Advertisement

ಸಸ್ಯ ಲೋಕದಲ್ಲಿ ಸ್ಯಾನಿಟೈಸರ್

01:22 AM Jul 03, 2020 | Hari Prasad |

ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಸ್ಯಾನಿಟೈಸರ್‌ಗಳ ಬಳಕೆ ಸೋಂಕುಗಳನ್ನು ತಡೆಗಟ್ಟುವಲ್ಲಿ, ನಿಯಂತ್ರಣದಲ್ಲಿ ಇರಿಸಲು ಉಪಯುಕ್ತವಾಗಿ ಕಂಡು ಬಂದರೂ ಸಹ,  ಕೆಲ ದುಷ್ಪರಿಣಾಮಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಗಿಡ-ಮೂಲಿಕೆಗಳಿಂದ ಉತ್ಪಾದನೆ ಆಗುವ ಸ್ಯಾನಿಟೈಸರ್ ಮಾರುಕಟ್ಟೆಗೆ ಹೆಚ್ಚು ಹೆಚ್ಚು ಬರಬೇಕಿದೆ.

Advertisement

ಭಾರತೀಯ ಹೆಮ್ಮೆಯ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದಲ್ಲಿ ಸ್ನಾನ, ಪರಿಷೇಕ, ಪ್ರಕ್ಷಾಲನ, ಇತ್ಯಾದಿಗಳನ್ನು ದಿನಚರ್ಯದಲ್ಲಿಯೂ, ರೋಗ ಪರಿಚರ್ಯೆಯಲ್ಲಿ ಉಲ್ಲೇಖೀಸಿದ್ದು ಅದು ಪ್ರಚಲಿತವಾಗಿದೆ.

ಬ್ಯಾಕ್ಟಿರೀಯಾ, ಫ‌ಂಗಸ್‌, ವೈರಸ್‌ಗಳ ಸೋಂಕುಗಳನ್ನು ತಡೆಗಟ್ಟುವಲ್ಲಿ ಈಗಿನ ಸ್ಯಾನಿಟೈಸರ್‌ಗಳನ್ನು ಔಷಧ ಸಸ್ಯಮೂಲಗಳಿಂದ ಉತ್ಪಾದಿಸಬಹುದೇ ಎಂಬ ಜಿಜ್ಞಾಸೆ ಮೂಡಿದೆ.

ರಾಸಾಯನಿಕಗಳಿಂದ (chemical) ತಯಾರಿಸಲ್ಪಟ್ಟ ಸ್ಯಾನಿಟೈಸರ್‌ಗಳ ಬಳಕೆ ಸೋಂಕುಗಳನ್ನು ತಡೆಗಟ್ಟುವಲ್ಲಿ, ನಿಯಂತ್ರಣದಲ್ಲಿ ಇರಿಸಲು ಉಪಯುಕ್ತವಾಗಿ ಕಂಡುಬಂದರೂ ಸಹ,  ಕೆಲ ದುಷ್ಪರಿಣಾಮಗಳು ವರದಿಯಾಗುತ್ತಿವೆ. ಚರ್ಮದಲ್ಲಿ ಅತಿಯಾದ ಉರಿ (Burning sensation), ತುರಿಕೆ, ಕೆಂಪಾಗುವಿಕೆ, ಚರ್ಮಸುಲಿಯಲ್ಪಡುವುದು, ಚರ್ಮದ ಬಣ್ಣ ಕಪ್ಪಾಗುವಿಕೆ ಹಾಗೂ ಅಲರ್ಜಿ ಮತ್ತು ಅಸ್ತಮಾ (ದಮ್ಮು) ಇರುವ ರೋಗಿಗಳಿಗೆ ಲಕ್ಷಣಗಳ ತೀವ್ರತೆ, ಮುಂದೊಂದು ದಿನ ಇನ್ನಿತರ ಅಪಾಯಕಾರಿ ಲಕ್ಷಣಗಳು ಹುಟ್ಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಗಿಡ-ಮೂಲಿಕೆಗಳಿಂದ ಉತ್ಪಾದನೆಗೊಳ್ಳುವ ಸ್ಯಾನಿಟೈಸರ್ ಮಾರುಕಟ್ಟೆಗೆ ಹೆಚ್ಚು ಹೆಚ್ಚು ಬರಬೇಕಿದೆ. ಮನೆಯಲ್ಲಿಯೇ ಇಂತಹ ಸ್ಯಾನಿಟೈಸರ್‌ ತಯಾರಿಸಬಹುದಾಗಿದೆ.

ಅರಿಷ್ಟಕ (ಅಂಟುವಾಳಕಾಯಿ – ರೀಟಾಫ‌ಲ – ಸೋಪ್‌ನಟ್‌)
ಹೆಸರೇ ಹೇಳುವಂತೆ ಇದು ‘ಸಾಬೂನು ಬೀಜ’ಹಳ್ಳಿಗಳಲ್ಲಿ  ಇಂದಿಗೂ ಸಾಬೂನಿನ ಬದಲಾಗಿ ಅಂಟವಾಳಕಾಯಿ ಬಳಕೆಯಲ್ಲಿದೆ. ಸೋಪ್‌ನಟ್‌ ನಿಸ್ಸಂಶಯವಾಗಿ ಅದ್ಭುತ ಕ್ರಿಮಿನಾಶಕ, ಕೊಳೆನಾಶಕ, ಇದರಲ್ಲಿರುವ ಕ್ಷಾರೀಯ ಗುಣದಿಂದ ಸೂಕ್ಷ್ಮಾಣು (ಜೀವಾಣು) ನಾಶವಾಗುತ್ತದೆ. ಅಂಟವಾಳ ಕಾಯಿಯ ಸಿಪ್ಪೆಯನ್ನು ಜಜ್ಜಿ ನೀರಿನಲ್ಲಿ ಕುದಿಸಿದಾಗ ಲೀಟರ್‌ಗಟ್ಟಲೇ ದ್ರಾವಣ ತಯಾರಾಗುತ್ತದೆ. ಒಂದು ಅದ್ಭುತ ಸ್ಯಾನಿಟೈಸರ್‌.

