Advertisement

ಬಾಹ್ಯಾಕಾಶ ಮಾರುಕಟ್ಟೆ :ರಾಜ್ಯಕ್ಕೆ ಶೇ. 50 ಪಾಲು ಗುರಿ

12:41 AM Nov 21, 2024 | Team Udayavani |

ಬೆಂಗಳೂರು: ಇಸ್ರೋ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಅವರು ಬಿಟಿಎಸ್‌-2024ರ ಸ್ಪೇಸ್‌ಟೆಕ್‌ ಅಧಿವೇಶನದಲ್ಲಿ ರಾಜ್ಯದ ಬಾಹ್ಯಾಕಾಶ ನೀತಿಯ ಕರಡನ್ನು ಬಿಡುಗಡೆಗೊಳಿಸಿದರು. ರಾಜ್ಯದ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಕರಡು ನೀತಿಯನ್ನು ರೂಪಿಸಿದೆ.

Advertisement

ಕರ್ನಾಟಕವು ಬಹು ಹಿಂದಿನಿಂದಲೂ ದೇಶದ ಬಾಹ್ಯಾ ಕಾಶ ಕ್ಷೇತ್ರಕ್ಕೆ ಅಗಾಧ ಕೊಡುಗೆ ನೀಡುತ್ತ ಬಂದಿದ್ದು ಭವಿಷ್ಯ ದಲ್ಲಿಯೂ ದೇಶದ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಸಿಂಹ ಪಾಲು ಪಡೆಯಬೇಕು ಎಂಬ ಆಶಯವನ್ನು ಈ ಕರಡು ನೀತಿ ಹೊಂದಿದೆ. ಹೊಸ ಬಾಹ್ಯಕಾಶ ಕಂಪೆನಿಗಳಿಗೆ ಬೆಂಗಳೂರು ಕೇಂದ್ರವಾಗಿ ಬೆಳೆದಿದ್ದು ದೇಶದಲ್ಲೇ ಅತಿ ಹೆಚ್ಚು ಸ್ಪೇಸ್‌ಟೆಕ್‌ ಕಂಪೆನಿಗಳು ಬೆಂಗಳೂರಿನಲ್ಲಿವೆ. ದೇಶದ ಬಾಹ್ಯಾಕಾಶ ಮಾರುಕಟ್ಟೆಯ ಶೇ. 50 ಮತ್ತು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯ ಶೇ. 5 ಪಾಲನ್ನು ಕರ್ನಾಟಕ ಹೊಂದಬೇಕು ಎಂಬ ಗುರಿಯನ್ನು ಬಾಹ್ಯಾಕಾಶ ನೀತಿ ಹೊಂದಿದೆ.

1,500 ಯುವತಿಯರು ಸೇರಿದಂತೆ ಒಟ್ಟು 5,000 ಮಂದಿ ವಿದ್ಯಾರ್ಥಿಗಳು, ಯುವಕರಿಗೆ ತರಬೇತಿ ನೀಡಿ, ಕೌಶಲ ತುಂಬಿ ಅವರನ್ನು ದೇಶ ಮತ್ತು ವಿದೇಶದ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಕೆಲಸಕ್ಕೆ ಅರ್ಹರನ್ನಾಗಿಸಬೇಕು. ಬಾಹ್ಯಾಕಾಶ ಪರಿಸರ ವ್ಯವಸ್ಥೆಗೆ 3 ಬಿಲಿಯನ್‌ ಅಮೆರಿಕನ್‌ ಡಾಲರ್‌ ಬಂಡವಾಳ ಸೆಳೆಯಬೇಕು. ರಾಜ್ಯದಲ್ಲಿ ಬಾಹ್ಯಾಕಾಶ ಉತ್ಪಾದನ ಕ್ಲಸ್ಟರ್‌ ಸ್ಥಾಪಿಸಬೇಕು. ಪರೀಕ್ಷಾ ಸೌಕರ್ಯ ಅಭಿವೃದ್ಧಿ ಪಡಿಸಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ.

ರಾಜ್ಯ ಸರಕಾರ 500 ನವೋದ್ಯಮ ಮತ್ತು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನಿಧಿ, ಅನುದಾನ ಸೇರಿದಂತೆ  ಅಗತ್ಯ ನೆರವು ನೀಡುವುದು ಮತ್ತು ರಾಜ್ಯ ಮೂಲದ ಸಂಸ್ಥೆಗಳು ಕನಿಷ್ಠ 50ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವುದು ಹಾಗೆಯೇ ಬಾಹ್ಯಾಕಾಶದಲ್ಲಿ ಬಳಸುವ ತಂತ್ರಜ್ಞಾನವನ್ನು ಸಮಾಜದ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಲು ಅಂತರ್‌ ವಿಭಾಗೀಯ ಸಮಿತಿಯೊಂದನ್ನು ಸ್ಥಾಪಿಸುವ ಬಗ್ಗೆ ಕರಡು ನೀತಿ ಪ್ರಸ್ತಾಪವಿಟ್ಟಿದೆ.

ಕಾರಿನ ಸೆನ್ಸಾರ್‌ ದೇಶದಲ್ಲೇ
ಉತ್ಪಾದಿಸಿ: ಇಸ್ರೋ ಅಧ್ಯಕ್ಷ ಕರೆ
ಬೆಂಗಳೂರು: ಭಾರತದಲ್ಲಿ ನಾವು ಅತಿ ಸೂಕ್ಷ್ಮವಾಗಿರುವ ರಾಕೆಟ್‌ ಸೆನ್ಸಾರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ನಮ್ಮ ರಾಕೆಟ್‌, ಉಪಗ್ರಹಗಳಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಆದರೆ, ಕಾರಿನ ಸೆನ್ಸಾರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಹೇಳಿದ್ದಾರೆ.

Advertisement

ರಾಕೆಟ್‌ಗಳ ಸೆನ್ಸಾರ್‌ ಉತ್ಪಾದಿಸುತ್ತಿರುವ ನಮಗೆ ಕಾರ್‌ ಸೆನ್ಸಾರ್‌ಗಳನ್ನು ಉತ್ಪಾದಿಸುವುದು ಕಷ್ಟವೇ? ಕಾರಿನ ಸೆನ್ಸಾರ್‌ ಸೇರಿದಂತೆ ದೇಶದೊಳಗೆ ಉತ್ಪಾದನೆ ವಸ್ತುಗಳನ್ನು ನಾವು ಹೆಚ್ಚಾಗಿ ಬಳಸಬೇಕು. ಇಂತಹ ತಂತ್ರಜ್ಞಾನಗಳ ಆಮದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.

2026ರ ವೇಳೆಗೆ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿ ಸು ವುದು, 2028ಕ್ಕೆ ಭಾರತದ್ದೇ ಒಂದು ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದು, 2040ರೊಳಗೆ ಚಂದ್ರನಲ್ಲಿ ಮನುಷ್ಯ ನನ್ನು ಇಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next