Advertisement

34ನೇ ಜನ್ಮದಿನಕ್ಕೆ 34 ಸರಕಾರಿ ಶಾಲೆಗಳ ಅಭಿವೃದ್ಧಿ: ಸುರೇಶ್‌ ರೈನಾ ಸಂಕಲ್ಪ

11:01 PM Nov 23, 2020 | sudhir |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ ಶುಕ್ರವಾರ 34ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಉತ್ತರ ಪ್ರದೇಶ, ಜಮ್ಮು ಮತ್ತು ಎನ್‌ಸಿಆರ್‌ನ 34 ಸರಕಾರಿ ಶಾಲೆಗಳಿಗೆ ಕುಡಿಯುವ ನೀರಿನ ಸಹಿತ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಂಕಲ್ಪ ಮಾಡಿದ್ದಾರೆ.

Advertisement

ಮಗಳು ಗ್ರೇಸಿಯಾ ಹೆಸರಿನಿಂದ ರಚಿಸಿರುವ ಗ್ರೇಸಿಯಾ ರೈನಾ ಫೌಂಡೇಷನ್‌ (ಜಿಆರ್‌ಎಫ್) ಮೂಲಕ ಸುರೇಶ್‌ ರೈನಾ ಈ ಕೊಡುಗೆಯನ್ನು ನೀಡುತ್ತಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಈ ಫೌಂಡೇಷನ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕುಡಿಯುವ ನೀರು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಜತೆಗೆ ಸ್ಮಾರ್ಟ್‌ ಕ್ಲಾಸ್‌ ರೂಮ್‌ ವ್ಯವಸ್ಥೆಯನ್ನೂ ನಿರ್ಮಿಸಲಾಗುತ್ತದೆ. ಈ ಕೊಡುಗೆಯಿಂದ ದೇಶದ ಸುಮಾರು 10 ಸಾವಿರ ಮಕ್ಕಳಿಗೆ ನೆರವಾಗಲಿದೆ.

ಇದನ್ನೂ ಓದಿ:ಬಳ್ಳಾರಿ: ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅಧಿಕಾರ ವಹಿಸಿದ ಹತ್ತೇ ದಿನದಲ್ಲಿ ವರ್ಗಾವಣೆ

“ಈ ಕೊಡುಗೆಯ ಮೂಲಕ ನನ್ನ 34ನೇ ಜನ್ಮದಿನವನ್ನು ಆಚರಿಸಲು ಸಂತಸವಾಗುತ್ತಿದೆ. ಪ್ರತಿ ಮಗುವಿಗೂ ಗುಣ ಮಟ್ಟದ ಶಿಕ್ಷಣ ಸಿಗಬೇಕು. ಇದರೊಂದಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಗಳನ್ನು ಶಾಲೆಗಳಲ್ಲಿ ಪಡೆಯುವುದು ಕೂಡ ಅವರ ಹಕ್ಕು’ ಎಂದು ಸುರೇಶ್‌ ರೈನಾ ಹೇಳಿದ್ದಾರೆ.

Advertisement

ಕಳೆದ ಆ. 15ರಂದು ಅಂತಾ ರಾಷ್ಟ್ರೀಯ ಕ್ರಿಕೆಟ್‌ ವಿದಾಯ ಘೋಷಿಸಿದ್ದ ರೈನಾ, ವೈಯಕ್ತಿಕ ಕಾರಣದಿಂದಾಗಿ ಅರಬ್‌ ನಾಡಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಕೂಟದಿಂದ ಹೊರಗುಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವತ್ಛ ಭಾರತ್‌ ಅಭಿಯಾನಕ್ಕೆ ಉತ್ತರ ಪ್ರದೇಶದಲ್ಲಿ ರೈನಾ ಅವರು ಪ್ರಚಾರ ರಾಯಭಾರಿಯೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next