Advertisement
ಸ್ಪೇನ್‌ನಲ್ಲಿ ಫುಟ್ಬಾಲ್ ಕೋಚ್ ಸಾವು ಕ್ರೀಡಾ ಪಟುಗಳು ಕೊರೊನಾ ತಪಾಸಣೆಗೆ ಒಳಗಾಗಿದ್ದನ್ನು ನೋಡಿದ್ದೇವೆ. ಆದರೆ ಸ್ಪೇನ್‌ನಲ್ಲಿ 21 ವರ್ಷದ ಫುಟ್‌ಬಾಲ್ ಕೋಚ್ ಫ್ರಾನ್ಸಿಸ್ಕೊ ಗಾರ್ಸಿಯಾ ಎನ್ನುವವರು ಕೊರೊನಾಕ್ಕೆ ಬಲಿಯಾಗಿದ್ದಾರೆ, ಕ್ರೀಡಾಲೋಕದಲ್ಲಿ ಕೊರೊನಾಕ್ಕೆ ಮೃತಪಟ್ಟ ಮೊದಲ ವ್ಯಕ್ತಿ ಆಗಿದ್ದಾರೆ. ಸ್ಪೇನ್‌ನ ಮಲಗ ಪ್ರಾದೇಶಿಕ ಆಸ್ಪತ್ರೆಯಲ್ಲಿ ಸ್ಪೇನ್ ಕೋಚ್ ಸಾವಿಗೀಡಾಗಿರುವುದನ್ನು ಸೆಕೆಂಡ್ ಡಿವಿಷನ್ ಕ್ಲಬ್ ಅಟ್ಲೆಟಿಕೊ ಪೋರ್ಟಾಡ ಅಲ್ಟಾ ಸ್ಪಷ್ಟಪಡಿಸಿದೆ. ಇವರಿಗೆ ರಕ್ತ ಕ್ಯಾನ್ಸರ್ ಇತ್ತು, ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದಾಗ ಕೊರೊನಾ ಸೋಂಕಿರುವುದು ಗೊತ್ತಾಗಿದೆ ಎನ್ನಲಾಗಿದೆ.
ಸ್ಪೇನ್‌ನ ಕ್ಲಬ್ ಫುಟ್ಬಾಲಿಗರಲ್ಲಿ ಶೇ.35ರಷ್ಟು ಆಟಗಾರರಿಗೆ ಕೊರೊನಾ ಸೋಂಕು ತಗುಲಿದೆಯಂತೆ, ಈ ವಿಷಯವನ್ನು ಅಲ್ಲಿನ ಕ್ಲಬ್‌ಗಳೇ ದೃಢಪಡಿಸಿವೆ. ಸೋಂಕಿನ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ, ಕೊರೊನಾ ತಗುಲಿರುವ ಆಟಗಾರರನ್ನು ಪ್ರತ್ಯೇಕಿಸುವ ಕಾರ್ಯ ಶುರುವಾಗಬೇಕಿದೆ. ಅದರಲ್ಲೂ ವೆಲೆನ್ಶಿಯಾ ಫುಟ್‌ಬಾಲ್ ಕ್ಲಬ್‌ನ ಹೆಚ್ಚಿನ ಆಟಗಾರರಿಗೆ ಕೊರೊನಾ ಸೋಂಕಿದೆ ಎನ್ನುವುದನ್ನು ಸ್ವತಃ ಕ್ಲಬ್ ಬಹಿರಂಗಪಡಿಸಿದೆ.
Related Articles
ಟೋಕಿಯೊ: ಜಪಾನ್‌ನಲ್ಲಿ ಒಲಿಂಪಿಕ್ಸ್ ಸಂಘಟಿಸುವ ಹೊಣೆ ವಹಿಸಿಕೊಂಡಿರುವ ಜಪಾನ್ ಒಲಿಂಪಿಕ್ಸ್ ಕಮಿಟಿಯ ಉಪ ಮುಖ್ಯಸ್ಥ ಕೊಝೊ ತಶಿಮಾ ಅವರಿಗೆ ಕೊರೊನಾ ಸೋಂಕು ತಟ್ಟಿದೆ. ಈ ಬೆಳವಣಿಗೆ ಟೋಕಿಯೊದಲ್ಲಿ ಒಲಿಂಪಿಕ್ಸ್ ನಡೆಸುವುದು ಎಷ್ಟು ಸುರಕ್ಷಿತ ಎಂಬ ಅನುಮಾನಕ್ಕೆ ಕಾರಣವಾಗಿದೆ.
Advertisement
ಜಪಾನ್ ಫುಟ್‌ಬಾಲ್ ಅಸೋಸಿಯೇಶನ್‌ನ ಮುಖ್ಯಸ್ಥರೂ ಆಗಿರುವ ತಶಿಮ ಅಸೋಸಿಯೇಶನ್ ಮೂಲಕ ನೀಡಿರುವ ಪ್ರಕಟನೆಯಲ್ಲಿ ತನಗೆ ಕೊರೊನಾ ಸೋಂಕು ತಗಲಿರುವುದನ್ನು ಬಹಿರಂಗ ಪಡಿಸಿದ್ದಾರೆ. ಸ್ವಲ್ಪ ಜ್ವರ ಬರುತ್ತಿತ್ತು. ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಾಗ ಕೊರೊನಾ ಪಾಸಿಟಿವ್ ಎಂದು ದೃಢ ಪಟ್ಟಿದೆ ಈಗ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇನೆ ಎಂದು ತಶಿಮ ಹೇಳಿಕೊಂಡಿದ್ದಾರೆ.
ತಶಿಮ ಫೆ. 28ರಿಂದೀಚೆಗೆ ವಿದೇಶ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಬೆಲ್ ಫಾಸ್ಟ್, ಆಮ್ ಸ್ಟರ್‌ಡಾಮ್, ಯುರೋಪ್, ಅಮೆರಿಕ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದಾರೆ. ಅಲ್ಲೆಲ್ಲ ಹಸ್ತಲಾಘವ, ಅಪ್ಪುಗೆ, ಬೈಸಸ್( ಕೆನ್ನೆಗೆ ಮುತ್ತಿಕ್ಕುವುದು) ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅಲ್ಲೇ ಎಲ್ಲೋ ಸೋಂಕು ತಗಲಿರುವ ಅನುಮಾನವಿದೆ.