Advertisement

Fake Birth Certificate ಪ್ರಕರಣ-ಅಜಂ ಖಾನ್‌, ಪತ್ನಿ , ಪುತ್ರನಿಗೆ 7 ವರ್ಷ ಜೈಲುಶಿಕ್ಷೆ

05:12 PM Oct 18, 2023 | Team Udayavani |

ರಾಮ್‌ ಪುರ(ಉತ್ತರಪ್ರದೇಶ): ನಕಲಿ ಜನನ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಪ್ರಭಾವಿ ಮುಖಂಡ ಅಜಂ ಖಾನ್‌, ಪತ್ನಿ ತಾಂಜಿನ್‌ ಫಾತಿಮಾ ಹಾಗೂ ಪುತ್ರ ಅಬ್ದುಲ್ಲಾ ಅಜಂ ಖಾನ್‌ ಗೆ ರಾಮ್‌ ಪುರ ಕೋರ್ಟ್‌ ಏಳು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Gaza ಆಸ್ಪತ್ರೆ ದಾಳಿ; ಉಗ್ರರ ರಾಕೆಟ್ ಮಿಸ್ ಫೈರ್ ಆಗಿ ಅಮಾಯಕರು ಬಲಿ?

ಕೋರ್ಟ್‌ ತೀರ್ಪು ಪ್ರಕಟಿಸಿದ ಬಳಿಕ ಮೂವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ನೇರವಾಗಿ ಕೋರ್ಟ್‌ ನಿಂದ ಜೈಲಿಗೆ ಕರೆದೊಯ್ಯಲಾಗಿದೆ. ಪ್ರಕರಣದಲ್ಲಿ ದೋಷಿಗಳಾದ ಅಜಂ ಖಾನ್‌, ಪತ್ನಿ ತಾಂಜಿಮ್‌ ಫಾತಿಮಾ ಮತ್ತು ಪುತ್ರ ಅಬ್ದುಲ್ಲಾ ಅಜಂ ಖಾನ್‌ ಸೇರಿದಂತೆ ಮೂವರಿಗೂ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ, ತಲಾ 15,000 ಸಾವಿರ ರೂಪಾಯಿ ದಂಡ ವಿಧಿಸಿರುವುದಾಗಿ ವರದಿ ವಿರಿಸಿದೆ.

ಪ್ರಕರಣದ ಹಿನ್ನೆಲೆ:

ಅಬ್ದುಲ್ಲಾ ಅಜಂ ಖಾನ್‌ ಎರಡು ಜನನ ಪ್ರಮಾಣ ಪತ್ರ ಹೊಂದಿರುವುದಾಗಿ ಬಿಜೆಪಿ ಶಾಸಕ ಆಕಾಶ್‌ ಸಕ್ಸೇನಾ 2019ರಲ್ಲಿ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಅಜಂ ಖಾನ್‌ ಹಾಗೂ ತಂಜಿಮ್‌ ಖಾನ್‌ ಹೆಸರನ್ನೂ ಉಲ್ಲೇಖಿಸಲಾಗಿತ್ತು. ದೂರಿನ ಅನ್ವಯ ಮೂವರ ವಿರುದ್ಧ ಐಪಿಸಿ ಸೆಕ್ಷನ್‌ 420, 467. 468 ಮತ್ತು 471ರ ಅಡಿ ಪ್ರಕರಣ ದಾಖಲಿಸಲಾಗಿತ್ತು ಎಂದು ವರದಿ ತಿಳಿಸಿದೆ.

Advertisement

ಅಬ್ದುಲ್ಲಾ ಅಜಂ ಖಾನ್‌ ಗೆ ಲಕ್ನೋ ಮಹಾನಗರ ಪಾಲಿಕೆ ಮತ್ತು ರಾಮ್‌ ಪುರ ಮಹಾನಗರ ಪಾಲಿಕೆ ಜನನ ಪ್ರಮಾಣಪತ್ರವನ್ನು ನೀಡಿತ್ತು. ಅಬ್ದುಲ್ಲಾ ಅಜಂ ತನ್ನ ಮೊದಲ ಜನನ ಪ್ರಮಾಣಪತ್ರವನ್ನು ವಿದೇಶ ಪ್ರವಾಸದ ವೇಳೆ ಬಳಸಿದ್ದು, ಎರಡನೇ ಜನನ ಪ್ರಮಾಣಪತ್ರವನ್ನು ಸರ್ಕಾರಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿತ್ತು.

ತನಿಖೆಯ ವೇಳೆ ಎರಡೂ ಜನನ ಪ್ರಮಾಣಪತ್ರಗಳು ನಕಲಿ ಎಂಬುದು ಬಹಿರಂಗವಾಗಿತ್ತು. ಮೊದಲ ಜನನ ಪ್ರಮಾಣ ಪತ್ರ 1993, ಜನವರಿ 1ಎಂದು ನಮೂದಿಸಿದ್ದು, ಲಕ್ನೋ ಮಹಾನಗರ ಪಾಲಿಕೆ ನೀಡಿದ ಜನನ ಪ್ರಮಾಣ ಪತ್ರದಲ್ಲಿ 1990 ಸೆಪ್ಟೆಂಬರ್‌ 30 ಎಂದು ನಮೂದಿಸಿರುವ ಅಂಶವನ್ನು ಮಾಜಿ ಡಿಜಿಸಿ ಸಕ್ಸೇನಾ ಬಯಲಿಗೆಳೆದಿದ್ದರು.

ಅಜಂ ಖಾನ್‌ ಮತ್ತು ಅಬ್ದುಲ್ಲಾ 2019ರ ದ್ವೇಷ ಭಾಷಣದ ಪ್ರಕರಣದಲ್ಲೂ ದೋಷಿಗಳಾಗಿದ್ದರು. ನಕಲಿ ಜನನ ಪ್ರಮಾಣ ಪತ್ರದ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಬುಧವಾರ ರಾಮ್‌ ಪುರ್‌ ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next