Advertisement

ಅತ್ಯಾಧುನಿಕ ಆರೋಗ್ಯ ಸೇವೆಯ ಅನನ್ಯತೆ ; A.J. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ

03:34 AM Jun 30, 2020 | Hari Prasad |

ಗುಣಮಟ್ಟದ ಆರೋಗ್ಯ ಸೇವೆ ಅಂದಾಗ ನೆನಪಾಗುವುದೇ ಕಡಲ ಕಿನಾರೆಯಲ್ಲಿರುವ ಸುಂದರ ನಗರ ಮಂಗಳೂರು.

Advertisement

ಅದರಲ್ಲಿಯೂ ಇಲ್ಲಿನ ಗುಣಮಟ್ಟದ ಆರೋಗ್ಯ ಸೇವೆಯನ್ನರಸಿ ದೇಶ-ವಿದೇಶದಿಂದ ಜನರು ಈ ಕಡಲ ನಗರಿ ಮಂಗಳೂರಿಗೆ ಬಂದು ಹೋಗುತ್ತಿದ್ದಾರೆ.

ಏಕೆಂದರೆ, ಮಂಗಳೂರಿನಲ್ಲಿರುವ ಸುಸಜ್ಜಿತ ಅತ್ಯಾಧುನಿಕ ಆಸ್ಪತ್ರೆಗಳು ಹಾಗೂ ತಜ್ಞ ವೈದ್ಯರ ಸೇವೆಯಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದು ಮೆಡಿಕಲ್‌ ಟೂರಿಸಂನಲ್ಲಿಯೂ ಈ ನಮ್ಮ ಕರಾವಳಿಗೆ ವಿಪುಲ ಅವಕಾಶಗಳನ್ನು ತೆರೆದಿಡುತ್ತಿರುವುದಕ್ಕೆ ಇಲ್ಲಿರುವ ಸುಸಜ್ಜಿತವಾದ ಆಸ್ಪತ್ರೆಗಳೇ ಸಾಕ್ಷಿ.

ಹೀಗಿರುವಾಗ, ತ್ವರಿತವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಸ್ಪತ್ರೆಗಳ ಸಾಲಿನಲ್ಲಿ ಕುಂಟಿಕಾನದ ಎ.ಜೆ. ಆಸ್ಪತ್ರೆಯ ಹೆಸರು ಮುಂಚೂಣಿಯಲ್ಲಿದೆ.

‘ರೋಗಿಗಳ ಸೇವೆಯೇ ಜೀವನದ ಅತ್ಯುನ್ನತ ಸೇವೆ’ ಎನ್ನುವ ಆಸ್ಪತ್ರೆಯ ಚೇರ್‌ಮನ್‌, ವೈದ್ಯರು, ಸಿಬಂದಿಯ ಆಶಯ ಈ ಆಸ್ಪತ್ರೆ ನೀಡುತ್ತಿರುವ ಆರೋಗ್ಯ ಸೇವೆ ಎಲ್ಲೆಡೆ ಗುರುತಿಸಿಕೊಳ್ಳಲು ಕಾರಣವಾಗಿರುವುದರ ಹಿಂದಿನ ಬಲು ದೊಡ್ಡ ಶಕ್ತಿ.

Advertisement

ಕುಂಟಿಕಾನದಲ್ಲಿ 2001ರಲ್ಲಿ ಸ್ಥಾಪನೆಗೊಂಡ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇನ್ನೇನು ಎರಡು ದಶಕಗಳ ಯಶಸ್ವಿ ಪಯಣವನ್ನು ಪೂರ್ಣಗೊಳಿಸುವ ಹೊಸ್ತಿಲಿನಲ್ಲಿದೆ. ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯ ದೂರದರ್ಶಿತ್ವವನ್ನಿಟ್ಟುಕೊಂಡು ಶಿಕ್ಷಣ ತಜ್ಞ, ಉದ್ಯಮ ಕ್ಷೇತ್ರದಲ್ಲಿ ಆಳ ಅನುಭವ ಹೊಂದಿರುವ ಡಾ| ಎ.ಜೆ. ಶೆಟ್ಟಿ ಅವರು ‘ಲಕ್ಷ್ಮೀ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌’ ಅಡಿಯಲ್ಲಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು 19 ವರ್ಷಗಳ ಹಿಂದೆ ಹುಟ್ಟುಹಾಕಿದ್ದರು.

ಈ ಸುದೀರ್ಘ‌ ಅವಧಿಯಲ್ಲಿ ರೋಗಿಗಳ ಸೇವೆಯಲ್ಲಿ ಆಸ್ಪತ್ರೆ ಮಾಡಿದ ಸಾಧನೆಗಳು ಹಲವಾರು. ರೋಗ ನಿಯಂತ್ರಣ ಮತ್ತು ರೋಗ ಗುಣಪಡಿಸುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಯಾದ ಎ.ಜೆ. ಸಂಸ್ಥೆ ಪ್ರಸ್ತುತ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿಕೊಂಡು ಜನರ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಜನಸೇವೆಗೆ ಮತ್ತಷ್ಟು ಹತ್ತಿರವಾಗಿಬಿಟ್ಟಿದೆ.

