Advertisement

2006ರಲ್ಲಿ ಬಾಳೆಹೊನ್ನೂರು ಕ್ಷೇತ್ರದ ರಂಭಾಪುರಿ ಶ್ರೀಗಳಲ್ಲಿ ಗುಟ್ಟು ಹೇಳಿದ್ದ ಎಸ್ ಪಿಬಿ

06:38 PM Sep 25, 2020 | sudhir |

ಚಿಕ್ಕಮಗಳೂರು : ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ ರಂಭಾಪುರಿ ಶ್ರೀಗಳು ಎಸ್.ಪಿ.ಬಿ ಅವರು ಹಾಡಿದ ಗೀತೆಗಳು ಜನರ ಮನಸ್ಸಲ್ಲಿ ಹಚ್ಚ ಹಸಿರಾಗಿವೆ ಜಗದ್ಗುರು ರೇಣುಕಾಚಾರ್ಯರ ಶ್ಲೋಕಗಳನ್ನು ಜನರಿಗೆ ಮುಟ್ಟಿಸಿದ್ದಾರೆ ಎಲ್ಲ ವರ್ಗದವರ, ಸಮುದಾಯದ ಜನರಿಗೆ ಪ್ರೀತಿ ಪಾತ್ರರಾಗಿದ್ದ ಒಬ್ಬ ಶ್ರೇಷ್ಠ ಗಾಯಕರನ್ನು ಕಳೆದುಕೊಂಡ ಈ ನಾಡು ಬಡವಾಗಿದೆ ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರ ಶಾಂತಿ ನೀಡಲಿ ಎಂದು ರಂಭಾಪುರಿ ಶ್ರೀಗಳು ಸಂತಾಪ ಸೂಚಿಸಿದರು.

Advertisement

ಎಸ್.ಪಿ.ಬಿ ಬಗ್ಗೆ ಮಾತನಾಡಿದ ಶ್ರೀಗಳು ಬಾಳೆಹೊನ್ನೂರು ಕ್ಷೇತ್ರಕ್ಕೆ ಬಂದಿದ್ದ ಸಂದರ್ಭ ಅವರು ನನ್ನಲಿ ಒಂದು ಗುಟ್ಟನ್ನು ಹೇಳಿದ್ದರು ಎಂದು ಸ್ಮರಿಸಿಕೊಂಡರು ಅದೇನೆಂದರೆ 2006 ರಲ್ಲಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿಗೆ ರಸ ಮಂಜರಿ ಕಾರ್ಯಕ್ರಮಕ್ಕೆ ಬಂದಿದ್ದ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ರಂಭಾಪುರಿ ಪೀಠದಲ್ಲಿರುವ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಸ್ಥಾನ ದರ್ಶನಕ್ಕೆ ಬಂದಿದ್ದರು ಈ ಸಂದರ್ಭ ರಂಭಾಪುರಿ ಶ್ರೀಗಳಲ್ಲಿ ಒಂದು ಗುಟ್ಟನ್ನು ಹೇಳಿದ್ದ ಎಸ್.ಪಿ.ಬಿ ಅದೇನೆಂದರೆ ನನ್ನ ಹೆಸರು ಶ್ರೀಪತಿ ಪಂಡಿತರಾಧ್ಯ ಬಾಲಸುಬ್ರಹ್ಮಣ್ಯಂ, ನಾನು ಆರಾಧಿಸೋದೆ ವೀರಭದ್ರ ಸ್ವಾಮಿಯನ್ನ, ವೀರಭದ್ರ ಸ್ವಾಮಿಯನ್ನೇ ಆರಾಧಿಸುವ ಮನೆತನ ನಮ್ಮದು ಎಂದು ನನ್ನಲಿ ಹೇಳಿಕೊಂಡಿದ್ದರು ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಇದನ್ನೂ ಓದಿ :ಮೇಘಾಲಯದಲ್ಲಿ ಭೂ ಕುಸಿತ: ಮಹಿಳಾ ಕ್ರಿಕೆಟ್ ಆಟಗಾರ್ತಿ ಸಾವು, ಹಲವು ಮಂದಿ ನಾಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next