Advertisement

‘ಬ್ರಿಟನ್‌ ಸಂಸತ್ತಲ್ಲಿ ಟ್ರಂಪ್‌ ಭಾಷಣ ಬೇಡ’

10:14 AM Feb 08, 2017 | Team Udayavani |

ಲಂಡನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬ್ರಿಟನ್‌ ಸಂಸತ್‌ನಲ್ಲಿ ಭಾಷಣ ಮಾಡಲು ಅವಕಾಶ ನೀಡಬಾರದೆಂದು ಬ್ರಿಟನ್‌ನ ಹೌಸ್‌ ಆಫ್ ಕಾಮನ್ಸ್‌ನ ಸ್ಪೀಕರ್‌ ಜಾನ್‌ ಬಕ್ರೌ ಆಗ್ರಹಿಸಿದ್ದಾರೆ. ಸಂಸತ್ತು ದೀರ್ಘ‌ ಕಾಲದಿಂದ ‘ಜನಾಂಗೀಯತೆ ವಿರೋಧಿ ಹಾಗೂ ಲಿಂಗಭೇದ ವಿರೋಧಿ’ ನೀತಿ ಅನುಸರಿಸುತ್ತಿದೆ. ಆದರೆ, ಡೊನಾಲ್ಡ್‌ ಟ್ರಂಪ್‌ ನಿಯಂತ್ರಣ ಕಳೆದುಕೊಂಡಿರುವ ವ್ಯಕ್ತಿಯಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

Advertisement

ನನಗೆ ಪುಟಿನ್‌ ಪರಿಚಯ ಇಲ್ಲ. ರಷ್ಯಾ ಜತೆ ಯಾವುದೇ ವ್ಯಾವಹಾರಿಕ ಸಂಬಂಧವೂ ಇಲ್ಲ. ನನ್ನ ವಿರೋಧಿಗಳು ಹುಚ್ಚು ಆರೋಪ ಮಾಡುತ್ತಿದ್ದಾರೆ.
– ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ನಾವು ಟ್ರಂಪ್‌ಗೆ ಥ್ಯಾಂಕ್ಸ್‌ ಹೇಳುತ್ತೇವೆ. ಏಕೆಂದರೆ ಅವರು ಅಮೆರಿಕದ ನೈಜ ಮುಖವನ್ನು ಬಯಲಿಗೆಳೆದಿದ್ದಾರೆ.
– ಅಯಾತೊಲ್ಲಾ ಅಲಿ, ಇರಾನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next