ಅತ್ಯಾಧುನಿಕ ಚಿಕಿತ್ಸಾ ಕೇಂದ್ರ
ಹತ್ತು ಹಲವಾರು ಸಾಧನೆಗಳೊಂದಿಗೆ ಸಾಗಿ ಬಂದ ಎ.ಜೆ. ಆಸ್ಪತ್ರೆಯು ರೋಗಿಗಳ ಆರೈಕೆಯಲ್ಲಿ ಪ್ರಸ್ತುತ ಕರಾವಳಿ ಭಾಗದ ಅತ್ಯಾಧುನಿಕ ದರ್ಜೆಯ ಪ್ರಮುಖ ವೈದ್ಯಕೀಯ ಚಿಕಿತ್ಸಾ ಕೇಂದ್ರವಾಗಿ ಗಮನ ಸೆಳೆದಿದೆ. 1,200 ಬೆಡ್‌ ಗಳ ಸಾಮರ್ಥ್ಯವನ್ನು ಆಸ್ಪತ್ರೆ ಹೊಂದಿದ್ದು, ದಿನವೊಂದಕ್ಕೆ 600ಕ್ಕೂ ಹೆಚ್ಚು ಮಂದಿ ಹೊರ ರೋಗಿ ಮತ್ತು ಒಳರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿರುವುದು ಆಸ್ಪತ್ರೆಯ ಜನಸೇವೆಗೆ ಸಂದ ಹೆಗ್ಗಳಿಕೆಯಾಗಿದೆ.

ವೈದ್ಯಕೀಯ ಶಿಸ್ತಿನೊಂದಿಗೆ ಶಿಕ್ಷಣಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಸಂಸ್ಥೆ ಎ.ಜೆ. ಆಸ್ಪತ್ರೆ. ಡಾ| ಎ. ಜೆ. ಶೆಟ್ಟಿ ಅವರ ದಕ್ಷ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ  ಮುನ್ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಡಾ| ಪ್ರಶಾಂತ್‌ ಮಾರ್ಲ ಕೆ. ಅವರು ವೈದ್ಯಕೀಯ ನಿರ್ದೇಶಕರಾಗಿಯೂ, ಡಾ| ಅಮಿತಾ ಪಿ. ಮಾರ್ಲ ಅವರು ವೈದ್ಯಕೀಯ ಆಡಳಿತಾಧಿಕಾರಿಯಾಗಿಯೂ ಆಸ್ಪತ್ರೆಯ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ
ಆಧುನಿಕ ಎಆರ್‌ಟಿ ಲ್ಯಾಬೋರೇಟರಿ ಮತ್ತು ರೇಡಿಯೋಲಜಿ ಘಟಕಗಳನ್ನೊಳಗೊಂಡ ಈ ಆಸ್ಪತ್ರೆಯಲ್ಲಿ 24 ಗಂಟೆಯೂ ತುರ್ತು ಸೇವೆಗಳನ್ನು ನಿತ್ಯ-ನಿರಂತರವಾಗಿ ನೀಡಲಾಗುತ್ತಿದೆ. ನ್ಯೂಕ್ಲಿಯರ್‌ ಮೆಡಿಸಿನ್‌ ವಿಭಾಗ ತುರ್ತುಸ್ಥಿತಿಯಲ್ಲಿರುವ ಹಲವು ರೋಗಿಗಳ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಿ ಜೀವದಾನ ಮಾಡುವಲ್ಲಿ ಯಶಸ್ವಿಯಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ.

ಆಧುನಿಕ ತಂತ್ರ ಜ್ಞಾನ ಮತ್ತು ಆರೋಗ್ಯ ಉಪಕರಣಗಳನ್ನೊಳಗೊಂಡ ಹೃದ್ರೋಗ ಚಿಕಿತ್ಸಾ ಕೇಂದ್ರ (ಕಾರ್ಡಿಯಾಕ್‌ ಕೇರ್‌ ಸೆಂಟರ್‌) ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾಂಪ್ಲೆಕ್ಸ್‌ ಟ್ರಾನ್ಸ್‌- ಕೆಥೆಡ್ರಲ್‌ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಈ ಭಾಗದ ಮೊದಲ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೂ ಎ.ಜೆ. ಆಸ್ಪತ್ರೆ ಪಾತ್ರವಾಗಿದೆ. ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಮಕ್ಕಳ ಹೃದ್ರೋಗ ಚಿಕಿತ್ಸಾ ಕೇಂದ್ರ ಸ್ಥಾಪಿಸಿದ ಖ್ಯಾತಿಯೂ ಎ.ಜೆ. ಸಂಸ್ಥೆಯದ್ದು.