Advertisement

ಶಿರೀಷ(ಬಾಗೆ)ಲ್‌ ಬೆಜಿಯಾ ಲಬ್ಬೇಕ್‌: ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಸ್ನಾನ ಯೋಗಗಲ್ಲಿ, ಧೂಪದ ಯೋಗಗಳಲ್ಲಿ ಶಿರೀಷ ಫ‌ಲ ಬೀಜಗಳನ್ನು ಬಳಸಲಾಗುತ್ತದೆ. ಶಿರೀಷ ಒಂದು ಅತ್ಯುತ್ತಮ ವಿಷಹರ ದ್ರವ್ಯ (ಆ್ಯಂಟಿ ಟಾಕ್ಸಿಕ್‌) ಹಲವಾರು ವಿಧದ ಚರ್ಮರೋಗಗಳಲ್ಲಿ, ವಿಷರೋಗದಲ್ಲಿ, ಶ್ವಾಸಕೋಶ ರೋಗಗಳಲ್ಲಿ ಶಿರೀಷ ಫ‌ಲ ಕಲ್ಪಗಳು ಬಳಕೆಯಲ್ಲಿವೆ. ಶಿರೀಷ ಫ‌ಲ ಬೀಜಗಳನ್ನು ಕುಟ್ಟಿ ಪುಡಿ ಮಾಡಿ ಬಿಸಿನೀರಿನ ಜತೆಗೆ ಮಿಶ್ರಣಮಾಡಿ ಉಜ್ಜುವುದರಿಂದ ನೊರೆ ಬಂದು ಸಾಬೂನುಗಳ ತರಹ ಕೆಲಸ ಮಾಡುತ್ತದೆ. ಪ್ರಾಚೀನ ಭಾರತದ ಒಂದು ಅದ್ಭುತ ಸ್ಯಾನಿಟೈಸರ್‌ ಆಗಿದೆ.

ಶಿರೀಷ ಫ‌ಲ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಉಪಯೋಗಿಸಿದರೆ, ಈಗ ಪ್ರಚಲಿತದಲ್ಲಿರುವ ಯಾವುದೇ ಸ್ಯಾನಿಟೈಸರ್‌ಗಳಿಗೆ ಪರ್ಯಾಯವಾಗಬಲ್ಲದು. ನೈಸರ್ಗಿಕವಾಗಿ ಶಿರೀಷದಲ್ಲಿ ವಿಷನಾಶಕ ಸ್ವಭಾವ ಇರುವುದರಿಂದ ಬ್ಯಾಕ್ಟೀರಿಯಾ, ಫ‌ಂಗಸ್‌, ವೈರಸ್‌ಗಳಿಂದ ಉಂಟಾಗುವ ಹಲವಾರು ಚರ್ಮರೋಗಗಳನ್ನು ತಡೆಗಟ್ಟುತ್ತದೆ ಮತ್ತು ನಿವಾರಿಸುತ್ತದೆ. ತಲೆಯ ಮೇಲಿನ ಹೊಟ್ಟು ನಿವಾರಕ, ತುರಿಕೆ ಕಡಿಮೆ ಮಾಡುತ್ತದೆ. ಉತ್ತಮ ಶ್ಯಾಂಪೂಗಳು, ಸಾಬೂನುಗಳು ಲಭ್ಯವಿದೆ. Body wash lotion ಆಗಿ ಹೆಚ್ಚಿನ ಮಹತ್ವ ಪಡೆದಿದೆ.

ಧಾನ್ಯಕ (ಕೊತ್ತಂಬರಿ ಹವೀಜ)
ಇದರಲ್ಲಿ (Volatile oil) ಸೂಕ್ಷ್ಮತೈಲವಿರುವುದರಿಂದ ಮತ್ತು ಸಾಂಬಾರ ಪದಾರ್ಥ ಗುಣಗಳ ಜತೆಗೆ ಒಂದು ಸುಗಂಧ ದ್ರವ್ಯವಾಗಿ ಬಳಸಲ್ಪಡುತ್ತದೆ. ಧಾನ್ಯಕವನ್ನು (ಬೀಜ) ಚೆನ್ನಾಗಿ ಕುಟ್ಟಿ ನೀರಿನಲ್ಲಿ ಕುದಿಸಿ-ಸೋಸಿ ಬಳಸುವುದರಿಂದ ಒಳ್ಳೆಯ ಸ್ಯಾನಿಟೈಸರ್‌ ದ್ರಾವಣವಾಗಿ ಬಳಸಬಹುದಾಗಿದೆ. ಇದು ಕ್ರಿಮಿನಾಶಕ ಗುಣ ಹೊಂದಿರುವುದರಿಂದ ಇದರ ಬೀಜ ಹಾಗೂ ಎಲೆಯಿಂದ ತಯಾರಿಸಿದ ತೈಲವನ್ನು ಸ್ಯಾನಿಟೈಸರ್‌ ಆಗಿ ಬಳಸಬಹುದಾಗಿದೆ.

