Advertisement
ಫ್ರಾನ್ಸ್‌ನ ಗಡಿ ಭಾಗದಲ್ಲಿರುವ ಸ್ಪೈನ್‌ನ ಅರಾಗೋನ್ ನಗರದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ. ಉರುಗ್ವೆ ಮತ್ತು ಪರಾಗ್ವೆಯ ಸಾವಿರಾರು ವಲಸೆ ಕೃಷಿ ಕಾರ್ಮಿಕರು ಇಲ್ಲಿನ ಪಶುಸಂಗೋಪನೆಯಲ್ಲಿ ದುಡಿಯುತ್ತಿದ್ದಾರೆ. ಕೋವಿಡ್ ಕಾಟದಿಂದಾಗಿ ಈಗ ಈ ಕಾರ್ಮಿಕರ ಬದುಕು ಅನಿಶ್ಚಿತತೆಯಲ್ಲಿದೆ.ಸರಕಾರವಾಗಲಿ, ಮಾಲಕರಾಗಲಿ ಅವರ ಕಷ್ಟಸುಖ ವಿಚಾರಿಸುತ್ತಿಲ್ಲ. ಒಂದು ರೀತಿಯ ನಿರಾಶ್ರಿತ ಜೀವನವನ್ನು ಅವರು ನಡೆಸುತ್ತಿದ್ದಾರೆ. ಸದ್ಯ ಎದುರಾಗಿರುವ ಬಿಕ್ಕಟ್ಟಿನಿಂದ ಯುರೋಪಿನ ಇತರ ಭಾಗಗಳಲ್ಲೂ ವಲಸೆ ಕೃಷಿ ಕಾರ್ಮಿಕರನ್ನು ಒಂದು ಸಮಸ್ಯೆ ಎಂದು ಪರಿಗಣಿಸಲಾಗುತ್ತಿದ್ದು, ಅವರನ್ನು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ. ಆದರೂ ಹೊಟ್ಟೆ ಪಾಡಿಗಾಗಿ ಲಾಕ್‌ಡೌನ್ ನಿಯಮ ಇದ್ದರೂ ಕೃಷಿ ಕಾರ್ಮಿಕರು ಕೆಲಸ ಅರಸಿ ಒಂದೆಡೆಯಿಂದ ಮತ್ತೂಂದೆಡೆಗೆ ತೆರಳುತ್ತಿದ್ದು, ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇತರ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿವೆ. ಸ್ಪೈನ್‌ನಲ್ಲಿ ಶೀಘ್ರವಾಗಿ ಉಣ್ಣೆಯನ್ನು ಬಿಡಿಸುವ ಕೆಲಸ ಪ್ರಾರಂಭವಾಗಬೇಕು. ಇಲ್ಲವಾದರೆ ಉತ್ಪತ್ತಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ. ಈ ಅನಿವಾರ್ಯತೆಗಾಗಿ ಒಂದಷ್ಟು ಕಾರ್ಮಿಕರನ್ನು ಉಳಿಸಿಕೊಳ್ಳಲಾಗಿದೆ.
ಅಯರ್‌ಲ್ಯಾಂಡ್‌ನಿಂದ ಇಟಲಿಗೆ ಮತ್ತು ಜರ್ಮನಿಯಿಂದ ರೊಮೇನಿಯಾಗೆ ಅವರು ಗಡಿ ದಾಟಿ ಬರುತ್ತಿದ್ದಾರೆ. ಆದರೆ ಈ ವೇಳೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಕಾರ್ಮಿಕರನ್ನು ಬರ ಮಾಡಿಕೊಳ್ಳುತ್ತಿರುವುದರಿಂದ
ಅವರಿಗೆ ಸೋಂಕು ತಗುಲುವ ಭಯ ಕಾಡುತ್ತಿದೆ.
Related Articles
ಜರ್ಮನಿ ಪೂರ್ವ ಯುರೋಪ್ ಭಾಗದಿಂದ ಇತ್ತೀಚೆಗೆ 30 ಸಾವಿರ ಕಾರ್ಮಿಕರನ್ನು ಕರೆಸಿಕೊಂಡಿದ್ದು, ಮೇ ಅಂತ್ಯದ ವೇಳೆಗೆ ಇನ್ನೂ 30,000 ಕಾರ್ಮಿಕರನ್ನು ಬರ ಮಾಡಿಕೊಳ್ಳುವ ಯೋಚನೆಯಲ್ಲಿದೆ. ಆದರೆ ಈಗ ಕೃಷಿ ಕಾರ್ಯಕ್ಕೆ ಕರೆಸಿಕೊಳ್ಳಲಾಗುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ನಿಯಮ ಸೇರಿದಂತೆ ಇತರೆ ಸುರಕ್ಷಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರ ಪ್ರಾಣವನ್ನು ಅಪಾಯಕ್ಕೊಡ್ಡಿದೆ.
Advertisement