ಡಾ| ಅಮಿತಾ ಪಿ. ಮಾರ್ಲ, ವೈದ್ಯಕೀಯ ಆಡಳಿತಾಧಿಕಾರಿ

ಹೆಗ್ಗಳಿಕೆಗಳು ಹತ್ತು ಹಲವು
ಕರಾವಳಿ ಭಾಗದಲ್ಲಿ ಮೊದಲ ಬಾರಿಗೆ ಕಿಡ್ನಿ ಕಸಿ (ರೇನಲ್‌ ಟ್ರಾನ್ಸ್‌ಪ್ಲಾಂಟೇಶನ್‌) ಚಿಕಿತ್ಸೆ ಮಾಡಿ ಯಶಸ್ವಿಯಾದ ಕೀರ್ತಿಯೂ ಎ.ಜೆ. ಸಂಸ್ಥೆಯ ಕಿಡ್ನಿ ಕೇರ್‌ ಯುನಿಟ್‌ಗೆ ಸಲ್ಲುತ್ತದೆ. ಗರಿಷ್ಠ ಕಾಳಜಿಯೊಂದಿಗೆ ರೋಗಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮೂತ್ರಕೋಶದ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸುವ ತಜ್ಞ ವೈದ್ಯರು ಈ ಆಸ್ಪತ್ರೆಯಲ್ಲಿದ್ದಾರೆ. ಎಂಡೋಸ್ಕೋಪಿಕ್‌ ಮತ್ತು ಲ್ಯಾಪಾರೋಸ್ಕೋಪಿಕ್‌ ಜನ ಮನ್ನಣೆಗಳಿಸಿರುವ ಚಿಕಿತ್ಸಾ ವಿಧಾನಗಳಾಗಿವೆ. ಇತ್ತೀಚೆಗೆ ಸೇರ್ಪಡೆಯಾದ ವಿನ್ಸಿ ರೋಬೋಟ್‌, ರೋಬೋಟ್‌ ಸರ್ಜರಿ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದೆ.

ಎ.ಜೆ. ಆಸ್ಪತ್ರೆ ಆಧುನಿಕ ಸಲಕರಣೆಗಳನ್ನೊಳಗೊಂಡ ನ್ಯೂರೋ ಸರ್ಜಿಕಲ್‌ ವಿಭಾಗವನ್ನು ಹೊಂದಿದ್ದು, ಅಡ್ವಾನ್ಸ್ಡ್ ಸ್ಪೈನಲ್‌ ಪ್ರೊಸೀಜರ್‌, ಮೈಕ್ರೋ ಸರ್ಜರಿ ಮತ್ತು ಎಂಡೋಸ್ಕೋಪಿಕ್‌ ಸರ್ಜರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ತಜ್ಞ ಪ್ಲಾಸ್ಟಿಕ್‌ ಸರ್ಜರಿ ವೈದ್ಯರು ಪ್ಲಾಸ್ಟಿಕ್‌ ಸರ್ಜರಿ ವಿಭಾಗದಲ್ಲಿದ್ದು, ಆಸ್ತೆಟಿಕ್‌ ಪ್ರಕ್ರಿಯೆ ಸಾಮಾನ್ಯವಾಗಿ ಮಾಡುವ ಪ್ಲಾಸ್ಟಿಕ್‌ ಸರ್ಜರಿಯಾಗಿದೆ. ಜಠರ ಮತ್ತು ಕರುಳು ಚಿಕಿತ್ಸಾ ವಿಭಾಗವು ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸಾ ಪ್ರಕ್ರಿಯೆಗಳ ಮೂಲಕ ಎಲ್ಲ ರೀತಿಯ ಜೀರ್ಣಕ್ರಿಯೆ ಸಂಬಂಧಿತ ರೋಗಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಆರ್ಥೋಪೆಡಿಕ್‌, ಆರ್ಥೋಸ್ಕೋಪಿ, ಕೀಲು ಮರುಜೋಡಣೆ (ಜಾಯಿಂಟ್‌ ರೀಪ್ಲೇಸ್‌ಮೆಂಟ್‌) ಕ್ಷೇತ್ರದಲ್ಲಿ ನುರಿತ ವೈದ್ಯರ ತಂಡವಿದ್ದು, ಆಧುನಿಕ ತಾಂತ್ರಿಕತೆ, ಕರ್ತವ್ಯನಿಷ್ಠ ವೈದ್ಯರ ಶ್ರಮದೊಂದಿಗೆ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದೆ.

ಎ.ಜೆ. ಕ್ಯಾನ್ಸರ್‌ ಕೇಂದ್ರದಲ್ಲಿ ಉತ್ತಮ ಕ್ಯಾನ್ಸರ್‌ ಚಿಕಿತ್ಸೆ ಮತ್ತು ಕೀಮೋಥೆರಪಿ, ರೇಡಿಯೇಶನ್‌, ಶಸ್ತ್ರಚಿಕಿತ್ಸೆ, ಹೆಮೇಟೋ – ಆಂಕಾಲಜಿ, ನೋವು ನಿವಾರಕ ತಾಂತ್ರಿಕತೆಯೊಂದಿಗೆ ನೀಡಲಾಗುತ್ತಿದೆ. ಈ ವಿಭಾಗ ಸಂಪೂರ್ಣ ಪೆಟ್‌-ಸಿಟಿ ಮತ್ತು ಅಯೋಡಿನ್‌ ಥೆರಪಿ ವಾರ್ಡ್‌ನ್ನು ಹೊಂದಿದೆ.


ಪ್ರಶಾಂತ್‌ ಶೆಟ್ಟಿ, ಉಪಾಧ್ಯಕ್ಷರು

ಮಾನಸಿಕ ಆರೋಗ್ಯ ವೃದ್ದಿಗೂ ಚಿಕಿತ್ಸೆ
ವೈದ್ಯಕೀಯ ಕ್ಷೇತ್ರದ ಶಿಸ್ತನ್ನು ಪಾಲಿಸುತ್ತಾ ರೋಗಿಗಳ ಸೇವೆಯಲ್ಲಿ ನಿರತ ಎ.ಜೆ. ಆಸ್ಪತ್ರೆಯ ವೈದ್ಯಕೀಯ ಸಿಬಂದಿ ರೋಗಿಗಳ ಕಾಳಜಿಯನ್ನು ಬದ್ಧತೆಯೆಂಬಂತೆ ನಿರ್ವಹಿಸುತ್ತಿದೆ. ರೋಗಿಗಳ ದೇಹದ ರೋಗವನ್ನು ಹೋಗಲಾಡಿಸುವುದು ಮಾತ್ರವಲ್ಲ, ಮಾನಸಿಕ ಆರೋಗ್ಯವೃದ್ಧಿಗೂ  ಚಿಕಿತ್ಸೆ ನೀಡುತ್ತಿದೆ.

