ಹಾಸನ: ಬೀದಿ ಬದಿ ವ್ಯಾಪಾರ ನಡೆಸಲು ಅವಕಾಶ ಹಾಗೂ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್ಐ ನೇತೃತ್ವದಲ್ಲಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ನಗರದ ಎನ್.ಆರ್.ವೃತ್ತ ಮತ್ತು ಪ್ರವಾಸಿ ಮಂದಿರದ ಆಸು-ಪಾಸಿನಲ್ಲಿ ಕಳೆದ ಹತ್ತಾರು ವರ್ಷಗಳಿಂದಲೂ ಆರ್ಥಿಕವಾಗಿ ಹಿಂದುಳಿದವರು ಗಾಡಿಗಳಲ್ಲಿ ಕಾμ, ಟೀ, ತಿಂಡಿ, ಪಾನಿಪುರಿ, ತಂಪು ಪಾನೀಯ ವ್ಯಾಪಾರ, ಇನ್ನು ಕೆಲವರು ಚಪ್ಪಲಿ
ವ್ಯಾಪಾರ ಮತ್ತು ರಿಪೇರಿ, ಬಟ್ಟೆ ವ್ಯಾಪಾರ ಮಾಡಿ ಕೊಂಡು ಕುಟುಂಬ ಜೀವನ ನಡೆಸುತ್ತಿದ್ದರು.
ಆದರೆ, ಇಂತಹ ಬೀದಿ ಬದಿ ವ್ಯಾಪಾರಿಗಳನ್ನು ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆಯು ಯಾವುದೇ ಮುನ್ಸೂಚನೆ ದಿಢೀರನೆ ತೆರವುಗೊಳಿಸಿರುವುದು ಅಮಾನವೀಯ ಕ್ರಮವಾಗಿದೆ. ತೆರವು ಮಾಡುವಾಗ ವ್ಯಾಪಾರ ಗಾಡಿಯ, ಪೆಟ್ಟಿಗೆ ಅಂಗಡಿ ಗಳು ಜಖಂಗೊಂಡಿದೆ ಎಂದು ದೂರಿದರು.
ಬೀದಿಬದಿ ವ್ಯಾಪಾರ ಮಾಡುವವರ ರಕ್ಷಣೆಗಾಗಿ ಇರುವ ಕಾಯಿದೆ ಪ್ರಕಾರ ಸರ್ಕಾರವೇ ವ್ಯಾಪಾರಿಗಳಿಗೆ ಹಲವು ಸೌಲಭ್ಯ ಮತ್ತು ರಕ್ಷಣೆ ಒದಗಿಸಿ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಬೇಕು. ಅದರ ಬದಲು ದಿಢೀರನೆ ಬೀದಿ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿಸಿ ಬಡ ವ್ಯಾಪಾರದಾರ ಹೊಟ್ಟೆಯ ಮೇಲೆ ಹೊಡೆಯುತ್ತಿರುವುದು ಖಂಡನೀಯ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಎನ್.ಅರ್.ವೃತ್ತ ಮತ್ತು ಪ್ರವಾಸಿ ಮಂದಿರದ ಆಸುಪಾಸಿನಲ್ಲಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿರುವ ಬಡ ವ್ಯಾಪಾರದಾರರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಲಿ, ಪರಿಸರ ಮಲಿನವಾಗಲಿ ಆಗುತ್ತಿಲ್ಲ. ಆದ್ದರಿಂದ ಇದ್ದ ಜಾಗದಲ್ಲಿಯೇ ಬಡ ಬೀದಿ ಬದಿ ವ್ಯಾಪಾರಸ್ತರಿಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟು ಕುಟುಂಬದ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ಜೊತೆಗೆ ರಕ್ಷಣೆ ಮತ್ತು ಸೌಕರ್ಯ ನೀಡಬೇಕು ಮತ್ತು ಜಖಂ ಗೊಂಡಿರುವ ಗಾಡಿ ಹಾಗೂ ಸಲಕರಣೆಗಳು ನಷ್ಟ ವಾದವರಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಥ್ವಿ, ಜಿಲ್ಲಾ ಕಾರ್ಯದರ್ಶಿ ಅರವಿಂದ್, ಬೀದಿ ಬದಿ ವ್ಯಾಪಾರಸ್ಥರಾದ ಪ್ರಕಾಶ್, ಪರಮೇಶ್, ವಾಜೀದ್, ತೀರ್ಥಕುಮಾರ್, ಜ್ಞಾನೇ ಶ್ವರಿ, ಮಂಜುಳಾ, ಶರತ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.