Advertisement

2.29 ಕೋಟಿ ರೂ. ಪಾವತಿಸಿ ಬಾಹ್ಯಾಕಾಶಕ್ಕೆ ನೆಗೆಯಿರಿ!

11:49 AM Sep 20, 2022 | Shreeram Nayak |

ಬೀಜಿಂಗ್‌: ಬಾಹ್ಯಾಕಾಶ ಪ್ರವಾಸೋದ್ಯಮ ಆರಂಭಕ್ಕೆ ಈಗ ಚೀನ ಅಣಿಯಾಗಿದೆ. 2025ರ ವೇಳೆಗೆ ಬಾಹ್ಯಾಕಾಶಕ್ಕೆ ಪ್ರವಾಸಿ ವಿಮಾನಗಳನ್ನು ಆರಂಭಿಸಲು ಚೀನ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ(ಸಿಎನ್‌ಎಸ್‌ಎ) ಮುಂದಾಗಿದೆ.

Advertisement

ಬಾಹ್ಯಾಕಾಶ ಪ್ರವಾಸಕ್ಕೆ ಪ್ರತಿ ಪ್ರಯಾಣಿಕನಿಗೆ 2,87,200 ಡಾಲರ್‌ನಿಂದ 4,30,800 ಡಾಲರ್‌ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

“ಬಾಹ್ಯಾಕಾಶ ಪ್ರವಾಸದ ಸಂದರ್ಭದಲ್ಲಿ ವಿಮಾನಗಳು ಪ್ರಯಾಣಿಕರನ್ನು ಭೂಮಿ ಮೇಲ್ಮೈ ಹೊರಗಿನ ಕರ್ಮನ್‌ ಲೈನ್‌ ವರೆಗೆ ಕರೆದುಕೊಂಡು ಹೋಗಿ, ವಾಪಸಾಗಲಿದೆ. ಭೂಮಿಯಿಂದ 100 ಕಿ.ಮೀ. ಎತ್ತರದಲ್ಲಿರುವ ಕರ್ಮನ್‌ ಲೈನ್‌ ಅನ್ನು ಬಾಹ್ಯಾಕಾಶದ ಆರಂಭ ಎಂದು ಪರಿಗಣಿಸಲಾಗುತ್ತದೆ,’ ಎಂದು ಬೀಜಿಂಗ್‌ ಮೂಲದ ರಾಕೆಟ್‌ ಕಂಪನಿ ಸಿಎಎಸ್‌ ಸ್ಪೇಸ್‌ ಸಂಸ್ಥಾಪಕ, ಹಿರಿಯ ರಾಕೆಟ್‌ ವಿಜ್ಞಾನಿ ಯಾಂಗ್‌ ಯಿಕಿಯಾಂಗ್‌ ಮಾಹಿತಿ ನೀಡಿದರು.

ಭವಿಷ್ಯದ ದಿನಗಳಲ್ಲಿ ಭಾರತ ಕೂಡ ಬ್ಯಾಹ್ಯಾಕಾಶ ಪ್ರವಾಸೋದ್ಯಮ ಆರಂಭಿಸುವ ಸುಳಿವನ್ನು ನೀಡಿದೆ. ಜೆಫ್ ಬೆಜೋಸ್‌ ಮತ್ತು ರಿಚರ್ಡ್‌ ಬ್ರಾನ್ಸನ್‌ ಕಂಪನಿಗಳು ಸ್ವಯಂ ಅಭಿವೃದ್ಧಿಪಡಿಸಿದ ರಾಕೆಟ್‌ಗಳನ್ನು ಬಾಹ್ಯಾಕಾಶಕ್ಕೆ ಹಾರಿಸಲು ಆರಂಭಿಸಿದ ನಂತರ ಬಾಹ್ಯಾಕಾಶ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಪರ್ಧೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next