ರೋಗ ವಾಸಿಯಾಗಲು ರೋಗಿಯ ಮಾನಸಿಕ ಸದೃಢತೆ ಮುಖ್ಯ. ಹಾಗಾಗಿ ಯಾವುದೇ ರೋಗಿ ಇಲ್ಲಿ ದಾಖಲಾದಾಗ, ಆಸ್ಪತ್ರೆಯಲ್ಲಿ ಇರುವಷ್ಟು ದಿನ ಚಿಕಿತ್ಸೆ ನೀಡುವುದರೊಂದಿಗೆ ಮಾನಸಿಕವಾಗಿ ಸದೃಢವಾಗಿಸುವ ಮೂಲಕ ಶೀಘ್ರ ರೋಗ ಗುಣಮುಖವಾಗುವಂತೆ ನೋಡಿಕೊಳ್ಳುವುದು ಇಲ್ಲಿನ ವೈದ್ಯರ ವೈಶಿಷ್ಟ್ಯ.

ರೋಗಿ ಸ್ನೇಹಿ ವಾತಾವರಣ
ಆಸ್ಪತ್ರೆಯ ಕ್ಯಾಂಪಸ್‌ ಪ್ರವೇಶಿಸುವಾಗಲೇ ಕಾಯಿಲೆ ವಾಸಿಯಾಗಬಲ್ಲಂತಹ ಪೂರಕ ವಾತಾವರಣ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿದೆ. ಆಸ್ಪತ್ರೆಯ ಇಡೀ ಕ್ಯಾಂಪಸ್‌ನಲ್ಲಿ  ಹಸಿರಿನ ವಾತಾವರಣವಿದ್ದು, ರೋಗ ವಾಸಿಯ ಜತೆಗೆ ಮನಸ್ಸು ಮುದಗೊಳಿಸುವ ತಾಣವೆಂದರೂ ತಪ್ಪಾಗದು.

ಎ.ಜೆ. ಆಸ್ಪತ್ರೆ NABH ಮಾನ್ಯತೆ ಪಡೆದಿದೆ. ಇಲ್ಲಿನ ಆರೋಗ್ಯ ಕಾಳಜಿ ಗಮನಿಸಿ ಅಸೋಸಿಯೇಶನ್‌ ಆಫ್‌ ಹೆಲ್ತ್‌ ಕೇರ್‌ ಪ್ರೊವೈಡರ್ ಇನ್‌ ಇಂಡಿಯಾ (ಎಎಚ್‌ಪಿಐ) ಸಂಸ್ಥೆಯು ‘ರೋಗಿಸ್ನೇಹಿ ಆಸ್ಪತ್ರೆ’ ಹಾಗೂ ಮಾನ್ಯತೆಗೂ ಮೀರಿದ ಗುಣಮಟ್ಟದ ಆಸ್ಪತ್ರೆ (ಕ್ವಾಲಿಟಿ ಬಿಯೊಂಡ್‌ ಆಕ್ರಿಡಿಯೇಶನ್‌)’ ಎಂಬ ಹೆಗ್ಗಳಿಕೆಯೊಂದಿಗೆ ಪ್ರಶಸ್ತಿ ನೀಡಿದೆ.

ರೋಬೋಟ್‌ ಶಸ್ತ್ರಚಿಕಿತ್ಸೆ


ಕರಾವಳಿ ಕರ್ನಾಟಕದ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ, ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಅತ್ಯುತ್ಕೃಷ್ಟ ಸಂಶೋಧನೆ ಎಂದು ಹೇಳಬಹುದಾದ ‘ರೋಬೋಟ್‌ ಸಹಾಯಕ ಶಸ್ತ್ರ ಚಿಕಿತ್ಸಾ ವ್ಯವಸ್ಥೆ’ ಪ್ರಾರಂಭಗೊಂಡಿದೆ.

‘ಡ ವಿನ್ಸಿ 4ನೇ ತಲೆಮಾರಿನ ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆ’ ಎನ್ನುವ ಅತ್ಯಂತ ಸುಧಾರಿತ ಶಸ್ತ್ರಚಿಕಿತ್ಸಾ ವಿಧಾನ ಇದಾಗಿದ್ದು, ಎ.ಜೆ. ಆಸ್ಪತ್ರೆಯು ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ ಆಸ್ಪತ್ರೆಯಾಗಿದೆ.