ಕರ್ಪೂರ-ಪಚ್ಚ ಕರ್ಪೂರ
ಕರ್ಪೂರ ವೃಕ್ಷದ ನಿರ್ಯಾಸ (Gum Resin) ಒಂದು ಉತ್ತಮ ವಿಷಹರ (ಆ್ಯಂಟಿ ಟಾಕ್ಸಿಕ್‌) ಕ್ರಿಮಿಘ್ನ, ಜಂತುಹರ ದ್ರವ್ಯ. ಇದರಲ್ಲಿ ವೊಲಟೈಲ್‌ ಆಯಿಲ್‌ಗ‌ಳು ಸೂಕ್ಷ್ಮ ರೂಪದ ತೈಲಗಳು ಇರುವುದರಿಂದ ಸುಗಂಧಭರಿತವಾಗಿದೆ. ಕರ್ಪೂರ ಅಥವಾ ಪಚ್ಚ ಕರ್ಪೂರವನ್ನು ಪುಡಿ ಮಾಡಿ ಬಿಸಿ ನೀರಿನಲ್ಲಿ ಬೆರೆಸಿದರೆ – ಸ್ಯಾನಿಟೈಸರ್‌ ತಯಾರಾದಂತೆ.

ಇದರಿಂದ ಹಸ್ತ, ಪಾದ, ಮುಖ, ಶರೀರ ಪ್ರಕ್ಷಾಲನ ಕೂಡ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಕ್ಯಾಂಪೋರ್‌ ವಾಟರ್‌ ಮಾರುಕಟ್ಟೆಯನ್ನು ಪ್ರವೇಶಿಸಿ ಪವಾಡ ಸೃಷ್ಟಿ ಮಾಡಬಹುದು. ಕರ್ಪೂರ ತೈಲವು ಮಾರುಕಟ್ಟೆಯಲ್ಲಿ ಲಭ್ಯವಿದೆ.ಇದರಲ್ಲಿ Antifungal, Inflammatory, ಭಾರತೀಯ ಹೆಮ್ಮೆಯ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದಲ್ಲಿ ಸ್ನಾನ, ಪರಿಷೇಕ, ಪ್ರಕ್ಷಾಲನ, ಇತ್ಯಾದಿಗಳನ್ನು ದಿನಚರ್ಯದಲ್ಲಿಯೂ, ರೋಗ ಪರಿಚರ್ಯೆಯಲ್ಲಿ ಉಲ್ಲೇಖೀಸಿದ್ದು ಅದು ಪ್ರಚಲಿತವಾಗಿದೆ. ಬ್ಯಾಕ್ಟಿರೀಯಾ, ಫ‌ಂಗಸ್‌, ವೈರಸ್‌ಗಳ ಸೋಂಕುಗಳನ್ನು ತಡೆಗಟ್ಟುವಲ್ಲಿ ಈಗಿನ ಸ್ಯಾನಿಟೈಸರ್‌ಗಳನ್ನು ಔಷಧ ಸಸ್ಯಮೂಲಗಳಿಂದ ಉತ್ಪಾದಿಸಬಹುದೇ ಎಂಬ ಜಿಜ್ಞಾಸೆ ಮೂಡಿದೆ.

ರಾಸಾಯನಿಕ ಗಳಿಂದ (chemical) ತಯಾರಿಸಲ್ಪಟ್ಟ ಸ್ಯಾನಿಟೈಸರ್‌ಗಳ ಬಳಕೆ ಸೋಂಕುಗಳನ್ನು ತಡೆಗಟ್ಟುವಲ್ಲಿ, ನಿಯಂತ್ರಣದಲ್ಲಿ ಇರಿಸಲು ಉಪಯುಕ್ತವಾಗಿ ಕಂಡುಬಂದರೂ ಸಹ,  ಕೆಲ ದುಷ್ಪರಿಣಾಮಗಳು ವರದಿಯಾಗುತ್ತಿವೆ. ಚರ್ಮದಲ್ಲಿ ಅತಿಯಾದ ಉರಿ (Burning sensation), ತುರಿಕೆ, ಕೆಂಪಾಗುವಿಕೆ, ಚರ್ಮಸುಲಿಯಲ್ಪಡುವುದು, ಚರ್ಮದ ಬಣ್ಣ ಕಪ್ಪಾಗುವಿಕೆ ಹಾಗೂ ಅಲರ್ಜಿ ಮತ್ತು ಅಸ್ತಮಾ (ದಮ್ಮು) ಇರುವ ರೋಗಿಗಳಿಗೆ ಲಕ್ಷಣಗಳ ತೀವ್ರತೆ, ಮುಂದೊಂದು ದಿನ ಇನ್ನಿತರ ಅಪಾಯಕಾರಿ ಲಕ್ಷಣಗಳು ಹುಟ್ಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಗಿಡ-ಮೂಲಿಕೆಗಳಿಂದ ಉತ್ಪಾದನೆಗೊಳ್ಳುವ ಸ್ಯಾನಿಟೈಸರ್ ಮಾರುಕಟ್ಟೆಗೆ ಹೆಚ್ಚು ಹೆಚ್ಚು ಬರಬೇಕಿದೆ. ಮನೆಯಲ್ಲಿಯೇ ಇಂತಹ ಸ್ಯಾನಿಟೈಸರ್‌ ತಯಾರಿಸಬಹುದಾಗಿದೆ.


