Advertisement

ಉತ್ತರ ಪ್ರದೇಶ : ಮರದಿಂದ ತೂಗುತ್ತಿದ್ದ ಎಸ್‌ಪಿ ನಾಯಕನ ಶವ ಪತ್ತೆ

04:30 PM Jan 31, 2017 | udayavani editorial |

ಗ್ರೇಟರ್‌ ನೋಯ್ಡಾ : ಸಮಾಜವಾದಿ ಪಕ್ಷದ ನಾಯಕನೋರ್ವನ ಶವವು ಇಲ್ಲಿನ ಸೂರಜ್‌ಪುರ ಪ್ರದೇಶದಲ್ಲಿ ಮರವೊಂದರಿಂದ ನೇತಾಡುತ್ತಿರುವುದು ಇಂದು ಕಂಡುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಮೃತ ವ್ಯಕ್ತಿ ಸಂಜಯ್‌ ನಗರ್‌ ಎಂಬಾತನ ಕುಟುಂಬದವರು ಮತ್ತು ಬೆಂಬಲಿಗರು ಹೇಳುವ ಪ್ರಕಾರ ಇದು ಕೊಲೆ ಕೃತ್ಯವಾಗಿದೆ.

ಸಂಜಯ್‌ ನಗರ್‌ ಈ ಹಿಂದೆ ರಾಜ್ಯ ಸಮಾಜವಾದಿ ಪಕ್ಷದ ಯುವ ಘಟಕದ ಕಾರ್ಯದರ್ಶಿಯಾಗಿದ್ದರು. ತಾನು ಸತ್ತ ಬಳಿಕ ತನ್ನ ಮಕ್ಕಳ ಹೊಣೆಗಾರಿಕೆ ವಹಿಸಿಕೊಳ್ಳುವಂತೆ ಸಂಜಯ್‌ ನಗರ್‌ ಹಿರಿಯ ಎಸ್‌ಪಿ ನಾಯಕರಾಗಿರುವ ರಾಜ್‌ಕುಮಾರ್‌ ಭಾಟಿ, ನರೇಂದ್ರ ನಗರ್‌ ಮತ್ತು ಇತರರನ್ನು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎನ್‌ ಪಿ ಸಿಂಗ್‌ ಅವರನ್ನು  ಕೋರಿ ಬರೆದಿಟ್ಟಿರುವ ಡೆತ್‌ ನೋಟ್‌ ಪೊಲೀಸರಿಗೆ ಸಿಕ್ಕಿದೆ.

ಮೂರು ದಿನಗಳ ಹಿಂದಷ್ಟೇ ಸಂಜಯ್‌ ನಗರ್‌ ಹಲವಾರು ವ್ಯಾಪಾರಿಗಳೊಂದಿಗೆ ಜಗಳವಾಡಿದ್ದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ; ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next