Advertisement
ಬೈಂದೂರು ತಾಲೂಕಿನ ಕಾಲೊ¤àಡಿನಲ್ಲಿರುವ ಈ ಅಂಗನವಾಡಿಯಲ್ಲಿ ಒಟ್ಟು 50 ಮಂದಿ ಮಕ್ಕಳಿದ್ದಾರೆ. ಅದರಲ್ಲಿ 4-5 ಮಂದಿ ಗೈರಾದರೂ, 45 ಮಂದಿ ಮಕ್ಕಳಂತೂ ಪ್ರತಿನಿತ್ಯ ತಪ್ಪದೇ ಬರುತ್ತಾರೆ. ಆದರೆ ಈಗಿರುವ ಅಂಗನವಾಡಿ ಕಟ್ಟಡ ಸಣ್ಣದಾಗಿರುವುದರಿಂದ 50 ಮಂದಿ ವಿದ್ಯಾರ್ಥಿಗಳಿಗೆ ಇಲ್ಲಿ ಕಷ್ಟವಾಗುತ್ತಿದೆ.
ಕಾಲೊ¤àಡಿನಲ್ಲಿರುವ ಈ ಅಂಗನವಾಡಿ ಕಟ್ಟಡ ನಿರ್ಮಾಣವಾಗಿರುವುದು 30 ವರ್ಷಗಳ ಹಿಂದೆ. ಹೆಚ್ಚಿನ ಕಡೆಗಳಲ್ಲಿ ಅಂಗನವಾಡಿಗೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಇಲ್ಲಿ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದಾರೆ. ಆದರೆ ಸಣ್ಣ ಕಟ್ಟಡದಿಂದಾಗಿ ಪುಟಾಣಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಟ್ಟಡ/ವಿಸ್ತರಣೆ ಕ್ರಮ ಕೈಗೊಳ್ಳಿ
ನಮ್ಮ ಈ ಅಂಗನವಾಡಿ ಕಟ್ಟಡದಲ್ಲಿ ಒಂದು ಸಣ್ಣ ಅಡುಗೆ ಕೋಣೆ, ಮತ್ತೂಂದು ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳುತ್ತಾರೆ. ಅಲ್ಲಿಯೇ ಅವರ ಊಟ, ಆಟ, ಪಾಠ ಎಲ್ಲವೂ ನಡೆಯುತ್ತಿದೆ. 50 ಮಕ್ಕಳಿದ್ದರೂ, ಹೊಸದಾಗಿ ಕಟ್ಟಡ ಅಥವಾ ಇದನ್ನು ವಿಸ್ತರಿಸುವ ಕುರಿತಂತೆ ಯಾರೂ ಕೂಡ ಗಮನವೇ ಹರಿಸಿಲ್ಲ.
– ಮಂಜು ಪೂಜಾರಿ ಹಾಗೂ ಪ್ರತೀಶ್, ಕಾಲೊ¤àಡು
Related Articles
ಕಾಲೊ¤àಡಿನ ಈ ಅಂಗನವಾಡಿಯಲ್ಲಿ ಮಕ್ಕಳು ಪಡುತ್ತಿರುವ ಸಮಸ್ಯೆ ಕುರಿತು ಸೂಪರ್‌ವೈಸರ್‌ರಿಂದ ಮಾಹಿತಿ ಪಡೆಯಲಾಗುವುದು. ಈ ಸಮಸ್ಯೆ ಪರಿಹಾರಕ್ಕೆ ಇಲಾಖೆಯಿಂದ ಏನು ಮಾಡಬಹುದು ಎನ್ನುವುದನ್ನು ನಿರ್ಧರಿಸಲಾಗುವುದು.
– ನಿರಂಜನ್ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಅಧಿಕಾರಿ, ಕುಂದಾಪುರ
Advertisement
ಮಕ್ಕಳನ್ನು ಕಳುಹಿಸಲು ಹಿಂದೇಟುಗ್ರಾಮೀಣ ಪ್ರದೇಶವಾದ ಕಾಲೊ¤àಡಿನಲ್ಲಿ ಆಸುಪಾಸಿನಲ್ಲಿ ಬೇರೆಲ್ಲೂ ಅಂಗನವಾಡಿ ಇಲ್ಲದಿರುವುದರಿಂದ, ಇಲ್ಲಿ ಸ್ಥಳಾವಕಾಶದ ಸಮಸ್ಯೆಯಿದ್ದರೂ, ಅನಿವಾರ್ಯವಾಗಿ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಆದರೆ ಈಗ ಮಕ್ಕಳು ಇಲ್ಲಿ ಅನುಭವಿಸುತ್ತಿರುವ ಸಂಕಷ್ಟ ನೋಡಿ, ಕೆಲವರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.