Advertisement

ಸಂಭ್ರಮ ಕಟ್ಟಿಕೊಡುವ ಡಿಜಿಟಲ್‌ ದೀಪಾವಳಿ

09:49 AM Oct 26, 2019 | Hari Prasad |

ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ, ಆಕಾಶದಲ್ಲಿ ಚಿಮ್ಮುವ ಬಾಣಬಿರುಸು, ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು ಕಾಣುತ್ತದೆ. ಆದರೆ ಪರಿಸರಕ್ಕೆ ಹಾನಿಯಾಗದಂತೆ, ಪಟಾಕಿಗೆ ಹಣ ವ್ಯಯ ಮಾಡದಂತೆ ಆಚರಿಸುವ ಡಿಜಿಟಲ್‌ ದೀಪಾವಳಿ ಬಗ್ಗೆ ನಿಮಗೆ ಗೊತ್ತಿದೆಯೇ, ಇಲ್ಲವಾದರೆ ಇಲ್ಲಿದೆ ಓದಿ.

Advertisement

ಗ್ರೀಟಿಂಗ್‌ ಕಾರ್ಡ್‌
ಹಬ್ಬದ ಶುಭಾಶಯ ತಿಳಿಸುವುದಕ್ಕಾಗಿ ನೀವು ದುಡ್ಡು ಖರ್ಚು ಮಾಡಿ ಶುಭಾಶಯ ಪತ್ರ ಖರೀದಿಸಬೇಕೆಂದು ಇಲ್ಲ. ಹೊರತಾಗಿ ನಿಮ್ಮ ಮೊಬೈಲ್‌ ಮೂಲಕ ಅಂದ-ಚಂದದ ಗ್ರೀಟಿಂಗ್‌ ಕಾರ್ಡ್‌ ಅನ್ನು ಮಾಡಬಹುದು. ಸರ್ಚ್‌ಬಾರ್‌ಗೆ ಹೋಗಿ ದೀಪಾವಳಿ ಡಿಜಿಟಲ್‌ ಗ್ರೀಟಿಂಗ್‌ ಕಾರ್ಡ್‌ ಎಂದು ಸರ್ಚ್‌ ಕೊಟ್ಟರೆ ಸಾಕು ಹತ್ತಾರು ಆ್ಯಪ್‌ ಗಳು ನಿಮ್ಮ ಕಣ್ಣ ಮುಂದೆ ಬರುತ್ತವೆ. ಇದು ಗೂಗಲ್‌ ಪ್ಲೇಸ್ಟೋರ್‌ನಲ್ಲೂ ಲಭ್ಯ ಇದೆ. ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ನಿಮ್ಮ ಫೋಟೋ ಸಮೇತ ಶುಭಾಶಯ ಸಂದೇಶವನ್ನು ಮತ್ತಷ್ಟು ಚಂದಾಗಾಣಿಸಿ ನಿಮ್ಮ ಆತ್ಮೀಯರಿಗೆ ಕಳುಹಿಸಿ.

ಲಕ್ಷ್ಮಿ ಪೂಜೆ ಅಪ್ಲಿಕೇಶನ್‌
ಲಕ್ಷ್ಮೀ ಪೂಜಾ ದೀಪಾವಳಿಯ ಪ್ರಮುಖ ಕಾರ್ಯಕ್ರಮ. ಆದರೆ ಹಲವರಿಗೆ ಈ ಪೂಜೆ ಕುರಿತು ಮಾಹಿತಿ ಕಡಿಮೆ ಇರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಒಂದು ದಾರಿ ಇದ್ದು, ಲಕ್ಷ್ಮಿ ಪೂಜಾ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಮಂತ್ರ ಮೊಳಗಿಸಿ.

ಘಮ ಘಮಿಸುವ ಅಡುಗೆ
ಹಬ್ಬ ಎಂದಾಕ್ಷಣ ರುಚಿ-ರುಚಿ ತಿನ್ನಿಸುಗಳು ನೆನಪಾಗುತ್ತದೆ. ಆದರೆ ಹಬ್ಬದ ಸಡಗರವನ್ನು ಆಸ್ವಾದಿಸುವುದೋ ಅಥವಾ ಅಡುಗೆ ಮನೆಯಲ್ಲಿ ತರಕಾರಿ ಎಚ್ಚುತ್ತಾ ಕಾಲ ಕಳೆಯುವುದೋ ಎಂಬ ಗೊಂದಲ ಇರುತ್ತದೆ. ಒಂದು ಹಬ್ಬದ ಅಡುಗೆ ಮಾಡುವುದಕ್ಕೆ ಹೋಗಿ ಹತ್ತಾರು ಪದಾರ್ಥಗಳನ್ನು ಮಿಸ್‌ ಮಾಡಿಕೊಳ್ಳಬೇಕಾಗುತ್ತಾದೆ. ಆದರೆ ಈ ಚಿಂತೆಗೆ ಮದ್ದು ನಮ್ಮಲ್ಲಿ ಇದ್ದು, ಅಮ್ಮ ಮಾಡಿದ ಕೈ ರುಚಿ ಅಂತಿರುವ ಆಹಾರ ಪದಾರ್ಥಗಳನ್ನು ಆನ್‌ಲೈನ್‌ ಮೂಲಕ ಖರೀದಿಸಿ ಕುಟುಂಬದೊಂದಿಗೆ ಹಬ್ಬದ ಖುಷಿಯನ್ನು ಆಸ್ವಾದಿಸಬಹುದಾಗಿದೆ.

ಡಿಜಿಟಲ್‌ ಪಟಾಕಿ
ಗೋ ಗ್ರೀನ್‌ ಅಂತ ಭಾಷಣ ಮಾಡಿ ನಾವು ಪಟಾಕಿ ಹೊಡೆದರೆ ಸರಿಯಾಗುತ್ತದೆಯೇ. ಅದಕ್ಕಾಗಿ ಪೈರ್‌ ಕ್ರ್ಯಾಕರ್‌ ಎಂಬ ಆಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮೂಲಕ ಪಟಾಕಿ ಹೊಡೆದಾಗ ಖುಷಿಯನ್ನು ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ಪರಿಸರ ಮಾಲಿನ್ಯವೂ ತಪ್ಪುತ್ತದೆ, ನಿಮ್ಮ ಗೋ ಗ್ರೀನ್‌ ಭಾಷಣಕ್ಕೆ ಒಂದು ಅರ್ಥವೂ ಸಿಗುತ್ತದೆ.

Advertisement

– ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next