ಶಸ್ತ್ರಚಿಕಿತ್ಸಕರ ಉಪಸ್ಥಿತಿಯಲ್ಲಿಯೇ, ರೋಬೋಟ್‌ ಸಹಾಯದಿಂದ ಶಸ್ತ್ರಚಿಕಿತ್ಸೆ ಮಾಡಬೇಕಾದ ನಿಶ್ಚಿತ ಪ್ರದೇಶವನ್ನು ದೊಡ್ಡದಾಗಿ ಕಾಣುವಂತೆ ಮಾಡಿ ಅತ್ಯಂತ ನಿಖರ ಹಾಗೂ ಕರಾರುವಕ್ಕಾದ ಶಸ್ತ್ರಚಿಕಿತ್ಸೆಯ ಮೂಲಕ ಅಷ್ಟೇ ನಿಖರ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ಪಡೆಯುವ ಶಸ್ತ್ರಚಿಕಿತ್ಸೆಯೇ ‘ಡ ವಿನ್ಸಿ ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆ’.

ರೋಬೋಟ್‌ ಎಂದರೆ ಎಲ್ಲರಿಗೂ ತಿಳಿದಿರುವಂತೆ ಸ್ವಯಂಚಾಲಿತ ಯಂತ್ರ ಮಾನವ. ಪ್ರಸ್ತುತ ಶಸ್ತ್ರಚಿಕಿತ್ಸೆಯಲ್ಲಿ ಈ ರೋಬೋಟ್‌ ಎನ್ನುವುದು ಶಸ್ತ್ರಚಿಕಿತ್ಸಕನಿಗೆ ಎಂದೂ ಪರ್ಯಾಯವಲ್ಲ. ಬದಲಾಗಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಮುಖ್ಯ ಮಾನವ ಶಸ್ತ್ರಚಿಕಿತ್ಸಕನಿಗೆ ಸಹಾಯಕನಾಗಿ ನಿಂತು ನಿರ್ದಿಷ್ಟ ಶಸ್ತ್ರಚಿಕಿತ್ಸೆಯನ್ನು ಇನ್ನಷ್ಟು ನಿಖರವಾಗಿ, ಸಮಂಜಸವಾಗಿ ಮಾಡುವಲ್ಲಿ ಸಹಾಯ ಮಾಡಬಲ್ಲದು ಮಾತ್ರ.

ಡ ವಿನ್ಸಿ 4ನೇ ತಲೆಮಾರಿನ ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ ವ್ಯವಸ್ಥೆಯ ಉಪಯೋಗಗಳು

1. ಅತ್ಯಂತ ಕಡಿಮೆ ಅವಧಿಯ ಆಸ್ಪತ್ರೆಯ ವಾಸ.

2. ಅತ್ಯಂತ ಕಡಿಮೆ ಪ್ರಮಾಣದ ನೋವು. ಹೆಚ್ಚು ಅರಾಮದಾಯಕ ಅನುಭವ.

3. ಶೀಘ್ರ ಚೇತರಿಕೆ. ದೈನಂದಿನ ಚಟುವಟಿಕೆ ಗಳಿಗೆ ಶೀಘ್ರ ಮರಳುವಿಕೆ ಸಾಧ್ಯ.

4. ಶಸ್ತ್ರಚಿಕಿತ್ಸಾ ಪ್ರಾರಂಭದಲ್ಲಿ ಚರ್ಮದ ಮೇಲೆ ಮಾಡಲ್ಪಡುವ ಕೃತಕ ಗಾಯವು (ಇನ್ಸಿಶನ್‌) ಅತಿ ಚಿಕ್ಕದಾಗಿರುತ್ತದೆ. ಹಾಗಾಗಿ ಸೋಂಕು ಆಗುವ ಸಾಧ್ಯತೆ ತುಂಬಾ ಕಡಿಮೆ.

5. ಕನಿಷ್ಠ ಪ್ರಮಾಣದ ಕಲೆ (ಗಾಯದ ಕಲೆ)

6. ಅತ್ಯಂತ ನಿಖರ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಫಲಿತಾಂಶವೂ ಅಷ್ಟೇ ಖಚಿತವಾಗಿದ್ದು ರೋಗಿಯು ಶೀಘ್ರವಾಗಿ ರೋಗದಿಂದ ಮುಕ್ತಿ ಪಡೆಯಲು ಸಾಧ್ಯ.

ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಈ ವಿಧಾನವನ್ನು ಪ್ರಯೋಗಿಸಲಾಗುತ್ತಿದ್ದು  ಎಲ್ಲಾ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ, ಮೂತ್ರ ರೋಗ ಸಂಬಂಧಿ ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಶಸ್ತ್ರಚಿಕಿತ್ಸೆ, ಜಠರ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ, ಬೆರಿಯಾಟ್ರಿಕ್‌ ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ.

ಶೇ.85ರಷ್ಟು ಮಹಿಳಾ ಉದ್ಯೋಗಿಗಳು!
ಶೇ. 85ರಷ್ಟು ಮಹಿಳಾ ಉದ್ಯೋಗಿಗಳಿರುವುದು ಎ.ಜೆ. ಆಸ್ಪತ್ರೆಯ ವೈಶಿಷ್ಟ್ಯವಾಗಿದೆ. ಮಹಿಳಾ ಸಬಲೀಕರಣ ಮತ್ತು ಮಹಿಳೆಯರು ವೈದ್ಯಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕೆಂಬ ಉದ್ದೇಶದಿಂದ ತಮ್ಮ ಸಂಸ್ಥೆಯಲ್ಲಿ ಶೇ. 85ರಷ್ಟು ಮಹಿಳಾ ಉದ್ಯೋಗಿಗಳಿಗೇ ಉದ್ಯೋಗ ಅವಕಾಶ ನೀಡಿರುವುದು ವೈದ್ಯಕೀಯ ಕ್ಷೇತ್ರದಲ್ಲೇ ದೊಡ್ಡ ಮೈಲುಗಲ್ಲು. ಮಹಿಳಾ ಉದ್ಯೋಗಿಗಳ ಕರ್ತವ್ಯನಿಷ್ಠೆ ಮತ್ತು ಕಾರ್ಯತತ್ಪರತೆಯೇ ಆಸ್ಪತ್ರೆಯ ಏಳಿಗೆಯ ಹಿಂದಿನ ಶಕ್ತಿಯೂ ಆಗಿದೆ.

