Advertisement
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಭೋಜನಾ ನಂತರ ಪ್ರತಿಪಕ್ಷ ನಾಯಕರು ಮಾತನಾಡುತ್ತಾರೆಂದು ಮೊದಲೇ ತಿಳಿಸಲಾಗಿತ್ತು. ಪ್ರತಿಪಕ್ಷ ನಾಯಕರು ಮಾತನಾಡುವಾಗ ಸಭಾನಾಯಕರು (ಸಿಎಂ) ಇರಲೇ ಬೇಕು. ಇಲ್ಲದಿದ್ದರೆ ಮಾತನಾಡಬೇಡಿ ಎಂದು ಪ್ರತಿಪಕ್ಷ ನಾಯಕರಿಗೆ ನಾನೇ ಹೇಳುತ್ತೇನೆ. ಈ ಸದನದ ರಕ್ಷಕನಾಗಿ ನಾನಿದ್ದೇನೆ. ಪ್ರತಿಪಕ್ಷ ನಾಯಕರು ಮಾತನಾಡುವಾಗ ಸಭಾನಾಯಕರು ಹಾಜರಿರುವುದು ಆ ಸ್ಥಾನಕ್ಕೆ ಕೊಡುವ ಗೌರವ ಎಂದರು.
Related Articles
ನೇರವಾಗಿ ವಿಷಯ ಪ್ರಸ್ತಾಪಿಸಬೇಕು, ಅನಗತ್ಯ ಉಪಪ್ರಶ್ನೆ ಕೇಳದಂತೆಯೂ ತಾಕೀತು ಮಾಡಿದರು.
Advertisement
ಸದನ ಆರಂಭವಾದ ಕೆಲ ಹೊತ್ತಿನಲ್ಲೇ ಪ್ರಶ್ನೋತ್ತರ ಕಲಾಪ ನಡೆಯದಿರುವ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಆಗ ಎದ್ದುನಿಂತು ಮಾತನಾಡಲಾರಂಭಿಸಿದ ಜೆಡಿಎಸ್‌ನ ಬೋಜೇಗೌಡರನ್ನು ತಡೆದ ಸಭಾಪತಿ, ಸದನದ ಗೌರವ ಕಾಪಾಡಬೇಕು. ಎಲ್ಲರೂ ಎದ್ದುನಿಂತು ಮಾತನಾಡುವುದು ಸರಿಯಲ್ಲ. ಪೀಠ ನೋಡಿ ಮಾತನಾಡಬೇಕೆ ಹೊರತು ಸದಸ್ಯರು ಪರಸ್ಪರ ಮಾತುಕತೆಯಲ್ಲಿ ತೊಡಗಬಾರದು ಎಂದು ತಾಕೀತು ಮಾಡಿದರು.
ಅಧಿಕಾರಿಗಳ ಗೈರು: ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ ಅಧಿಕಾರಿಗಳ ಗ್ಯಾಲರಿಯಲ್ಲಿಯಾರೊಬ್ಬ ಅಧಿಕಾರಿಯೂ ಇಲ್ಲದಿರುವುದನ್ನು ಗಮನಿಸಿದ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದರು. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯುತ್ತಿರುವಾಗಲೂ ಯಾವೊಬ್ಬ ಅಧಿಕಾರಿಯೂ ಇರುವುದಿಲ್ಲ ಎಂದರೆ ಹೇಗೆ? ಇಂತಹದ್ದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಅಧಿಕಾರಿಗಳ ಪಟ್ಟಿ ತರಿಸಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಭಾನಾಯಕಿ ಜಯಾಮಾಲ ಅವರಿಗೆ ಸೂಚನೆ ನೀಡಿದರು. ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕರ ನೇಮಕವಾದರೆ ಈ ಸಮಸ್ಯೆ ಇರುವುದಿಲ್ಲ ಎಂದರು. ಆ ಉಸಾಬರಿ ನಿಮಗ್ಯಾಕೆ ಎಂದು ಸಭಾಪತಿಯವರು ಪ್ರತಿಪಕ್ಷ ನಾಯಕರನ್ನು ಸುಮ್ಮನಾಗಿಸಿದರು. ಪ್ರಶ್ನೋತ್ತರ ಕಲಾಪ ಇಲ್ಲದಕ್ಕೆ ಆಕ್ಷೇಪ: ಕಲಾಪ ಆರಂಭವಾಗುತ್ತಿದ್ದಂತೆ ನಿಯಮ 330ಎ ಅಡಿ ವಿಷಯ ಪ್ರಸ್ತಾಪನೆಗೆ ಸಭಾಪತಿ ಅವಕಾಶ
ನೀಡುತ್ತಿದ್ದಂತೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಅರುಣ್ ಶಹಾಪುರ, ಪ್ರಶ್ನೋತ್ತರ ಕಲಾಪ ನಡೆಸದಿ ರುವುದು ಸರಿಯಲ್ಲ
ಎಂದರು. ಬಳಿಕ ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ, ಸರ್ಕಾರ ಟೇಕ್ ಆಫ್ ಆಗದ ಕಾರಣ ಟೀಕೆ ಮಾಡುವುದಿಲ್ಲ. ಪ್ರಶ್ನೋತ್ತರ ಕಲಾಪ ಇಲ್ಲದ
ಸದನ ನೋಡಿಯೇ ಇಲ್ಲ. ಇದರಿಂದ ಸದಸ್ಯರ ಹಕ್ಕುಚ್ಯುತಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಸದನ ಸಲಹಾ ಸಮಿತಿ
ಮೇಲ್ಮನೆ ಕಲಾಪಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ಸದನ ಸಲಹಾ ಸಮಿತಿ ರಚನೆಯಾಗಿದೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಸದನ ಸಲಹಾ ಸಮಿತಿ ರಚನೆಯಾಗಿದೆ. ಸಭಾ ನಾಯಕಿ ಡಾ.ಜಯಮಾಲಾ, ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನ ಎಸ್.ಆರ್.ಪಾಟೀಲ್, ಬಿಜೆಪಿಯ ಕೆ.ಬಿ.ಶಾಣಪ್ಪ, ಜೆಡಿಎಸ್‌ನ
ಕೆ.ಟಿ.ಶ್ರೀಕಂಠೇಗೌಡ ಸದಸ್ಯರಾಗಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದಿಟಛಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣ ಬೈರೇಗೌಡ ವಿಶೇಷ ಆಹ್ವಾನಿತರಾಗಿದ್ದಾರೆ.