ಅರಿಷ್ಟಕ (ಅಂಟುವಾಳಕಾಯಿ – ರೀಟಾಫ‌ಲ-ಸೋಪ್‌ನಟ್‌)
ಹೆಸರೇ ಹೇಳುವಂತೆ ಇದು ‘ಸಾಬೂನು ಬೀಜ’ಹಳ್ಳಿಗಳಲ್ಲಿ ಇಂದಿಗೂ ಸಾಬೂನಿನ ಬದಲಾಗಿ ಅಂಟವಾಳಕಾಯಿ ಬಳಕೆಯಲ್ಲಿದೆ. ಸೋಪ್‌ನಟ್‌ ನಿಸ್ಸಂಶಯವಾಗಿ ಅದ್ಭುತ ಕ್ರಿಮಿನಾಶಕ, ಕೊಳೆನಾಶಕ, ಇದರಲ್ಲಿರುವ ಕ್ಷಾರೀಯ ಗುಣದಿಂದ ಸೂಕ್ಷ್ಮಾಣು (ಜೀವಾಣು) ನಾಶವಾಗುತ್ತದೆ. ಅಂಟವಾಳ ಕಾಯಿಯ ಸಿಪ್ಪೆಯನ್ನು ಜಜ್ಜಿ ನೀರಿನಲ್ಲಿ ಕುದಿಸಿದಾಗ ಲೀಟರ್‌ಗಟ್ಟಲೇ ದ್ರಾವಣ ತಯಾರಾಗುತ್ತದೆ. ಒಂದು ಅದ್ಭುತ ಸ್ಯಾನಿಟೈಸರ್‌.

ಶಿರೀಷ (ಬಾಗೆ) ಲ್‌ ಬೆಜಿಯಾ ಲಬ್ಬೇಕ್‌: ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಸ್ನಾನಯೋಗಗಲ್ಲಿ, ಧೂಪದ ಯೋಗಗಳಲ್ಲಿ ಶಿರೀಷ ಫ‌ಲ ಬೀಜಗಳನ್ನು ಬಳಸಲಾಗುತ್ತದೆ. ಶಿರೀಷ ಒಂದು ಅತ್ಯುತ್ತಮ ವಿಷಹರ ದ್ರವ್ಯ (ಆ್ಯಂಟಿ ಟಾಕ್ಸಿಕ್‌) ಹಲವಾರು ವಿಧದ ಚರ್ಮರೋಗಗಳಲ್ಲಿ, ವಿಷರೋಗದಲ್ಲಿ, ಶ್ವಾಸಕೋಶ ರೋಗಗಳಲ್ಲಿ ಶಿರೀಷ ಫ‌ಲ ಕಲ್ಪಗಳು ಬಳಕೆಯಲ್ಲಿವೆ.

ಶಿರೀಷ ಫ‌ಲ ಬೀಜಗಳನ್ನು ಕುಟ್ಟಿ ಪುಡಿ ಮಾಡಿ ಬಿಸಿನೀರಿನ ಜತೆಗೆ ಮಿಶ್ರಣಮಾಡಿ ಉಜ್ಜುವುದರಿಂದ ನೊರೆ ಬಂದು ಸಾಬೂನುಗಳ ತರಹ ಕೆಲಸ ಮಾಡುತ್ತದೆ. ಪ್ರಾಚೀನ ಭಾರತದ ಒಂದು ಅದ್ಭುತ ಸ್ಯಾನಿಟೈಸರ್‌ ಆಗಿದೆ. ಶಿರೀಷ ಫ‌ಲ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಉಪಯೋಗಿಸಿದರೆ, ಈಗ ಪ್ರಚಲಿತದಲ್ಲಿರುವ ಯಾವುದೇ ಸ್ಯಾನಿಟೈಸರ್‌ಗಳಿಗೆ ಪರ್ಯಾಯವಾಗಬಲ್ಲದು. ನೈಸರ್ಗಿಕವಾಗಿ ಶಿರೀಷದಲ್ಲಿ ವಿಷನಾಶಕ ಸ್ವಭಾವ ಇರುವುದರಿಂದ ಬ್ಯಾಕ್ಟೀರಿಯಾ, ಫ‌ಂಗಸ್‌, ವೈರಸ್‌ಗಳಿಂದ ಉಂಟಾಗುವ ಹಲವಾರು ಚರ್ಮರೋಗಗಳನ್ನು ತಡೆಗಟ್ಟುತ್ತದೆ ಮತ್ತು ನಿವಾರಿಸುತ್ತದೆ. ತಲೆಯ ಮೇಲಿನ ಹೊಟ್ಟು ನಿವಾರಕ, ತುರಿಕೆ ಕಡಿಮೆ ಮಾಡುತ್ತದೆ. ಉತ್ತಮ ಶ್ಯಾಂಪೂಗಳು, ಸಾಬೂನುಗಳು ಲಭ್ಯವಿದೆ. Body wash lotion ಆಗಿ ಹೆಚ್ಚಿನ ಮಹತ್ವ ಪಡೆದಿದೆ.