ಎ.ಜೆ. ಸಮೂಹ ಸಂಸ್ಥೆಗಳು

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಡೆಂಟಲ್‌ ಸೈನ್ಸಸ್‌

– ಲಕ್ಷ್ಮೀ ಮೆಮೋರಿಯಲ್‌ ಕಾಲೇಜ್‌ ಆಫ್‌ ಫಿಸಿಯೋಥೆರಪಿ

– ಲಕ್ಷ್ಮೀ ಮೆಮೋರಿಯಲ್‌ ಕಾಲೇಜ್‌ ಆಫ್‌ ನರ್ಸಿಂಗ್‌

– ಲಕ್ಷ್ಮೀ ಮೆಮೋರಿಯಲ್‌ ಕಾಲೇಜ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌

– ಮೋತಿ ಮಹಲ್‌ ಕಾಲೇಜ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಹಾಸ್ಪಿಟಲ್‌ ಮ್ಯಾನೇಜ್‌ಮೆಂಟ್‌

– ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ

ಉತ್ಕೃಷ್ಟ ವೈದ್ಯಕೀಯ ಸೇವೆಯ ಆಶಯ: ಡಾ| ಎ.ಜೆ.ಶೆಟ್ಟಿ, ಅಧ್ಯಕ್ಷರು


ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸುವುದು ಸಂಸ್ಥೆಯ ಮುಖ್ಯಸ್ಥರ ಆಶಯ. ಈ ಆಶಯಕ್ಕೆ ಬದ್ಧರಾಗಿ ರೋಗಿಗಳ ನಿಷ್ಕಳಂಕ ಸೇವೆಯಲ್ಲಿ ತೊಡಗಿಸಿಕೊಂಡು ಉನ್ನತ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ವೈದ್ಯ ಸಮೂಹ, ರೋಗಿಗಳ ಆರೈಕೆಯಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡಿರುವ ನರ್ಸ್‌ಗಳು ಮತ್ತು ಸಿಬಂದಿ ಬಳಗವನ್ನು ಆಸ್ಪತ್ರೆ ಹೊಂದಿದೆ. ಕರಾವಳಿ ಕರ್ನಾಟಕ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಹೆಸರು ರಾರಾಜಿಸಲು ಇವರ ಶ್ರಮವೂ ದೊಡ್ಡದಿದೆ ಎಂದು ನೆನೆಯುತ್ತಾರೆ ಸಂಸ್ಥೆಯ ಮುಖ್ಯಸ್ಥರು.

ವೈದ್ಯಕೀಯ ನಿರ್ದೇಶಕರ ಸಂತೃಪ್ತ ನುಡಿ: ಡಾ| ಪ್ರಶಾಂತ್‌ ಮಾರ್ಲ ವೈದ್ಯಕೀಯ ನಿರ್ದೇಶಕರು


ಮಂಗಳೂರಿನ ಕುಂಟಿಕಾನದಲ್ಲಿ ಆಸ್ಪತ್ರೆಯೊಂದನ್ನು ನಿರ್ಮಿಸಬೇಕೆಂದು ಮೊದಲು ಯೋಚನೆ ಮತ್ತು ಯೋಜನೆ ಮಾಡಿದ್ದು 1994ರಲ್ಲಿ. ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಹೊಂದಿರುವ ಸೂಪ‌ರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನಮ್ಮ ಉದ್ದೇಶವಾಗಿತ್ತು. ಏಕೆಂದರೆ, ಆಗ ಜನರು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಹುಡುಕಿಕೊಂಡು ಬೆಂಗಳೂರು, ಚೆನ್ನೈಗೆ ಹೋಗುತ್ತಿದ್ದರು.

ಹೀಗಾಗಿ, 2001ರಲ್ಲಿ ರೇಡಿಯಾಲಜಿ, ಯೂರೋಲಜಿ, ನೆಫ್ರಾಲಜಿಯಂಥ ವಿಭಾಗಗಳೊಂದಿಗೆ ಪ್ರಾರಂಭವಾದ ಎ.ಜೆ. ಆಸ್ಪತ್ರೆಯು ಕಳೆದ 19 ವರ್ಷಗಳಿಂದ ಒಂದೊಂದೇ ಹೊಸ ಚಿಕಿತ್ಸಾ ವಿಭಾಗ ಸೇರ್ಪಡೆಗೊಳಿಸಿ ಅದಕ್ಕೆ ಪೂರಕವಾಗುವ ವೈದ್ಯಕೀಯ ಸಲಕರಣೆ ಅಳವಡಿಸಿಕೊಂಡು ಈ ಹಂತಕ್ಕೆ ಬೆಳೆದಿದೆ.

