Advertisement
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿಯವರು ಕಾಂಗ್ರೆಸ್ಸಿಗರು ಮತ್ತು ಮುಖ್ಯಮಂತ್ರಿಯವರನ್ನು ಮೆಚ್ಚಿಸಲು ಸತ್ಯವನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ಬಂಧಿಸಲು 3 ವಾಹನಗಳಲ್ಲಿ 15ಕ್ಕೂ ಅಧಿಕ ಪೊಲೀಸರು ಬಂದಿದ್ದರೂ ಎಸ್‌ಪಿ ಕೇವಲ ಮೂವರು ಬಂದಿದ್ದರು ಎಂದಿದ್ದಾರೆ. ಎಷ್ಟು ಪೊಲೀಸರು ಬಂದಿದ್ದರು ಎಂಬುದಕ್ಕೆ ಸಿಸಿ ಕೆಮರಾ ದಾಖಲೆಗಳಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
Related Articles
Advertisement
ನ್ಯಾಯವಾದಿ ಕೆ. ಶಂಭು ಶರ್ಮ ಮಾತನಾಡಿ, ಪೊಲೀಸರು ಯಾವುದೇ ನೋಟಿಸ್ ನೀಡಿಲ್ಲ. ಸಂಜೆಯವರೆಗೂ ಠಾಣೆಗೆ ಬರಲು ಒತ್ತಾಯಿಸುತ್ತಿದ್ದರು. ಶಾಸಕರಿಗೆ ದಿಗ್ಬಂಧನ ಹಾಕಿದ್ದರು. ಎಸ್‌ಪಿ ಜತೆ ಪೋನ್‌ನಲ್ಲಿ ಮಾತನಾಡುವಾಗಲೂ ಏರಿದ ಸ್ವರದಲ್ಲೇ ಮಾತನಾಡಿದರು. ಅನಂತರ ಠಾಣೆಗೆ ಬರುವಂತೆ ಮನವಿ ಮಾಡಿದರು. ಅದರಂತೆ ಠಾಣೆಗೆ ಹೋಗಿ ಹೇಳಿಕೆ ನೀಡಿ ಬಂದಿದ್ದಾರೆ. ಬಂಧಿಸಿ ಜಾಮೀನಿನಲ್ಲಿ ಬಿಟ್ಟದ್ದು ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಈ ಪ್ರಕರಣ ದಲ್ಲಿ ಠಾಣೆಯಲ್ಲಿ ಜಾಮೀನು ನೀಡಲು ಬಾರದು. ಪೊಲೀಸರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದರು.
ಶಾಸಕರಾದ ಡಾ| ಭರತ್ ಶೆಟ್ಟಿ ವೈ., ವೇದವ್ಯಾಸ ಕಾಮತ್, ಭಾಗೀ ರಥಿ ಮುರುಳ್ಯ, ಪ್ರತಾಪ ಸಿಂಹ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕ್ಯಾ| ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.
ದ್ವೇಷದ ರಾಜಕಾರಣ: ನಳಿನ್ ಕುಮಾರ್ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಪೂಂಜಾ ಅವರ ಮೇಲೆ ಕೇಸ್ ಹಾಕಿದಾಗ ಅವರ ಮನೆಗೆ ಹೋಗಿದ್ದೆವು. ಆಗ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರೂ ಶಾಂತಿ ಯುತವಾಗಿತ್ತು. ಶಾಸಕರು ಹೇಳಿಕೆ ಕೊಡುವಂತೆ ಪೊಲೀಸರು ಕೇಳಿದರು. ಅದನ್ನು ಅಲ್ಲಿಯೇ ತೆಗೆದುಕೊಳ್ಳುವಂತೆ ಹೇಳಿದೆವು. ಆದರೆ ಠಾಣೆಗೆ ಬರಬೇಕು ಎಂದರು. ಅನಂತರ ಠಾಣೆಗೆ ಹೋಗಿ ಹೇಳಿಕೆ ನೀಡಲಾಗಿದೆ. ಶಾಸಕರನ್ನು ಬಂಧಿಸಿದ್ದಲ್ಲ, ಕಾನೂನಿಗೆ ಗೌರವ ಕೊಟ್ಟು ಹೇಳಿಕೆ ಕೊಟ್ಟು ಬಂದಿದ್ದಾರೆ. ಒಬ್ಬೊಬ್ಬರೇ ಶಾಸಕರನ್ನು ಗುರಿಯಾಗಿಸಿ ದ್ವೇಷ ಸಾಧಿಸುವುದು ಕಾಂಗ್ರೆಸ್‌ನ ತಂತ್ರಗಾರಿಕೆ. ಅದನ್ನು ಈಗ ಪೂಂಜಾ ಅವರ ಮುಖಾಂತರ ಆರಂಭಿಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.