆಯುಳ್ಳವರಿಗೆ ಹಿತಕರವಲ್ಲ. ಆದರೆ ಕೊಕೋಪೌಡರ್ ಬಳಸಿ ಫೇಸ್‌ಮಾಸ್ಕ್ ಲೇಪಿಸಿದರೆ ಮೊಡವೆ ಮಾಯುವುದು ಮಾತ್ರವಲ್ಲ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
Advertisement
ವಿಧಾನ: 1/3 ಕಪ್ ಸಿಹಿ ಇಲ್ಲದ ಕೊಕೊ ಪೌಡರ್, 3 ದೊಡ್ಡ ಚಮಚ ಹಾಲಿನ ಪುಡಿ, 3 ದೊಡ್ಡ ಚಮಚ ಸಿಹಿ ಮೊಸರು, 5 ಚಮಚ ಜೇನು, 10 ಚಮಚ ಓಟ್ಸ್ . ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ, ಮೃದುವಾಗುವವರೆಗೆ ಕಲಕಬೇಕು. ಮೃದು ಲೇಪ ತಯಾರಾದ ಬಳಿಕ ಈ ಪೇಸ್ಟನ್ನು ಮುಖಕ್ಕೆ ಲೇಪಿಸಿ ಫೇಸ್‌ಮಾಸ್ಕ್ ಮಾಡಬೇಕು. 20 ನಿಮಿಷದ ಬಳಿಕ ಹತ್ತಿಯ ಉಂಡೆಗಳನ್ನು ತಣ್ಣೀರಿನಲ್ಲಿ ಅದ್ದಿ ಮುಖಕ್ಕೆ ಮೃದುವಾಗಿ ಮಾಲೀಶು ಮಾಡಿ ಫೇಸ್‌ಮಾಸ್ಕ್ ತೆಗೆಯಬೇಕು.
ಈ ಮಾಸ್ಕ್ ವಾರಕ್ಕೆ 2-3 ಬಾರಿ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ. ಕೊಕೊ ಪೌಡರ್ ಬದಲು ಎಣ್ಣೆಯುಕ್ತ ಚರ್ಮದವರು ಮುಲ್ತಾನಿಮಿಟ್ಟಿ ಬಳಸಬಹುದು. ಮೊಡವೆ ನಿವಾರಣೆಯೊಂದಿಗೆ ಕಲೆಯನ್ನು ನಿವಾರಿಸಿ ಮೊಗದ ಚರ್ಮವನ್ನು ಟೋನ್ ಮಾಡುವಂತಹ ಟೋನರ್ ಇಂತಿದೆ.
ವಿಧಾನ: 4 ಔನ್ಸ್ ಬಿಸಿನೀರಿನಲ್ಲಿ 4 ಟೀಬ್ಯಾಗ್‌ಗಳನ್ನು ಹಾಕಿ ಡಿಪ್ ಮಾಡಿ ತೆಗೆಯಬೇಕು. ತದನಂತರ 2-3 ಹನಿಗಳಷ್ಟು ಶುದ್ಧ ಲ್ಯಾವೆಂಡರ್ ತೈಲವನ್ನು ಬೆರೆಸಬೇಕು. ತಣಿದ ನಂತರ ಹತ್ತಿಯ ಉಂಡೆಗಳನ್ನು ಡಿಪ್ ಮಾಡಿ ಮುಖಕ್ಕೆ ವರ್ತುಲಾಕಾರವಾಗಿ ಮಾಲೀಶು ಮಾಡಬೇಕು. ಇದು ಕಾಂತಿವರ್ಧಕವೂ ಹೌದು.
ಮೊಡವೆಗೆ ಉಪಚಾರ.ತುಳಸಿಯ ಎಲೆಗಳನ್ನು ಒಣಗಿಸಿ ಹುಡಿಮಾಡಿ. ಇದನ್ನು ಬಿಸಿನೀರಿನೊಂದಿಗೆ ಲೇಪಿಸಿದರೆ ಮೊಡವೆ ನಿವಾರಣೆಯಾಗುತ್ತದೆ.
.ಟೊಮೆಟೋರಸ, ನಿಂಬೆರಸ, ಜೇನು ಬೆರೆಸಿ ಲೇಪಿಸಿದರೆ ಮೊಡವೆ ಮತ್ತು ಕಲೆ ನಿವಾರಣೆಯಾಗುತ್ತದೆ.
.ಬೇವಿನರಸ ಅಥವಾ ಇಂಗಿನ ನೀರು ಲೇಪಿಸಿದರೆ ಮೊಡವೆ ಮಾಯುತ್ತದೆ. ಡಾ. ಅನುರಾಧಾ ಕಾಮತ್