Advertisement

BJP ಯಿಂದಲೇ ಸ್ಪೀಕರ್‌: ಡೆಪ್ಯುಟಿ ಸ್ಥಾನ ಮಿತ್ರಪಕ್ಷಕ್ಕೆ?

01:26 AM Jun 18, 2024 | Team Udayavani |

ಹೊಸದಿಲ್ಲಿ: ಸಚಿವ ಸಂಪುಟದಲ್ಲಿ ಸಿಂಹಪಾಲು ಪಡೆದಿರುವ ಬಿಜೆಪಿಯು ಲೋಕಸಭೆ ಸ್ಪೀಕರ್‌ ಸ್ಥಾನದ ಮೇಲೂ ಕಣ್ಣಿಟ್ಟಿದೆ ಮತ್ತು ಡೆಪ್ಯುಟಿ ಸ್ಪೀಕರ್‌ ಸ್ಥಾನವನ್ನು ಮೈತ್ರಿ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯುಗೆ ಬಿಟ್ಟುಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಈ ಹಿಂದಿನ ಸುದ್ದಿಗಳ ಪ್ರಕಾರ, ಲೋಕಸಭೆ ಸ್ಪೀಕರ್‌ ಸ್ಥಾನ ಎನ್‌ಡಿಎ ಕೂಟದ ಪ್ರಮುಖ ಪಾಲುದಾರ ಪಕ್ಷ ಟಿಡಿಪಿ ಪಾಲಾಗಲಿದೆ ಎಂದು ಹೇಳಲಾಗುತ್ತಿತ್ತು.

Advertisement

ಸ್ಪೀಕರ್‌ ಸ್ಥಾನಕ್ಕೆ ಬಿಜೆಪಿಯ ಓಂ ಬಿರ್ಲಾ, ಡಿ.ಪುರಂದೇಶ್ವರಿ, ಬಿಜೆಡಿಯ ಭತೃಹರಿ ಮಹಾತೋ ಹೆಸರುಗಳು ಕೇಳಿ ಬರುತ್ತಿವೆ. 18ನೇ ಲೋಕಸಭೆಯ ನೂತನ ಸ್ಪೀಕರ್‌ ಆಯ್ಕೆ ಜೂನ್‌ 26ರಂದು ನಡೆಯಲಿದೆ. ಒಂದು ವೇಳೆ, ಡೆಪ್ಯುಟಿ ಸ್ಪೀಕರ್‌ ಹುದ್ದೆಯನ್ನು ವಿಪಕ್ಷ ಗಳಿಗೆ ಬಿಟ್ಟುಕೊಡ ದಿದ್ದರೆ, ಸ್ಪೀಕರ್‌ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಐಎನ್‌ಡಿಐಎ ಕೂಟವು ಮುಂದಾಗಿದೆ ಎನ್ನಲಾಗಿದೆ.

ಈ ನಡುವೆ, ಎನ್‌ಡಿಎ ನಾಯಕರು ಸಭೆ ಸೇರಿ ಈ ಬಗ್ಗೆ ಜೂ.22 ಅಥವಾ 23ರಂದು ಚರ್ಚಿ ಸಲಿ  ದ್ದಾರೆ ಎನ್ನಲಾ ಗಿದೆ. ಒಮ್ಮತದ ಆಧಾರದಲ್ಲಿ ಸ್ಪೀಕರ್‌ ಆಯ್ಕೆ ಯಾ ಗ ಬೇಕೆಂದು ಟಿಡಿಪಿ ಹೇಳಿದ್ದರೆ, ಬಿಜೆಪಿ ನಿರ್ಧಾರಕ್ಕೆ ಬದ್ಧ ಎಂದು ಜೆಡಿಯು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next