ಈಗ ನಮ್ಮ ಆಸ್ಪತ್ರೆಯಲ್ಲಿ ಅತ್ಯಂತ ಸುಧಾರಿತ‌ ರೊಬೊಟಿಕ್ಸ್‌ ಸರ್ಜರಿ ವ್ಯವಸ್ಥೆಯಿದ್ದು, ಈ ಮಾದರಿ ರೊಬೊಟಿಕ್‌ ಚಿಕಿತ್ಸಾ ತಂತ್ರಜ್ಞಾನ ಸದ್ಯ ದೇಶದ ಎರಡು ಕಡೆ ಮಾತ್ರವಿದೆ.  ಹಾಗೆಯೇ, ಇನ್ನೂ ಹೊಸ ಮೂರು ಚಿಕಿತ್ಸಾ ವಿಭಾಗ ಪ್ರಾರಂಭಕ್ಕೂ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ.

50 ಬೆಡ್‌ಗಳೊಂದಿಗೆ ಪ್ರಾರಂಭವಾದ ಎ.ಜೆ. ಆಸ್ಪತ್ರೆ ಈಗ 425 ಬೆಡ್‌ಗಳ ಸೌಲಭ್ಯ ಹೊಂದಿದೆ. ಎಲ್ಲ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಒಂದೆ‌ಡೆ ಲಭಿಸುವ ಕರಾವಳಿ ಕರ್ನಾಟಕದ ಏಕೈಕ ಆಸ್ಪತ್ರೆ ನಮ್ಮದು ಎನ್ನುವ ಹೆಮ್ಮೆ ಈಗ ನಮಗಿದೆ. ರೋಗಿಗಳು ಒಮ್ಮೆ ಈ ಆಸ್ಪತ್ರೆಗೆ ಬಂದ ಬಳಿಕ ಯಾವುದೇ ಚಿಕಿತ್ಸೆಗೂ ಬೇರೆಡೆಗೆ ಹೋಗುವ ಅಗತ್ಯವಿಲ್ಲ. ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಬೋನ್‌ಮ್ಯಾರಾ ಟ್ರಾನ್ಸ್‌ ಪ್ಲಾಂಟ್‌ನಂಥ ಚಿಕಿತ್ಸೆಯೂ ಶೀಘ್ರ ನಮ್ಮಲ್ಲಿ ಪ್ರಾರಂಭವಾಗುತ್ತಿದೆ.

ಈ ಕ್ಯಾಂಪಸ್‌ನೊಳಗೆ ತೀರಾ ಬಡ ರೋಗಿಗಳು ಚಿಕಿತ್ಸೆಗೆ ಬಂದರೂ ನಮ್ಮ ಮೆಡಿಕಲ್‌ ಕಾಲೇಜಿನಲ್ಲಿ ಪ್ರತ್ಯೇಕ 850 ಬೆಡ್‌ಗಳ ಚಿಕಿತ್ಸಾ ಸೌಲಭ್ಯವಿದೆ. ನಮ್ಮ ಅಧ್ಯಕ್ಷರಾದ ಎ.ಜೆ.  ಶೆಟ್ಟಿ ಅವರ ಕನಸು ಏನಿತ್ತು ಅಂದರೆ, ಯಾವುದೇ ರೋಗಿಗಳು ಈ ಆಸ್ಪತ್ರೆಗೆ ಬಂದ ಬಳಿಕ ಅವರ ಕಾಯಿಲೆ ಗುಣಪಡಿಸುವ ಚಿಕಿತ್ಸಾ ಸೌಲಭ್ಯ ಇಲ್ಲಿಲ್ಲ ಅಂದುಕೊಂಡು ಬೇರೆಡೆಗೆ ಹೋಗುವ ಸಂದರ್ಭ ಬರಬಾರದು. ಜತೆಗೆ, ದುಡ್ಡಿಲ್ಲ ಎಂಬ ಕಾರಣಕ್ಕೆ ಇಲ್ಲಿಗೆ ಬಂದವರು ಬೇರೆಡೆಗೆ ಅಲೆದಾಡುವ ಪರಿಸ್ಥಿತಿ ಬರಬಾರದು ಎನ್ನುವ ಕಾಳಜಿ ಅವರದ್ದು.

ಏಕೆಂದರೆ, ಆಸ್ಪತ್ರೆಗಳು ಒಂದು ಲಾಭದಾಯಕ ಉದ್ಯಮವಾಗದೆ ಬಡವರಿಗೂ ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳು ದೊರೆಯಬೇಕು ಎನ್ನುವುದು ಅವರ ಆಶಯ ಮತ್ತು ನಿರೀಕ್ಷೆ ಯಾಗಿತ್ತು. ಹೀಗಾಗಿ, ನಮ್ಮ ದೇಶದ ಯಾವುದೇ ಆಸ್ಪತ್ರೆಯಲ್ಲಿ ಲಭ್ಯವಾಗುವ ಚಿಕಿತ್ಸಾ ಸೌಲಭ್ಯಗಳು ನಮ್ಮಲ್ಲಿಯೂ ಇವೆ.