ಧಾನ್ಯಕ (ಕೊತ್ತಂಬರಿ ಹವೀಜ)
ಇದರಲ್ಲಿ (Volatile oil) ಸೂಕ್ಷ್ಮತೈಲವಿರುವುದರಿಂದ ಮತ್ತು ಸಾಂಬಾರ ಪದಾರ್ಥ ಗುಣಗಳ ಜತೆಗೆ ಒಂದು ಸುಗಂಧ ದ್ರವ್ಯವಾಗಿ ಬಳಸಲ್ಪಡುತ್ತದೆ. ಧಾನ್ಯಕವನ್ನು(ಬೀಜ) ಚೆನ್ನಾಗಿ ಕುಟ್ಟಿ ನೀರಿನಲ್ಲಿ ಕುದಿಸಿ-ಸೋಸಿ ಬಳಸುವುದರಿಂದ ಒಳ್ಳೆಯ ಸ್ಯಾನಿಟೈಸರ್‌ ದ್ರಾವಣವಾಗಿ ಬಳಸಬಹುದಾಗಿದೆ. ಇದು ಕ್ರಿಮಿನಾಶಕ ಗುಣ ಹೊಂದಿರುವುದರಿಂದ ಇದರ ಬೀಜ ಹಾಗೂ ಎಲೆಯಿಂದ ತಯಾರಿಸಿದ ತೈಲವನ್ನು ಸ್ಯಾನಿಟೈಸರ್‌ ಆಗಿ ಬಳಸಬಹುದಾಗಿದೆ.

ಕರ್ಪೂರ-ಪಚ್ಚ ಕರ್ಪೂರ
ಕರ್ಪೂರ ವೃಕ್ಷದ ನಿರ್ಯಾಸ (Gum Resin) ಒಂದು ಉತ್ತಮ ವಿಷಹರ (ಆ್ಯಂಟಿ ಟಾಕ್ಸಿಕ್‌) ಕ್ರಿಮಿಘ್ನ, ಜಂತುಹರ ದ್ರವ್ಯ. ಇದರಲ್ಲಿ ವೊಲಟೈಲ್‌ ಆಯಿಲ್‌ಗ‌ಳು ಸೂಕ್ಷ್ಮ ರೂಪದ ತೈಲಗಳು ಇರುವುದರಿಂದ ಸುಗಂಧಭರಿತವಾಗಿದೆ. ಕರ್ಪೂರ ಅಥವಾ ಪಚ್ಚ ಕರ್ಪೂರವನ್ನು ಪುಡಿ ಮಾಡಿ ಬಿಸಿ ನೀರಿನಲ್ಲಿ ಬೆರೆಸಿದರೆ – ಸ್ಯಾನಿಟೈಸರ್‌ ತಯಾರಾದಂತೆ. ಇದರಿಂದ ಹಸ್ತ, ಪಾದ, ಮುಖ, ಶರೀರ ಪ್ರಕ್ಷಾಲನ ಕೂಡ ಮಾಡಲಾಗುತ್ತದೆ.

ಮುಂದಿನ ದಿನಗಳಲ್ಲಿ ಕ್ಯಾಂಪೋರ್‌ ವಾಟರ್‌ ಮಾರುಕಟ್ಟೆಯನ್ನು ಪ್ರವೇಶಿಸಿ ಪವಾಡ ಸೃಷ್ಟಿ ಮಾಡಬಹುದು. ಕರ್ಪೂರ ತೈಲವು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ Antifungal, Inflammatory, Antihelmentic, Antibactirial ಗುಣಗಳಿದ್ದು, ಇದರಿಂದ ತೈಲವನ್ನು ಶೇಖರಿಸಿ, ಸ್ಯಾನಿಟೈಸರ್‌ ಆಗಿ ಬಳಸಬಹುದು. ಕರ್ಪೂರ ಮತ್ತು ತುಪ್ಪದ ಮಿಶ್ರಣವನ್ನು ಲೇಪನವಾಗಿ ಹಚ್ಚುವುದರಿಂದ ಗಾಯಗಳನ್ನು ಒಣಗಿಸಬಹುದು.

ನಿಂಬ-ಬೇವು (ನೀಮ್‌)
ಭಾರತದೇಶದ ಭೌಗೋಳಿಕತೆಯ ಒಂದು ವೈಶಿಷ್ಟéತೆ- ಬೇವು ಅಥವಾ ನಿಂಬ “ಬೇವಿನ ಮರಕ್ಕೆ-ಕ್ರಿಮಿಗಳು ಬರುವುದು ಅಪರೂಪ’ ಒಂದು ಅದ್ಭುತ ಆ್ಯಂಟಿ ಮೈಕ್ರೋಬಯೋಲ್‌- ಸೂಕ್ಷ್ಮ ಜೀವಾಣು ನಾಶಕವಾಗಿದೆ. ಬೇವಿನ ಎಲೆಯ ಕಷಾಯದಿಂದ ಸ್ನಾನ, ಪ್ರಕ್ಷಾಲನ, ಬೇವಿನ ತೊಗಟೆಯ ಕಷಾಯ ಕೂಡ ಅತ್ಯುತ್ತಮ ಜೀವಾಣು ನಾಶಕ. ಒಂದು ಸ್ಯಾನಿಟೈಸರ್‌ ಆಗಿ ಬಳಸಲ್ಪಡುವುದು. ಬೇವಿನ ಎಣ್ಣೆ ಆ್ಯಂಟಿ ಫ‌ಂಗಲ್‌, ಆ್ಯಂಟಿ ಬ್ಯಾಕ್ಟೀರಿಯಲ್‌ ಹಾಗೂ ಆ್ಯಂಟಿ ವೈರಲ್‌ ಗುಣಧರ್ಮವುಳ್ಳದ್ದು. ಬಿಸಿ ನೀರಿಗೆ ಬೇವಿನ ಎಣ್ಣೆಯನ್ನು ಮಿಶ್ರಮಾಡಿ ಕೈ ತೊಳೆಯಬಹುದಾಗಿದೆ. ಸಾಕಷ್ಟು ಸಾಬೂನುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈಗಾಗಲೇ ಶ್ಯಾಂಪೂ, ಲೋಶನ್‌ಗಳು ಮಾರುಕಟ್ಟೆಗೆ ಪ್ರವೇಶ ಪಡೆದಿವೆ.

