Advertisement

ವಿವೇಕಾನಂದರ ಬಗ್ಗೆ ಮಾತನಾಡಿದರೆ ಹಿಂದುತ್ವದ ಬಣ್ಣ

04:22 PM Oct 08, 2018 | |

ಹೊಸಪೇಟೆ: ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರೆ ಕೇಸರಿಕರಣ, ಹಿಂದೂತ್ವ ಎಂಬ ಬಣ್ಣ ಕಟ್ಟಲಾಗುತ್ತದೆ ಎಂದು ಯುವ ಬ್ರಿಗೇಡ್‌ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ತುಂಬಿದ ಸವಿನೆನಪಿಗಾಗಿ ನಗರದ ಮುನ್ಸಿಫ‌ಲ್‌ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಮತ್ತೂಮ್ಮೆ ದಿಗ್ವಿಜಯ ರಥಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣದ ಐದು ಪದಗಳು ಇಡೀ ವಿಶ್ವ ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು. ಆದರೆ, ಇತಂಹ ಯೋಧ ಸನ್ಯಾಸಿ ಕುರಿತು ಮಾತನಾಡಿದರೆ ಕೇಸರಿಕರಣ ಹಾಗೂ ಹಿಂದೂತ್ವದ ಬಣ್ಣ ಕಟ್ಟಲಾಗುತ್ತದೆ ಎಂದರು. 

ಇತರ್ಯಾರು ಹಿಂದೂ ಧರ್ಮ ಹಾಗೂ ಭಾರತ ಕುರಿತು ಮಾತನಾಡಿದರೆ ಸ್ವಾಮಿ ವಿವೇಕಾನಂದರು ಸಿಡಿದೇಳುತ್ತಿದ್ದರು. ಸ್ವಾಭಿಮಾನ ಭಾರತ ನಿರ್ಮಾಣ ಮಾಡುವ ಸಂಕಲ್ಪವನ್ನು ಅವರು ಹೊಂದಿದ್ದರು. ಸ್ವಾಮಿ ವಿವೇಕಾನಂದರ ಭಾಷಣದ ಐದು ಪದಗಳಿಂದ ಜಗತ್ತು ಭಾರತವನ್ನು ನೋಡುವ ದೃಷ್ಠಿಕೋನ ಬದಲಾಗಿತ್ತು. ಇತಂಹ ವೀರ ಸನ್ಯಾಸಿಯ ಭಾಷಣದ ಪುಸ್ತಕವನ್ನು ಓದುವ ಮೂಲಕ ಯುವಕರು, ಭಾರತವನ್ನು ಸ್ವಾಭಿಮಾನಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಕಂಕಣ ಬದ್ಧರಾಗಬೇಕು ಎಂದು ಕರೆ ನೀಡಿದರು.

ಹಡಗಲಿಯ ಹಾಲ ವೀರಪ್ಪಜ್ಜ ದಿಗ್ಗ್ವಿಜಯ ರಥಯಾತ್ರೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವಜನರು ಸ್ವಾಮಿ ವಿವೇಕಾನಂದರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. 

Advertisement

ನಗರದ ರಾವಕೃಷ್ಣ ಗೀತಾಶ್ರಮದ ಅಧ್ಯಕ್ಷ ಶ್ರೀ ಸುಮೇದಾನಂದ ಸ್ವಾಮೀಜಿ ಹಾಗೂ ಹಂಶಾಂಭ ಶಾರದಾಶ್ರಮದ ಅಧ್ಯಕ್ಷ ಶ್ರೀ ಮಾತಾ ಪ್ರಭೋದಮಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗುರುಪ್ರಸಾದ್‌ ಮಠ ಸ್ವಾಗತಿಸಿದರು. ಸಾಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕೊನೆಯಲ್ಲಿ ಒಂದೇ ಮಾತರಂ ಗೀತೆಯೊಂದಿಗೆ ಮುಕ್ತಾಯವಾಯಿತು. ನಗರದ ವಾಲ್ಮೀಕಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಶೋಭಯಾತ್ರೆ ನಡೆಯಿತು. ಯುವ ಬ್ರಿಗೇಡ್‌ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನವತಿಯಿಂದ
ಸಮಾರಂ»ಸಂಘಟಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next