Advertisement

ಎರಡನೇ ಹಂತದ ಕೋವಿಡ್ ತಡೆಗೆ ಯತ್ನ: ಸ್ಟೇನ್ ನಲ್ಲಿ ತುರ್ತು ಪರಿಸ್ಥಿತಿ, ಕರ್ಫ್ಯೂ ಜಾರಿ

03:27 PM Oct 28, 2020 | Nagendra Trasi |

ಸ್ಪೇನ್/ಮ್ಯಾಡ್ರಿಡ್: ಭಾರತದ ಹಲವೆಡೆ ಕೋವಿಡ್ 19 ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ ಸ್ಪೇನ್ ನಲ್ಲಿ ಎರಡನೇ ಹಂತದ ಕೋವಿಡ್ ಪ್ರಕರಣ ತಡೆಯುವ ನಿಟ್ಟಿನಲ್ಲಿ ಭಾನುವಾರದಂದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಮತ್ತು ಕ್ಯಾನರಿ ದ್ವೀಪ ಪ್ರದೇಶ ಹೊರತುಪಡಿಸಿ ಇಡೀ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.

Advertisement

ನೂತನವಾಗಿ ಘೋಷಿಸಿರುವ ತುರ್ತುಪರಿಸ್ಥಿತಿ ಮೇ ವರೆಗೆ ಮುಂದುವರಿಯಲಿದೆ ಎಂದು ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಝ್ ಟೆಲಿವಿಷನ್ ಭಾಷಣದಲ್ಲಿ ತಿಳಿಸಿದ್ದಾರೆ. ಕೋವಿಡ್ 19 ಸೋಂಕಿನ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿ ಮುಂದುವರಿದಿದೆ. ಇದರಿಂದ ಒತ್ತಡಕ್ಕೊಳಗಾಗುವಂತಾಗಿದೆ ಎಂದು ಹೇಳಿದರು.

ದೇಶದ ವಿವಿಧೆಡೆ ಕರ್ಫ್ಯೂ ವಿಧಿಸುವ ಬಗ್ಗೆ ಕರೆಗಳ ಮಾಹಿತಿಯನ್ನು ಅನುಸರಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆ! ಹಲವರಿಗೆ ನಿರಾಸೆ

ದೇಶಾದ್ಯಂತ ರಾತ್ರಿ 11ಗಂಟೆಯಿಂದ ಬೆಳಗ್ಗಿನ 6ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಪ್ರಸ್ತುತ 10ಗಂಟೆ ರಾತ್ರಿಯಿಂದ ಬೆಳಗ್ಗಿನ ಜಾವ 5ಗಂಟೆವರೆಗೆ ಕರ್ಫ್ಯೂ ವಿಧಿಸಲಾಗುತ್ತಿತ್ತು. ಕೋವಿಡ್ ಸೋಂಕಿನ ಪ್ರಮಾಣವನ್ನು ತಗ್ಗಿಸಲು ಸ್ಟೇಟ್ ಎಮರ್ಜೆನ್ಸಿ ತುಂಬಾ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದೆ.

Advertisement

ಸ್ಪೇನ್ ಆರಂಭದಲ್ಲಿ ಮಾರ್ಚ್ 15ರಿಂದ ಜೂನ್ 21ರವರೆಗೆ ಸ್ಟೇಟ್ ಎಮರ್ಜೆನ್ಸಿ ಹೇರಿ ಲಾಕ್ ಡೌನ್ ಘೋಷಿಸಿತ್ತು. ಅಲ್ಲದೇ ಯುರೋಪ್ ನಾದ್ಯಂತ ಕಠಿಣ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಎರಡನೇ ಹಂತದ ಕಠಿಣ ಲಾಕ್ ಡೌನ್ ಅನ್ನು ತಪ್ಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿರುವುದಾಗಿ ಪೆಡ್ರೋ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next