ಹರಿದ್ರಾ-ಅರಿಶಿಣ-ಟರ್ಮರಿಕ್‌
ಹರಿದ್ರಾ ದಿನನಿತ್ಯ ಬಳಕೆಯಲ್ಲಿರುವ ಒಂದು ಸಾಂಬಾರ ಪದಾರ್ಥ. ಅತ್ಯುತ್ತಮ ವಿಷಹರ (ಆ್ಯಂಟಿ ಟಾಕ್ಸಿಕ್‌) ಅದ್ಭುತ ಆ್ಯಂಟಿ ಬಯೋಟಿಕ್‌ ಗುಣ ಧರ್ಮವುಳ್ಳದ್ದು. ಅರಿಶಿಣವನ್ನು ಕುಟ್ಟಿ ನೀರಿನಲ್ಲಿ ಚೆನ್ನಾಗಿ ಕುದಿಸಿ ತಯಾರಿಸಿದ ‘ಹರಿದ್ರಾಜಲ’ – ಟರ್ಮರಿಕ್‌ ವಾಟರ್‌ ಸ್ನಾನ, ಪ್ರಕ್ಷಾಲನ ಗಾಯಗಳನ್ನು ಒಣಗಿಸಲು ಬಳಸಲ್ಪಡುತ್ತದೆ. ಉತ್ತಮ ಸ್ಯಾನಿಟೈಸರ್‌ ಆಗಿದೆ. ಅದ್ಭುತ ವಿಷನಾಶಕ ಆಗಿದೆ. ಈಗಾಗಲೇ ಹರಿದ್ರಾ ಸಿದ್ಧ ಸಾಬೂನುಗಳು, ಸೌಂದರ್ಯವರ್ಧಕಗಳು ಲಭ್ಯವಿರುತ್ತವೆ. ತುರಿಕೆ ಮತ್ತು ಇನ್ನಿತರ ಚರ್ಮ ರೋಗಗಳಲ್ಲೂ ಉಪಯುಕ್ತವಾಗಿದೆ. ಸ್ವಲ್ಪ ನೀರಿನಲ್ಲಿ ಅರಿಶಿಣ ಕುದಿಸಿ ಬಾಯಿಯನ್ನು ಮುಕ್ಕಳಿಸುವುದರಿಂದ (ಗಂಡೂಷ) ವೈರಸ್‌ ಹಾಗೂ ಸೂಕ್ಷ್ಮ ಜೀವಾಣುಗಳಿಂದ ಉಂಟಾಗುವ ಸೋಂಕು ತಡೆಯುತ್ತದೆ ಮತ್ತು ನಿವಾರಿಸುತ್ತದೆ.

ಕರ್ಪೂರವಲ್ಲಿ
ಒಂದು ಉತ್ತಮಸಾಂಬಾರ ಪದಾರ್ಥ. ಈ ಗಿಡದ ಎಲೆಗಳನ್ನು ಚೆನ್ನಾಗಿ ಕಿವುಚುವುದರಿಂದ ಅದನ್ನೇ ಸ್ಯಾನಿಟೈಸರ್‌ ಆಗಿ ಬಳಸಬೇಕಾಗುತ್ತದೆ. ವೊಲೈಟಿಲ್‌ ಆಯಿಲ್‌ಗ‌ಳು ಅತ್ಯದ್ಭುತ ಪ್ರಮಾಣದಲ್ಲಿ ಇವೆ. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ನೀರನ್ನು ಸ್ಯಾನಿಟೈಸರ್‌ ಆಗಿ ಬಳಸಬಹುದು. ಇದರಲ್ಲಿ Antifungal, antibactirial ಗುಣಗಳಿದ್ದು, ಇದರ ಸ್ವರಸ ಹಾಗೂ ಕಚsಠಿಛಿ ಅನ್ನು ಮಾಡಿ ತಲೆಗೆ ಲೇಪವಾಗಿ ನೇವರಿಸಬಹುದು. ಇದರಿಂದ ಕುದಿಸಿದ ನೀರನ್ನು ಕವಲ ಹಾಗೂ ಗಂಡುಷ ಕರ್ಮಕ್ಕಾಗಿ ಬಳಸಬಹುದು.

ಏಲಾ ( ಏಲಕ್ಕಿ)


