ಲಕ್ನೋ : ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹೆದರಿ ಹೋಗಿದ್ದಾರೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಭಾನುವಾರ ಹೇಳಿಕೆ ನೀಡಿದ್ದಾರೆ.
ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟವನ್ನು ಮುರಿಯುವುದು ಅಸಾಧ್ಯವಾದ ಮಾತು ಎಂದು ಪ್ರಧಾನಿ ಅರ್ಥ ಮಾಡಿಕೊಳ್ಳಲಿ ಎಂದು ಮಾಯಾವತಿ ಹೇಳಿದರು.
ಹೆದರಿರುವ ಬಿಜೆಪಿ ಅಧಿಕಾರಯಂತ್ರವನ್ನು ದುರಪಯೋಗ ಪಡಿಸಿಕೊಂಡು ಮೈತ್ರಿಕೂಟವನ್ನು ಮುರಿಯಲು ಮುಂದಾಗಿದೆ ಎಂದು ಮಾಯಾವತಿ ಆರೋಪಿಸಿದರು.
ಇಲ್ಲಿವರೆಗೆ ಉತ್ತರಪ್ರದೇಶದಲ್ಲಿ ನಡೆದಿರುವ ನಾಲ್ಕು ಹಂತಗಳ ಮತದಾನದಲ್ಲಿ ನಮ್ಮ ಮೈತ್ರಿಕೂಟಕ್ಕೆ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.
ನಿರಂಕುಶಾಧಿಕಾರಿಯ ಸರ್ಕಾರ ಮೇ 23 ರಂದು ಪತನವಾಗುವುದು ಖಚಿತ ಎಂದು ಮಾಯಾವತಿ ಹೇಳಿದರು.