ಹೆಲ್ತ್‌ಕೇರ್‌ ಸೇವೆಗಳು ಅತ್ಯಂತ ಕಡಿಮೆ ದರದಲ್ಲಿ ದೊರೆಯಬೇಕೆಂಬುದು ಎಲ್ಲರ ನಿರೀಕ್ಷೆ. ಆದರೆ ಹೆಲ್ತ್‌ಕೇರ್‌ ಅನ್ನು ಅಫೋರ್ಡೇಬಲ್‌ ಮಾಡಬಹುದೇ ಹೊರತು ಅಗ್ಗದ ದರದಲ್ಲಿ ನೀಡುವುದು ಅಸಾಧ್ಯ. ಹೀಗಾಗಿ, ಖಾಸಗಿ ಹೆಲ್ತ್‌ಕೇರ್‌ ಬಹಳ ದುಬಾರಿ ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ.

ಮೆಡಿಕಲ್‌ ಟೂರಿಸಂಗೆ ವಿಪುಲ ಅವಕಾಶ
ಕರಾವಳಿಯಲ್ಲಿ ಮೆಡಿಕಲ್‌ ಟೂರಿಸಂಗೆ ಉತ್ತಮ ಅವಕಾಶಗಳಿದ್ದು, ಸದ್ಯ ನಮ್ಮಲ್ಲೂ ಶೇ.10ರಷ್ಟು ರೋಗಿಗಳು ವಿದೇಶದಿಂದ ಬಂದು ಹೋಗುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್‌ ಟೂರಿಸಂ ಉತ್ತೇಜಿಸುವುದಕ್ಕೆ ಪೂರಕ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಂಗಳೂರು ವಿಮಾನ ನಿಲ್ದಾಣ ಹೆಚ್ಚು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ಇನ್ನೂ ಮೇಲ್ದರ್ಜೆಗೇರದಿರುವ ಕಾರಣದಿಂದಲೂ ಹೆಲ್ತ್‌ ಟೂರಿಸಂಗೆ ಹಿನ್ನಡೆಯಾಗುತ್ತಿದೆ.

ಇಲ್ಲಿನ ಬಹುತೇಕ ಆಸ್ಪತ್ರೆಗಳು ವಿಶ್ವ ದರ್ಜೆಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದು, ಬೆಂಗಳೂರಿನಂಥ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಚಿಕಿತ್ಸಾ ವೆಚ್ಚವೂ ಕಡಿಮೆಯಿದೆ. ಹೀಗಿರುವಾಗ, ಮಂಗಳೂರಿನಲ್ಲಿ ಹೆಲ್ತ್‌ ಟೂರಿಸಂಗೆ ಹೆಚ್ಚಿನ ಅವಕಾಶ- ಅನುಕೂಲಗಳಿದ್ದರೂ ಅದನ್ನು ಗುರುತಿಸಿ ಪೂರಕ ವಾತಾವರಣ ಕಲ್ಪಿಸುವ ಕೆಲಸ ಆಗುತ್ತಿಲ್ಲ.

ಕೋವಿಡ್‌ಗೆ ಹೆದರಬೇಡಿ
ಈಗಿನ ಪರಿಸ್ಥಿತಿ ಗಮನಿಸುವಾಗ ಪ್ರತೀಯೊಬ್ಬರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು. ಇನ್ನೊಂದೆಡೆ, ಈಗ ಕೋವಿಡ್‌ ಸಾಕಷ್ಟು ಸವಾಲು ತಂದೊಡ್ಡಿದ್ದು, ನಾವು ಕೂಡ ಇನ್ನುಮುಂದೆ ಕೋವಿಡ್ ನಡುವೆ ಸುರಕ್ಷಿತವಾಗಿ ಹೇಗೆ ಬದುಕಬೇಕೆಂಬುದನ್ನು ಕಲಿಯುವುದು ಅನಿವಾರ್ಯ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್ ನಿಂದ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದು, ಸಾವಿನ ಸಂಖ್ಯೆ ಕಡಿಮೆಯಿದೆ. ಹೀಗಿರುವಾಗ, ಜನರು ಹೆಚ್ಚು ಗಾಬರಿಯಾಗುವ ಅಗತ್ಯವಿಲ್ಲ.

ಹಾಗೆಯೇ, ಆಸ್ಪತ್ರೆಗಳಿಗೆ ಬರುವುದರಿಂದ ಕೊರೊನಾ ಬರುತ್ತದೆ ಎನ್ನುವ ಭಯವೂ ಜನರಿಗಿದೆ. ಪರಿಣಾಮ, ಗಂಭೀರ ಪ್ರಕರಣಗಳಲ್ಲಿಯೂ ಕೋವಿಡ್ ಗೆ ಹೆದರಿ ಮನೆಯಲ್ಲಿ ಕುಳಿತು ಕೊಂಡ ಪರಿಣಾಮ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಹೀಗಾಗಿ, ತುರ್ತು ಚಿಕಿತ್ಸಾ ಸಂದರ್ಭದಲ್ಲೂ ಕೋವಿಡ್‌ಗೆ ಅಂಜಿ ಜನರು ಆಸ್ಪತ್ರೆಗೆ ಬರುವುದಕ್ಕೆ ಹೆದರಿಕೊಳ್ಳಬಾರದು.

ವೈದ್ಯರ ದಿನಾಚರಣೆಯ ಶುಭ ಸಂದರ್ಭದಲ್ಲಿ ಸಮಸ್ತ ವೈದ್ಯ ಬಾಂಧವರಿಗೆ ಶುಭಾಶಯಗಳು


Advertisement

Udayavani is now on Telegram. Click here to join our channel and stay updated with the latest news.

Next