Advertisement

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

08:35 PM Oct 05, 2024 | Team Udayavani |

ಧಾರವಾಡ: ರಾಜ್ಯದಲ್ಲಿ 43 ಸೆನ್‌ (ಸೈಬರ್‌ ಎಕಾನಾಮಿಕ್‌ ಮತ್ತು ನ್ಯಾರ್ಕೊಟಿಕ್ಸ್‌ ) ಠಾಣೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಡಿವೈಎಸ್‌ಪಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಎಸ್‌ಪಿ ಕೇಡರ್‌ ತೆರೆಯಲಾಗುವುದು ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹೇಳಿದರು.

Advertisement

ನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿ.ವಿ.ಗೆ ಭೇಟಿ ನೀಡಿ ಮಾತನಾಡಿ, ವಿಧಿ ವಿಜ್ಞಾನ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಉತ್ತಮ ತರಬೇತಿ ಪಡೆದ ಸಿಬಂದಿ ಪ್ರತ್ಯೇಕವಾಗಿ ನೇಮಿಸುವ ವಿಚಾರವಿದೆ ಎಂದರು.  ಪಿಎಸ್‌ಐ ನೇಮಕಾತಿಯಲ್ಲಿ 371ಜೆ ಅನ್ವಯಿಸಬೇಕು ಎಂದು ಕಲ್ಯಾಣ ಕರ್ನಾಟಕ ಭಾಗದ ಸಚಿವ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ ಮತ್ತು ಶರಣಪ್ರಕಾಶ ಪಾಟೀಲ್‌ ಒಕ್ಕೊರಲ ಧ್ವನಿ ಎತ್ತಿದ್ದು, ಶೇ. 8 ಮೀಸಲು ಕೇಳಿದ್ದಾರೆ. 2020ರಲ್ಲಿ ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಕರೆದು ನೇಮಕಾತಿ ವಿಳಂಬವಾಗಿ ಈಗ ನೇಮಕಾತಿ ನಡೆಯುತ್ತಿದೆ. 371ಜೆ 2023ರಿಂದ ಕಡ್ಡಾಯಗೊಂಡಿದೆ. ಹೀಗಾಗಿ ಇದು ಹಿಂದಿನ ನೇಮಕಾತಿ ಆದೇಶವಾಗಿದೆ. ಅನಂತರದ ಎಲ್ಲ ನೇಮಕಾತಿಗೂ ಇದು ಅನ್ವಯವಾಗಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next