ಒಳ್ಳೆಯ ಒಂದು ಸುಗಂಧಭರಿತ ಖಾದ್ಯ ಪದಾರ್ಥ. ಆ್ಯಂಟಿ ಬ್ಯಾಕ್ಟೀರಿಯಾಸ್‌,ಆ್ಯಂಟಿ ವೈರಲ್‌ ಗುಣಧರ್ಮವುಳ್ಳದ್ದು. ಏಲಕ್ಕಿ ಬೀಜಗಳನ್ನು ಕುಟ್ಟಿ- ತೆಂಗಿನ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಸ್ಯಾನಿಟೈಸರ್‌ನಂತೆ ಉಪಯುಕ್ತ. ಏಲಾದಿ ಚೂರ್ಣ ಒಂದು ಉತ್ತಮ ಚರ್ಮರೋಗ ನಾಶಕ ಕಲ್ಪ. ಏಲಾದಿ ಮಲಹರ (ಮುಲಾಮು) ಏಲಾದಿ ತೈಲ ಮತ್ತು ಏಲಕ್ಕಿಯಿಂದ ಸಿದ್ಧವಾದ ಸಾಬೂನುಗಳು ಲಭ್ಯವಿದೆ. ಏಲಕ್ಕಿ ಪುಡಿಯನ್ನು ನೀರಿನಲ್ಲಿ ಕುದಿಸುವುದರಿಂದ ತುರಿಕೆ ನಾಶಕವಾಗಿ ಹಾಗೂ  ಸ್ಯಾನಿಟೈಸರ್‌ ಆಗಿ ಬಳಸಬಹುದು. ಇದೇ ನೀರನ್ನು ಬಾಯಿ ಮುಕ್ಕಳಿ ಸುವುದಕ್ಕೆ ಬಳಸುವುದರಿಂದ ಬಾಯಿಯ ಸ್ವಾಸ್ಥ್ಯ ಕಾಪಾಡಬಹುದು.

ಲವಂಗ-ಕ್ಲೂವ್‌
ಸುಗಂಧ ಭರಿತ ದ್ರವ್ಯಗಳಲ್ಲಿ ಹೆಸರುವಾಸಿ ಆ್ಯಂಟಿ ಬಯೋಟಿಕ್‌, ಆ್ಯಂಟಿ ವೈರಲ್‌. ಲವಂಗದ ಎಣ್ಣೆ ನೋವು ನಿವಾರಕ ಕೂಡ ಹೌದು. ಲವಂಗವನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲ ಉತ್ತಮ ಸ್ಯಾನಿಟೈಸರ್‌. ಲವಂಗ ಚೂರ್ಣವನ್ನು ನೀರಿನಲ್ಲಿ ಕುದಿಸಿ ಬಳಸುವುದರಿಂದ ಸ್ಯಾನಿಟೈಸರ್‌ ಆಗಿ ಬಳಸಬಹುದು. ಹಾಗೂ ಇದರಲ್ಲಿ Antifungal, antibactirial, Antiviral ಗುಣಗಳಿವೆ.

ನಿಂಬೆಹಣ್ಣು
ನಿಂಬೆ ಹಣ್ಣಿನ ರಸವನ್ನು ಬಿಸಿನೀರಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವುದರಿಂದ ಉತ್ತಮ ಸ್ಯಾನಿಟೈಸರ್‌ ಆಗುತ್ತದೆ. ಆಮ್ಲರಸ ಇರುವುದರಿಂದ ಅತ್ಯುತ್ತಮ ಕೊಳೆನಾಶಕ. ಅತ್ಯಂತ ಕಡಿಮೆ ವೆಚ್ಚದಲ್ಲಿ ಫೇಸ್‌ವಾಶ್‌, ಬಾಡಿವಾಶ್‌, ಲೋಶನ್‌ಗಳನ್ನು ತಯಾರಿಸಬಹುದು. ನಿಂಬೆಹಣ್ಣಿನ ರಸದಿಂದ ತಯಾರಿಸಿದ ಸಾಬೂನುಗಳು, ಪೌಡರ್‌ಗಳು ಪ್ರಖ್ಯಾತವಾಗಿದೆ. ಇದರಲ್ಲಿ ಕ್ರಿಮಿನಾಶಕ ಗುಣವಿದೆ. ನಿಂಬೆರಸ ಹಾಗೂ ಜೇನಿನ ಮಿಶ್ರಣವನ್ನು ಮುಖದ ಲೇಪನವಾಗಿ ಬಳಸಬಹುದು.

ತುಳಸಿ
ಇದರ ಎಲೆಗಳು ನಿಸ್ಸಂಶಯವಾಗಿ ಕ್ರಿಮಿಘ್ನ, ಆ್ಯಂಟಿ ವೈರಲ್‌, ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣಧರ್ಮವುಳ್ಳದ್ದು. ತುಳಸಿ ಎಲೆಯನ್ನು ಚೆನ್ನಾಗಿ ಜಜ್ಜಿ ಉಪಯೋಗಿಸಬೇಕು. ತುಳಸಿಯ ಎಲ್ಲಾ ಪ್ರಬೇಧಗಳನ್ನು ಸ್ಯಾನಿಟೈಸರ್‌ ಆಗಿ ಬಳಸಬಹುದು. ಇಂದಿನ ಯುಗದಲ್ಲಿ ತುಳಸಿಗಿಡ ಪವಾಡವನ್ನೇ ಸೃಷ್ಟಿಸಿದೆ. ಚರ್ಮರೋಗ ನಿವಾರಣೆಯಲ್ಲಿ ತುಳಸಿ ಅದ್ಭುತ ಪರಿಣಾಮಕಾರಿಯಾಗಿದೆ.

