Advertisement

ಎಸ್ಪಿ ಕಚೇರಿ ನವೀಕರಣ: ಶೇ.80 ಕಾಮಗಾರಿ ಮುಕ್ತಾಯ

01:22 AM Jun 20, 2019 | Team Udayavani |

ಉಡುಪಿ: ಬನ್ನಂಜೆಯಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಮರು ನವೀಕರಣ ಕಾರ್ಯ ಶೇ. 80ರಷ್ಟು ಮುಕ್ತಾಯವಾಗಿದೆ.

Advertisement

2004ರಲ್ಲಿ ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೂತನ ಕಚೇರಿಯನ್ನು ಉದ್ಘಾಟಿಸಿದ್ದರು. ಅಂದು ಮುರುಗನ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಲಕ್ಷ್ಮಣ ಬಿ. ನಿಂಬರಗಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಯಾಗಿರುವ ಸಂದರ್ಭ ಸುಮಾರು 80 ಲ.ರೂ. ವೆಚ್ಚದಲ್ಲಿ ಜನವರಿಯಲ್ಲಿ ಮರು ನವೀಕರಣದ ಕಾರ್ಯ ಪ್ರಾರಂಭಿಸಿದರು.

ಏನೆಲ್ಲ ನವೀಕರಣಗೊಂಡಿದೆ?
ಶೌಚಗೃಹದ ನೆಲಹಾಸು ಸಂಪೂರ್ಣ ವಾಗಿ ಬದಲಾಯಿಸಲಾಗಿದೆ. ಸಭಾಂಗಣ ಹಾಗೂ ಕಚೇರಿಯಲ್ಲಿ ಪ್ರಸ್ತುತ ಅಗತ್ಯಕ್ಕೆ ತಕ್ಕಂತೆ ಪೀಠೊಪಕರಣಗಳನ್ನು ಬದಲಾಯಿಸಲಾಗಿದೆ. ಎಸಿ, ಫ್ಯಾನ್‌ ಹಾಗೂ ಹಾನಿಗೊಂಡ ವಯರಿಂಗ್‌ದುರಸ್ತಿಗೊಳಿಸಲಾಗಿದೆ.

ಎಸ್ಪಿ ಕೊಠಡಿ ಮುಂಭಾಗ ಟೈಲ್ಸ್‌ ಆಳವಡಿಸಲಾಗಿದೆ. ಪ್ರಸ್ತುತ ಕಚೇರಿ ಒಳಾಂಗಣದಲ್ಲಿ ಇರುವ ಗಾರ್ಡನ್‌ ಏರಿಯಾದ ಗೋಡೆಗಳ ಮೇಲೆ ಚಿತ್ತಾರ ಬಿಡಿಸಲಾಗುತ್ತಿದೆ. ಎಸ್ಪಿ ಕೊಠಡಿ ನವೀಕರಣ ಕಾರ್ಯ ಪ್ರಾರಂಭವಾಗಿದೆ.

ಶೀಘ್ರ ಮುಗಿಸಲು ಎಸ್ಪಿ ಸೂಚನೆ
ಕಚೇರಿ ಕಾಮಗಾರಿ ಶೇ. 80ರಷ್ಟು ಮುಕ್ತಾಯವಾಗಿದ್ದು, ಉಳಿದ ಕೆಲಸವನ್ನು ಶೀಘ್ರದಲ್ಲಿ ಮುಗಿಸುವಂತೆ ಸೂಚನೆ ನೀಡಲಾಗಿದೆ.
-ನಿಶಾ ಜೇಮ್ಸ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.