Advertisement

Spam ಕರೆ ತಡೆಗೆ ನಿಯಮ: ಸಲಹೆ ನೀಡಲು ಆ.8 ಕೊನೇ ದಿನ

12:42 AM Jul 26, 2024 | Team Udayavani |

ಹೊಸದಿಲ್ಲಿ: ಅನಪೇಕ್ಷಿತ(Spam) ಕರೆಗಳು ಹಾಗೂ ಸಂದೇಶಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ ಸರಕಾರ ಮಾರ್ಗಸೂಚಿ ರಚಿಸುತ್ತಿದೆ. ಈ ಸಂಬಂಧ ಸಾರ್ವಜನಿಕರಿಂದ ಸಲಹೆ ಪಡೆಯುತ್ತಿದ್ದು, ಈ ಸಲಹೆಗಳನ್ನು ಸಲ್ಲಿಸಲು ನೀಡಿದ್ದ ಸಮಯಾವಕಾಶವನ್ನು ಆ.8ರ ವರೆಗೆ ವಿಸ್ತರಿಸಲಾಗಿದೆ. ಆಹಾರ ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಹಲವು ಸಂಘಟನೆ, ಒಕ್ಕೂಟ ಹಾಗೂ ಸಂಸ್ಥೆಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೇಳಿದ್ದ ಕಾರಣ ಈ ವಿಸ್ತರಣೆ ಮಾಡಲಾಗಿದೆ ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next