ತುಳಸಿ ಎಲೆಯಿಂದ ತಯಾರಿಸಿದ ತೈಲ ಆ್ಯಂಟಿ ಬಯೋಟಿಕ್‌ಮತ್ತು ಆ್ಯಂಟಿ ವೈರಲ್‌ ಗುಣಗಳನ್ನು ಹೊಂದಿವೆ. ತುಳಸಿ ಹಾಕಿ ಕುದಿಸಿದ ನೀರನ್ನು ಸ್ನಾನ ಹಾಗೂ ಮುಖದ ಪ್ರಕ್ಷಾಲನಕ್ಕಾಗಿ ಬಳಸಬಹುದು. ಅಲ್ಲದೇ ಪುದಿನಾ, ಅಜವಾನ ಇತ್ಯಾದಿಗಳೆಲ್ಲಾ ಅದ್ಭುತ ಸ್ಯಾನಿಟೈಸರ್‌ಗಳಾಗಿವೆ. ಬಿಸಿನೀರಿನ ಸೇವನೆ, ಬಿಸಿನೀರಿನ ಸ್ನಾನ, ಮುಖ ಪ್ರಕ್ಷಾಲನ, ಬಾಯಿಯನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸುವುದು, ಬಿಸಿ ನೀರಿನಿಂದ ಕೈ ಕಾಲು ತೊಳೆದುಕೊಳ್ಳುವುದು ಕೂಡಾ ಒಂದು ತರಹದ ಸ್ಯಾನಿಟೈಸೇಶನ್‌ ಆಗಿದೆ.

ಆಯುರ್ವೇದ ಶಾಸ್ತ್ರದಲ್ಲಿ ಬಳಕೆಯಲ್ಲಿರುವ ಷಡಂಗ ಪಾನೀಯ ಉಶೀರ, ಲಾವಂಚ, ಪರ್ಪಟ (ಕಲ್ಲು ಸಬ್ಬಸಿಗೆ) ಉದೀಚ್ಛ (ಸುಗಂಧಿಬೇರು), ಮುಸ್ತಾ (ಜೇರೆನ ಗಡ್ಡೆ), ನಾಗರ-ಶುಂಠಿ ಮತ್ತು ಚಂದನಗಳಿಂದ ಸಾಧಿತವಾದ ಈ ಪಾನೀಯ ಯೋಗ (ಕಷಾಯ) ಇಂದು ವಿಶೇಷ ಬಾಯಾರಿಕೆ ನಿವಾರಿಸುವ, ಜ್ವರ ನಿವಾರಕ ಕಲ್ಪನೆಯಾಗಿದ್ದು ಬಾಯಿಯನ್ನು ಗಂಟಲನ್ನು ಸ್ವಚ್ಛವಾಗಿಡುತ್ತದೆ.

ಮನೆಯಲ್ಲಿಯೇ ತಯಾರು ಹೇಗೆ?
100 ಗ್ರಾಂ ಬೇವಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದುಕೊಂಡು, ಅವುಗಳನ್ನು ಒಂದು ಲೀಟರ್‌ ನೀರಿನಲ್ಲಿ ಹಾಕಿ ಕುದಿಸಬೇಕು, ಚೆನ್ನಾಗಿ ಕುದಿಸಿದ ನೀರಿನಲ್ಲಿ 200ಗ್ರಾಂ (ಒಂದು ಹಿಡಿಯಷ್ಟು) ತುಳಸಿ ಎಲೆಗಳನ್ನು ಹಾಕಿ ಪುನಃ ಕುದಿಸಿ ತಣ್ಣಗಾಗಲು ಬಿಟ್ಟು, ನಂತರ ಆ ನೀರಿಗೆ ಪಟಕ (Alum) ಮತ್ತು ಕರ್ಪೂರ (Camphor) ಪುಡಿ ಮಾಡಿ ಹಾಕಬೇಕು. ಅರ್ಧಗಂಟೆ ನಂತರ ಈ ಮಿಶ್ರಣವನ್ನು ಸೋಸಿ ಬಾಟಲಿಯಲ್ಲಿ ತುಂಬಿ ಇಟ್ಟುಕೊಂಡು ತಾಸಿಗೊಮ್ಮೆ ಇದರಿಂದ ಕೈ ತೊಳೆಯುತ್ತ ಇರಬೇಕು.

ಕುಮಾರಿರಸಕ (Alovera) ಘೃತ (Ghee) ಹಾಗೂ ದುಷ್ಪರಿಣಾಮವಿಲ್ಲದಂತಹ ಯಾವುದಾದರೂ ಒಂದನ್ನು ಮಿಶ್ರಣ ಮಾಡಿ, ಸೀಸೆಯಲ್ಲಿ ತುಂಬಿಟ್ಟುಕೊಂಡು ಕೈ ತೊಳೆಯಲು ಉಪಯೋಗಿಸಬಹುದು. ಘಟಕವು ಉತ್ತಮ (Antiseptic) ದ್ರವ್ಯವಾಗಿದ್ದು, ಹಾಗೂ ಬ್ಯಾಕ್ಟಿರೀಯಾ ವಿರುದ್ಧ ಹೋರಾಡುವ ಗುಣ ಹೊಂದಿದೆ.

ಹೀಗೆ ಮನೆಯಲ್ಲಿ ರಾಸಾಯನಿಕ ರಹಿತವಾದ ಉತ್ತಮ ಪರಿಣಾಮಕಾರಿ ಫ‌ಲಿತಾಂಶ ನೀಡುವ ಕೈ ತೊಳೆಯಲು ಮನೆಯಲ್ಲಿಯೇ ಸ್ಯಾನಿಟೈಸರ್‌ ತಯಾರಿಸಿ ಉಪಯೋಗಿಸಿಕೊಳ್ಳುವುದರಿಂದ ಸರ್ಕಾರದ ಆದೇಶ ಪರಿಪಾಲನೆ ಜತೆಗೆ ಆರೋಗ್ಯಕರ ನಿಯಮ ಪಾಲಿಸಿದಂತಾಗುವುದು.


– ಡಾ| ಪ್ರಶಾಂತ್‌ ಎ.ಎಸ್‌, ಪ್ರಾಚಾರ್ಯರು, ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next