ಹೊಸದಿಲ್ಲಿ: ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದಾಗ ಉಗ್ರರು ನಡೆಸಿದ ಬಾಂಬ್ ಸ್ಫೋಟ ಪ್ರಕರಣದ ನಂತರದಲ್ಲಿ ಜಮ್ಮುವಿನಿಂದ ಕಾಶ್ಮೀರ ಹಾಗೂ ಗಡಿಭಾಗಗಳಿಗೆ ಸೇನೆ ಸಿಬ್ಬಂದಿ ಸಾಗಣೆ ಮಾಡುವ ಕ್ರಮದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಲಾಗಿದೆ.
ಇದೀಗ ಎಸ್‌ಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲೇ ಸಿಬ್ಬಂದಿ ಸಾಗಣೆ ಮಾಡಬೇಕು ಎಂಬ ಹೊಸ ನಿಯಮವನ್ನು ವಿಧಿಸಲಾಗಿದೆ.ಸದ್ಯ ಎಎಸ್‌ಪಿ ದರ್ಜೆಯ ಅಧಿಕಾರಿಗಳು ಈ ಸಾಗಣೆ ತಂಡದ ನೇತೃತ್ವ ವಹಿಸುತ್ತಾರೆ.
ಅಲ್ಲದೆ, ಒಂದು ಬಾರಿಗೆ 40 ಕ್ಕಿಂತ ಹೆಚ್ಚು ವಾಹನಗಳಲ್ಲಿ ಸಿಬ್ಬಂದಿ ಸಾಗಣೆ ಮಾಡು ವಂತಿಲ್ಲ. ಅಷ್ಟೇ ಅಲ್ಲ, ವಾಹನಗಳಲ್ಲಿ ಸಿಬ್ಬಂದಿ ಕಾವಲಿಗೆ ನಿಯೋಜನೆ ಮಾಡಲಾಗುವ ಸಶಸ್ತ್ರ ರಕ್ಷಣಾ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸ ಲಾಗುತ್ತದೆ. ಇದರೊಂದಿಗೆ ಸುಮಾರು 70 ಕಿ.ಮೀ ಕಡಿಮೆ ದೂರದ ಇನ್ನೊಂದು ಮಾರ್ಗ ವನ್ನೂ ಸೇನೆ ಆಯ್ಕೆ ಮಾಡಿದ್ದು, ಈ ಮಾರ್ಗ ದಲ್ಲೇ ಬಸ್‌ಗಳು ಇನ್ನು ಸಂಚರಿಸಲಿವೆ.
ವಿಮಾನ ಪತನಕ್ಕೆ ತಪ್ಪು ದಾಳಿ ಕಾರಣ?: ಬಾಲಕೋಟ್‌ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿದ ಮರುದಿನ ಕಾಶ್ಮೀರದ ಬದ್ಗಾಂವ್‌ನಲ್ಲಿ 6 ಸಿಬ್ಬಂದಿ ಪ್ರಯಾಣಿಸು ತ್ತಿದ್ದ ಮಿಗ್ 17 ವಿಮಾನವೊಂದು ಪತನಗೊಂಡಿದ್ದಕ್ಕೆ, ಭಾರತೀಯ ದಾಳಿಯೇ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ವಿಮಾ ನವು ಐಎಫ್ಎಫ್ ವ್ಯವಸ್ಥೆಯನ್ನು ಆನ್ ಮಾಡಿರಲಿಲ್ಲ. ಹೀಗಾಗಿ ನಮ್ಮ ದೇಶದ ಯಾವುದೋ ವಿಮಾನದ ದಾಳಿಯಿಂದಲೇ ಈ ವಿಮಾನ ಪತನಗೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲ ಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ವಾಯು ಪಡೆ ವಕ್ತಾರರು ತಿಳಿಸಿದ್ದಾರೆ.